ಮೈಸೂರು, ಸೆ.26 (ಎಂಟಿವೈ)- ಟಿ.ನರಸೀ ಪುರ ತಾಲೂಕು ಚನ್ನಬಸವನಹುಂಡಿ (ಸಿ.ಬಿ. ಹುಂಡಿ) ಗ್ರಾಮದ ಖಾಸಗಿ ಜಮೀನಿನಲ್ಲಿದ್ದ ಬಾವಿ ಯೊಂದರಲ್ಲಿ ಪ್ರತ್ಯಕ್ಷವಾದ ಭಾರೀ ಗಾತ್ರದ ಮೊಸಳೆ ಯನ್ನು ಸತತ 12 ತಾಸು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಸಿ.ಬಿ.ಹುಂಡಿ ಗ್ರಾಮದ ತ್ರಿಪುರ ಎಂಬುವರ ಬಾವಿಯಲ್ಲಿ ಶುಕ್ರವಾರ ಸಂಜೆ ಭಾರಿ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿತ್ತು. ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಪರಿಶೀಲಿಸಿದಾಗ ಬಾವಿಯಲ್ಲಿ ಮೊಸಳೆ ಇರುವುದು ದೃಢಪಟ್ಟಿತ್ತು. ಖಾಸಗಿ ಜಮೀನಿನ ಬಾವಿಯಲ್ಲಿದ್ದ ಕಾರಣ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮೊಸಳೆ ಸೆರೆಗೆ ಕಾರ್ಯಾ ಚರಣೆ ನಡೆಸಲು ನಿರ್ಧರಿಸಲಾಯಿತು. ಮೈಸೂರು ಮೃಗಾಲಯದ ಸಿಬ್ಬಂದಿ ಕರೆಸಿಕೊಂಡು ಮೊಸಳೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಯಿತು.
ಸೆರೆ ಸಿಕ್ಕ 35-40 ವರ್ಷದ ಮೊಸಳೆ 8 ಅಡಿ ಉದ್ದ, 750 ಕೆಜಿ ತೂಕವಿದೆ. ಬಾವಿ 15-20 ಅಡಿ ಆಳವಿದ್ದು, ನೀರು ತುಂಬಿದ್ದರಿಂದ ಸೆರೆ ಕಾರ್ಯಾ ಚರಣೆ ಕ್ಲಿಷ್ಟಕರವಾಗಿತ್ತು. 4 ಪಂಪ್‍ಸೆಟ್ ಬಳಸಿ ಬಾವಿಯಲ್ಲಿದ್ದ ನೀರನ್ನು ಮಧ್ಯರಾತ್ರಿ ವೇಳೆಗೆ ಖಾಲಿ ಮಾಡಲಾಯಿತು. ನಂತರ 15ಕ್ಕೂ ಹೆಚ್ಚು ಸಿಬ್ಬಂದಿ ಶನಿವಾರ ಬೆಳಗ್ಗೆ ಮೊಸಳೆ ಸೆರೆ ಹಿಡಿದರÀು.
ಟಾಟಾ ಏಸ್ ವಾಹನದಲ್ಲಿ ಅರಣ್ಯ ಭವನಕ್ಕೆ ಮೊಸಳೆ ಸಾಗಿಸಲಾಯಿತು. ನಂತರ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಕೊಂಡೊಯ್ದು ನದಿಗೆ ಬಿಡಲಾಯಿತು.
ಈ ಭಾಗದಲ್ಲಿ ಭಾರಿ ಗಾತ್ರದ ಮೊಸಳೆ ಸೆರೆ ಸಿಕ್ಕಿರುವುದು ಇದೇ ಮೊದಲು. ತಿ. ನರಸೀಪುರ ತಾಲೂಕಲ್ಲಿ ಸೆರೆ ಹಿಡಿದ ಎರಡನೇ ಮೊಸಳೆ. ಕಳೆದ ವರ್ಷ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾ ಗಿದ್ದ ವೇಳೆ ಮುಡುಕುತೊರೆ ಬಳಿ ನದಿಯಲ್ಲಿ ತೇಲಿಕೊಂಡು ಬಂದಿದ್ದ ಮೊಸಳೆ ಗದ್ದೆಯೊಂದ ರಲ್ಲಿ ಕಾಣಿಸಿಕೊಂಡಿತ್ತು. ಅದರನ್ನು ಹೊರತು ಪಡಿಸಿ ಬೇರಾವುದೇ ಮೊಸಳೆ ಸಿಕ್ಕಿರಲಿಲ್ಲ.
750 ಕೆಜಿ ಭಾರವಿರುವ ಮೊಸಳೆ ಎಲ್ಲಿಂದ ಬಂತು? ಎಷ್ಟು ವರ್ಷದಿಂದ ಬಾವಿಯಲ್ಲಿತ್ತು? ಎಂಬ ಪ್ರಶ್ನೆಗಳು ಅರಣ್ಯ ಸಿಬ್ಬಂದಿಯನ್ನು ಕಾಡು ತ್ತಿವೆ. ಭಾರಿ ಗಾತ್ರದ ಮೊಸಳೆ ಸೆರೆ ಸಿಕ್ಕ ವಿಷಯ ತಿಳಿದು ಸುತ್ತಲ ಗ್ರಾಮಗಳ ಜನರು ಕುತೂ ಹಲದಿಂದ ವೀಕ್ಷಣೆಗೆ ಮುಗಿಬಿದ್ದರು.
ಆರ್‍ಎಫ್ ಶಶಿಧರ್ ಮಾರ್ಗದರ್ಶನದಲ್ಲಿ ನಡೆದ ಮೊಸಳೆ ಸೆರೆ ಕಾರ್ಯಾಚರಣೆ ಡಿಆರ್ ಎಫ್‍ಓ ಎಸ್.ಎಂ.ಮಂಜುನಾಥ್, ಎಂ.ಎಸ್. ಉಮೇಶ್, ಸಿಬ್ಬಂದಿಗಳಾದ ಚಂದ್ರಪ್ಪ ಲಮಾಣಿ, ಮಂಜುನಾಥ್, ನಾಗರಾಜು, ಪಾಪು ಹಾಗೂ ಮೃಗಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.