ಮೈಸೂರು,ಸೆ.24(ಪಿಎಂ)-ಕಾರ್ಮಿಕಪರ ಕಾನೂನು ಗಳ ಕಟ್ಟುನಿಟ್ಟು ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಗುರುವಾರ ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಎದುರು ಪತ್ರಿಭಟನೆ ನಡೆಸಿತು. ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕವೇ ಕಾರ್ಮಿಕಪರ ಕಾನೂನುಗಳನ್ನು ರದ್ದುಪಡಿಸುತ್ತಿದೆ. ಸರ್ಕಾರದ ಜನವಿರೋಧಿ ನೀತಿ ವಿರುದ್ಧ ದನಿ ಎತ್ತುವವರನ್ನು ಪ್ರತೀಕಾರಕ್ಕೆ ಗುರಿ ಮಾಡ ಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾರ್ಖಾನೆ ಕಾಯ್ದೆ, ಕೈಗಾರಿಕೆ ವಿವಾದಗಳ ಕಾಯ್ದೆ ಅಧ್ಯಾಯ 5 `ಬಿ’ಗೆ ತಿದ್ದುಪಡಿ ಸಂಬಂಧದ ಸುಗ್ರೀವಾಜ್ಞೆ ಹಿಂಪಡೆ ಯಬೇಕು. 2020-21ರ ಸಾಲಿನ ವ್ಯತ್ಯಸ್ಥ ತುಟ್ಟಿಭತ್ಯೆ ಕೂಡಲೇ ನೀಡಬೇಕು. ಕಾರ್ಮಿಕರಿಗೆ ಕನಿಷ್ಠ 21 ಸಾವಿರ ರೂ. ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ವೇತನ ಪೂರ್ಣ ಪಾವತಿಯಾಗ ಬೇಕು. ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು. ಸರ್ಕಾರ ಘೋಷಿಸಿದ 2,202 ಕೋಟಿ ರೂ. ಪರಿಹಾರದ ಪ್ಯಾಕೇಜನ್ನು 125ಕ್ಕೂ ಹೆಚ್ಚು ವಲಯಗಳ ಅಸಂಘಟಿತ ವಲಯದ ಕಾರ್ಮಿಕರಿಗೆ, ಸ್ವಉದ್ಯೋಗಿಗಳಿಗೂ ವಿಸ್ತರಿಸಬೇಕು. ಕೊರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕ ರಿಗೆ ಪಿಪಿಇ ಕಿಟ್ ಮತ್ತಿತರ ಸುರಕ್ಷತಾ ಸಾಮಗ್ರಿಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಬಡಕುಟುಂಬಗಳಿಗೆ ಕನಿಷ್ಠ 6 ತಿಂಗಳವರೆಗೆ ಮಾಸಿಕ 7,500 ರೂ. ಆರ್ಥಿಕ ನೆರವು ನೀಡಬೇಕು. ಮಾಸಿಕ ತಲಾ 10 ಕೆಜಿ ಆಹಾರ ಪದಾರ್ಥ ನೀಡಬೇಕು ಎಂದು ಆಗ್ರಹಿಸಿ ದರು. ಸಿಐಟಿಯು ಮುಖಂಡರಾದ ಬಾಲಾಜಿರಾವ್, ಮುರಳೀಧರ್ ಪೇಶ್ವ, ಸೋಮೇಶ್, ಬಸವಯ್ಯ, ಮೆಹ ಬೂಬ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.