ಮೈಸೂರು ಜಿಲ್ಲೆಯಲ್ಲಿ ಮತ್ತೆ 73 ಮಂದಿಗೆ ಸೋಂಕು: ಸೋಂಕಿತರ ಸಂಖ್ಯೆ 32,348ಕ್ಕೇರಿಕೆ; 20 ಮಂದಿ ಗುಣಮುಖ, 6 ಸಾವು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮತ್ತೆ 73 ಮಂದಿಗೆ ಸೋಂಕು: ಸೋಂಕಿತರ ಸಂಖ್ಯೆ 32,348ಕ್ಕೇರಿಕೆ; 20 ಮಂದಿ ಗುಣಮುಖ, 6 ಸಾವು

September 27, 2020

ಮೈಸೂರು, ಸೆ.26(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಶನಿವಾರ 73 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 32,348ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಗುಣಮುಖರಾದ 20 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 26,081 ಮಂದಿ ಗುಣಮುಖರಾದಂತಾಗಿದೆ.

ಈ ಮಧ್ಯೆ ಜಿಲ್ಲೆಯಲ್ಲಿ 6 ಮಂದಿ ಸೋಂಕಿತರು ಮೃತಪಟ್ಟಿರುವುದಾಗಿ ಶನಿವಾರದ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 721ಕ್ಕೆ ಏರಿದೆ. ಇನ್ನೊಂದೆಡೆ 5,546 ಜನರಲ್ಲಿ ಇನ್ನೂ ಸೋಂಕು ಸಕ್ರಿಯವಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಶನಿವಾರ 8,811 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,66,023ಕ್ಕೆ ಏರಿದೆ. 5,417 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 4,55,719 ಮಂದಿ ಸೋಂಕು ಮುಕ್ತರಾಗಿ ದ್ದಾರೆ. ಇನ್ನೂ 1,01,782 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಶನಿವಾರ 86 ಮಂದಿ ಸಾವಿಗೀಡಾಗಿದ್ದು, ಈವರೆಗೆ 8,503 ಸೋಂಕಿತರು ಮೃತಪಟ್ಟಿದ್ದಾರೆ.

ಸೋಂಕು ದೃಢ: ಬಾಗಲಕೋಟೆ 147, ಬಳ್ಳಾರಿ 462, ಬೆಳಗಾವಿ 132, ಬೆಂಗಳೂರು ಗ್ರಾಮಾಂತರ 241, ಬೆಂಗಳೂರು ನಗರ 4,083, ಬೀದರ್ 56, ಚಾಮರಾಜನಗರ 63, ಚಿಕ್ಕಬಳ್ಳಾಪುರ 164, ಚಿಕ್ಕಮಗಳೂರು 109, ಚಿತ್ರದುರ್ಗ 70, ದಕ್ಷಿಣ ಕನ್ನಡ 420, ದಾವಣಗೆರೆ 144, ಧಾರವಾಡ 232, ಗದಗ 44, ಹಾಸನ 239, ಹಾವೇರಿ 111, ಕಲಬುರಗಿ 249, ಕೊಡಗು 79, ಕೋಲಾರ 165, ಕೊಪ್ಪಳ 352, ಮಂಡ್ಯ 255, ಮೈಸೂರು 73, ರಾಯಚೂರು 92, ರಾಮನಗರ 73, ಶಿವಮೊಗ್ಗ 254, ತುಮಕೂರು 141, ಉಡುಪಿ 57, ಉತ್ತರಕನ್ನಡ 104, ವಿಜಯಪುರ 67, ಯಾದಗಿರಿ 133 ಸೇರಿದಂತೆ ಶನಿವಾರ ರಾಜ್ಯದಲ್ಲಿ 8,811 ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿವೆ.

Translate »