ಮೈಸೂರು

ನಾಲ್ವರು ಖದೀಮರ ಬಂಧನ: 14.10 ಲಕ್ಷ ರೂ.   ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶ
ಮೈಸೂರು

ನಾಲ್ವರು ಖದೀಮರ ಬಂಧನ: 14.10 ಲಕ್ಷ ರೂ.  ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶ

September 27, 2020

ಮೈಸೂರು, ಸೆ.26(ಆರ್‍ಕೆ)- ಚಿನ್ನದ ಸರ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಸಂಬಂಧ ನಾಲ್ವರನ್ನು ಮೈಸೂರಿನ ಕೆ.ಆರ್. ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ಮಂಡಿಮೊಹಲ್ಲಾ, 2ನೇ ಈದ್ಗಾ ನಿವಾಸಿ ಅಮ್ಜದ್ ಮಗ ಮೊಹಮದ್ ಫರಾಜ್ ಅಲಿಯಾಸ್ ಸಾಹಿಲ್, ಅಲಿಯಾಸ್ ದೇವಿ(28), ಹುಣಸೂರು ಪಟ್ಟಣದ ಶಬೀರ್ ನಗರ ನಿವಾಸಿ ಸಮೀವುಲ್ಲಾ ಮಗ ನಿಮ್ರಾನ್ ಖಾನ್ ಅಲಿಯಾಸ್ ನಿಮ್ರಾನ್ (21), ಬೆಂಗ ಳೂರಿನ ಕೆ.ಜಿ. ಹಳ್ಳಿ ಭಾರತ ಮಾತಾ ಲೇಔಟ್ 4ನೇ ಕ್ರಾಸ್ ನಿವಾಸಿ ಕೌಸರ್‍ಖಾನ್ ಮಗ ಅರ್ಬಾಜ್ ಖಾನ್…

ಅರಮನೆ ಆವರಣದಲ್ಲಿ ದಸರಾ ಸಿದ್ಧತೆ: ಪ್ರಮುಖ ಆಕರ್ಷಣೆ ದೀಪಗಳ ಅಳವಡಿಕೆ, ದುರಸ್ತಿ
ಮೈಸೂರು

ಅರಮನೆ ಆವರಣದಲ್ಲಿ ದಸರಾ ಸಿದ್ಧತೆ: ಪ್ರಮುಖ ಆಕರ್ಷಣೆ ದೀಪಗಳ ಅಳವಡಿಕೆ, ದುರಸ್ತಿ

September 27, 2020

ಮೈಸೂರು, ಸೆ.26(ಎಸ್‍ಬಿಡಿ)- ಸರಳ ಹಾಗೂ ಸಾಂಪ್ರದಾಯಿಕ ದಸರಾಗೆ ಮೈಸೂರು ಅರಮನೆ ಆವರಣದಲ್ಲಿ ಸಿದ್ಧತೆ ಚುರುಕಾಗಿದೆ. ಅರಮನೆ ಮುಂಭಾಗದ ಉದ್ಯಾನಗಳು ಹಾಗೂ ರಸ್ತೆಯಲ್ಲಿರುವ ವಿದ್ಯುತ್ ದೀಪ ಗಳ ದುರಸ್ತಿ ಕಾರ್ಯ ನಡೆಯುತ್ತಿದೆ.  25 ಫೈವ್ ಲೈಟ್ಸ್ ಕಂಬಗಳು, 12 ಸೆವೆನ್ ಲೈಟ್ಸ್ ಕಂಬಗಳು, 250ಕ್ಕೂ ಹೆಚ್ಚು ಓಎಲ್‍ಪಿ ಕಂಬಗಳಿವೆ. ಈಗಾಗಲೇ ಕಂಬಗಳಿಗೆ ಬಣ್ಣ ಬಳಿಯುವ ಕಾರ್ಯ ಬಿರುಸಾಗಿ ಸಾಗಿದೆ. ಅಲ್ಲದೆ ವಿದ್ಯುತ್ ದೀಪಗಳ ದುರಸ್ತಿಗಾಗಿ ಕಬ್ಬಿಣದ ಕಾಲಾವದಿ ಅಳವಡಿಸಲಾಗುತ್ತಿದೆ. ಅರಮನೆ ಸುತ್ತಲಿನ ವಿದ್ಯುತ್ ದೀಪಗಳ ದುರಸ್ತಿ ಬಳಿಕ ಅರಮನೆ…

ಮೈಸೂರು ಜಿಲ್ಲೆಯಲ್ಲಿ ಮತ್ತೆ 73 ಮಂದಿಗೆ ಸೋಂಕು: ಸೋಂಕಿತರ ಸಂಖ್ಯೆ 32,348ಕ್ಕೇರಿಕೆ; 20 ಮಂದಿ ಗುಣಮುಖ, 6 ಸಾವು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮತ್ತೆ 73 ಮಂದಿಗೆ ಸೋಂಕು: ಸೋಂಕಿತರ ಸಂಖ್ಯೆ 32,348ಕ್ಕೇರಿಕೆ; 20 ಮಂದಿ ಗುಣಮುಖ, 6 ಸಾವು

September 27, 2020

ಮೈಸೂರು, ಸೆ.26(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಶನಿವಾರ 73 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 32,348ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಗುಣಮುಖರಾದ 20 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 26,081 ಮಂದಿ ಗುಣಮುಖರಾದಂತಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ 6 ಮಂದಿ ಸೋಂಕಿತರು ಮೃತಪಟ್ಟಿರುವುದಾಗಿ ಶನಿವಾರದ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 721ಕ್ಕೆ ಏರಿದೆ. ಇನ್ನೊಂದೆಡೆ 5,546 ಜನರಲ್ಲಿ ಇನ್ನೂ ಸೋಂಕು ಸಕ್ರಿಯವಾಗಿದೆ. ರಾಜ್ಯದ…

ರೈತರ ಪಾಲಿಗೆ ಭೂ ಸುಧಾರಣೆ ಕಾಯ್ದೆ ಕರಾಳ ಶಾಸನ, ಭೂತಾಯಿಗೆ ಮಾಡಿದ ದ್ರೋಹ: ಸಿದ್ದರಾಮಯ್ಯ
ಮೈಸೂರು

ರೈತರ ಪಾಲಿಗೆ ಭೂ ಸುಧಾರಣೆ ಕಾಯ್ದೆ ಕರಾಳ ಶಾಸನ, ಭೂತಾಯಿಗೆ ಮಾಡಿದ ದ್ರೋಹ: ಸಿದ್ದರಾಮಯ್ಯ

September 27, 2020

ಬೆಂಗಳೂರು, ಸೆ.26-ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದ ಕೊನೆ ಮೊಳೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಪರ್ಯಾಲೋ ಚನೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉದ್ಯಮಿ ಗಳು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ…

ಬಾಕಿ ಬಿಲ್ ಪಾವತಿಸುವವರೆಗೆ ಅ.3ರಿಂದ ಕಾಮಗಾರಿ ಸ್ಥಗಿತ
ಮೈಸೂರು

ಬಾಕಿ ಬಿಲ್ ಪಾವತಿಸುವವರೆಗೆ ಅ.3ರಿಂದ ಕಾಮಗಾರಿ ಸ್ಥಗಿತ

September 27, 2020

ಮೈಸೂರು ಪಾಲಿಕೆ ಗುತ್ತಿಗೆದಾರರ ಸಂಘದ ಎಚ್ಚರಿಕೆ ಮೈಸೂರು, ಸೆ. 26(ಆರ್‍ಕೆ)- ಅಕ್ಟೋಬರ್ 3ರಿಂದ ಬಾಕಿ ಬಿಲ್ ಪಾವತಿಸು ವವರೆಗೆ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಸಿವಿಲ್ ಗುತ್ತಿಗೆದಾರರ ಸಂಘವು ಎಚ್ಚರಿಕೆ ನೀಡಿದೆ. ಗುತ್ತಿಗೆ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ತಾವು ಸಾಲದ ಒತ್ತಡಕ್ಕೆ ಸಿಲುಕಿ ಮಾನಸಿಕ ಖಿನ್ನತೆಗೊಳಗಾಗಿದ್ದು, ಮಾಡಿರುವ ಕಾಮಗಾರಿಯ ಹಣ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ, ಅಕ್ಟೋಬರ್ 3ರಿಂದ ಕಾಮಗಾರಿ ಸ್ಥಗಿತಗೊಳಿಸಲು ಮೈಸೂರು ಮಹಾ ನಗರ ಪಾಲಿಕೆ ಸಿವಿಲ್ ಗುತ್ತಿಗೆದಾರರ…

ಸೆ.28ರ ಕರ್ನಾಟಕ ಬಂದ್‍ಗೆ ಹಲವು  ಸಂಘಟನೆಗಳ ಬೆಂಬಲ: ಹೋರಾಟ ಸಮಿತಿ
ಮೈಸೂರು

ಸೆ.28ರ ಕರ್ನಾಟಕ ಬಂದ್‍ಗೆ ಹಲವು  ಸಂಘಟನೆಗಳ ಬೆಂಬಲ: ಹೋರಾಟ ಸಮಿತಿ

September 27, 2020

ಮೈಸೂರು, ಸೆ.26(ಎಂಟಿವೈ)- ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಬಂಡವಾಳಶಾಹಿಗಳಿಗೆ ಮಣೆ ಹಾಕಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ್ದು ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಎಂದು ಖಂಡಿಸಿ ಸೆ.28ರಂದು ಕರೆ ನೀಡಿರುವ `ಕರ್ನಾಟಕ ಬಂದ್’ಗೆ ಮೈಸೂರಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿವೆ ಎಂದು ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಮುಖಂಡ  ಹೊಸಕೋಟೆ ಬಸವರಾಜು ಮೈಸೂರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೆ.28ರ ಕರ್ನಾಟಕ ಬಂದ್‍ಗೆ ಮೈಸೂರಲ್ಲಿ ಪ್ರಗತಿಪರ ಸಂಘಟನೆ, ಕನ್ನಡ…

ನಾಳಿನ SSLC ಪೂರಕ ಪರೀಕ್ಷೆ ಮುಂದೂಡಿಕೆ
ಮೈಸೂರು

ನಾಳಿನ SSLC ಪೂರಕ ಪರೀಕ್ಷೆ ಮುಂದೂಡಿಕೆ

September 27, 2020

ಬೆಂಗಳೂರು, ಸೆ.26- ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಮಸೂದೆ ಗಳನ್ನು ವಿರೋಧಿಸಿ ಸೆ.28ಕ್ಕೆ ವಿವಿಧ ರೈತ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಈ ಹಿನ್ನೆಲೆ ಯಲ್ಲಿ ಸೆ.28ರಂದು ನಡೆಯಬೇಕಿದ್ದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯನ್ನು ಸೆ.29ಕ್ಕೆ ಮುಂದೂಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇಂದು (ಶನಿ ವಾರ) ಸುತ್ತೋಲೆ ಹೊರಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರ ಡಿಸಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಸೆ.28ರಂದು ವಿಜ್ಞಾನ, ರಾಜ್ಯಶಾಸ್ತ್ರ, ಮಧ್ಯಾಹ್ನ ಕರ್ನಾಟಕ ಸಂಗೀತ,…

ಶಿಕ್ಷಕರಿಗೆ ಉಚಿತ ಕೋವಿಡ್ ತಪಾಸಣೆ: ಡಿಡಿಪಿಐ ಸೂಚನೆ
ಮೈಸೂರು

ಶಿಕ್ಷಕರಿಗೆ ಉಚಿತ ಕೋವಿಡ್ ತಪಾಸಣೆ: ಡಿಡಿಪಿಐ ಸೂಚನೆ

September 27, 2020

ಮೈಸೂರು, ಸೆ.26(ಎಸ್‍ಪಿಎನ್)- ಮೈಸೂರು ಜಿಲ್ಲೆಯ ಎಲ್ಲಾ ಶಿಕ್ಷಕರು ಕೋವಿಡ್-19 ಪರೀಕ್ಷೆಯನ್ನು ಉಚಿತವಾಗಿ ಮಾಡಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ ಸೂಚಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಮೌಖಿಕ ಆದೇಶದ ಮೇರೆಗೆ ಈ ಸೂಚನೆ ಹೊರಡಿಸಿದ್ದು, ಜಿಲ್ಲೆಯ ಕ್ಷೇತ್ರ ಶಿಕ್ಷಣಾ ಧಿಕಾರಿಗಳು, ತಾಲೂಕಿನ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಕೋವಿಡ್-19 ಪರೀಕ್ಷೆಗೆ ಒಳಪಡಲು ಸಹಕರಿಸಬೇಕು. ಸಮಯಾವಕಾಶ ಪಡೆದು ಸೆ.30ರೊಳಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.      

ತಿ.ನರಸೀಪುರದಲ್ಲಿ 750 ಕೆಜಿ ತೂಕದ ಮೊಸಳೆ ಸೆರೆ
ಮೈಸೂರು

ತಿ.ನರಸೀಪುರದಲ್ಲಿ 750 ಕೆಜಿ ತೂಕದ ಮೊಸಳೆ ಸೆರೆ

September 27, 2020

ಮೈಸೂರು, ಸೆ.26 (ಎಂಟಿವೈ)- ಟಿ.ನರಸೀ ಪುರ ತಾಲೂಕು ಚನ್ನಬಸವನಹುಂಡಿ (ಸಿ.ಬಿ. ಹುಂಡಿ) ಗ್ರಾಮದ ಖಾಸಗಿ ಜಮೀನಿನಲ್ಲಿದ್ದ ಬಾವಿ ಯೊಂದರಲ್ಲಿ ಪ್ರತ್ಯಕ್ಷವಾದ ಭಾರೀ ಗಾತ್ರದ ಮೊಸಳೆ ಯನ್ನು ಸತತ 12 ತಾಸು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಸಿ.ಬಿ.ಹುಂಡಿ ಗ್ರಾಮದ ತ್ರಿಪುರ ಎಂಬುವರ ಬಾವಿಯಲ್ಲಿ ಶುಕ್ರವಾರ ಸಂಜೆ ಭಾರಿ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿತ್ತು. ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಪರಿಶೀಲಿಸಿದಾಗ ಬಾವಿಯಲ್ಲಿ ಮೊಸಳೆ ಇರುವುದು ದೃಢಪಟ್ಟಿತ್ತು. ಖಾಸಗಿ ಜಮೀನಿನ ಬಾವಿಯಲ್ಲಿದ್ದ ಕಾರಣ…

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಮಾಜಿಕ ನ್ಯಾಯ, ಸಮಾನತೆಗೆ ಒತ್ತು
ಮೈಸೂರು

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಮಾಜಿಕ ನ್ಯಾಯ, ಸಮಾನತೆಗೆ ಒತ್ತು

September 27, 2020

ಮೈಸೂರು,ಸೆ.26(ಪಿಎಂ)-ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ಒತ್ತು ನೀಡಲಾಗಿದೆ ಎಂದು ರಾಜ್ಯ ಸರ್ಕಾ ರದ ಎನ್‍ಇಪಿ-2020 ಕಾರ್ಯಪಡೆ ಸದಸ್ಯರೂ ಆದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈವಿವಿ ಹಾಗೂ ಮೈವಿವಿ ಶೈಕ್ಷಿಕ್ ಸಂಘ್ (ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ್ ಸಂಯೋಜಿತ) ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಸಾಮಾಜಿಕ…

1 421 422 423 424 425 1,611
Translate »