ಸಾಲಬಾಧೆಗೆ ರೈತ ಆತ್ಮಹತ್ಯೆ
ಮೈಸೂರು

ಸಾಲಬಾಧೆಗೆ ರೈತ ಆತ್ಮಹತ್ಯೆ

September 25, 2020

ಮೈಸೂರು, ಸೆ.24 (ಆರ್‍ಕೆ)- ಸಾಲಕ್ಕೆ ಹೆದರಿ ರೈತನೋರ್ವ ತನ್ನ ಜಮೀನಿನ ಮರ ವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರದಲ್ಲಿ ಸಂಭವಿಸಿದೆ. ಗ್ರಾಮದ ಬಸವರಾಜು ಎಂಬುವರ ಮಗ ಲಿಂಗರಾಜು (55) ಆತ್ಮಹತ್ಯೆಗೆ ಶರಣಾದವರು. 3 ಎಕರೆ ಖುಷ್ಕಿ ಜಮೀನು ಹೊಂದಿರುವ ಅವರು, ಹತ್ತಿ, ರಾಗಿ, ಜೋಳ ಬೆಳೆ ಬೆಳೆದಿ ದ್ದರು. ಆದರೆ ಬೆಳೆ ಕೈ ಹಿಡಿಯದಿದ್ದ ಕಾರಣ ಮಾಡಿದ್ದ ಸಾಲ ತೀರಿಸಲಾಗದೆ ಹೆದರಿ ತಮ್ಮ ಜಮೀನಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿ ದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರ ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸು ದಾರರಿಗೆ ಮೃತದೇಹವನ್ನು ಒಪ್ಪಿಸಿದರು.

Translate »