ಅರಮನೆ ಆವರಣದಲ್ಲಿ ದಸರಾ ಸಿದ್ಧತೆ: ಪ್ರಮುಖ ಆಕರ್ಷಣೆ ದೀಪಗಳ ಅಳವಡಿಕೆ, ದುರಸ್ತಿ
ಮೈಸೂರು

ಅರಮನೆ ಆವರಣದಲ್ಲಿ ದಸರಾ ಸಿದ್ಧತೆ: ಪ್ರಮುಖ ಆಕರ್ಷಣೆ ದೀಪಗಳ ಅಳವಡಿಕೆ, ದುರಸ್ತಿ

September 27, 2020

ಮೈಸೂರು, ಸೆ.26(ಎಸ್‍ಬಿಡಿ)- ಸರಳ ಹಾಗೂ ಸಾಂಪ್ರದಾಯಿಕ ದಸರಾಗೆ ಮೈಸೂರು ಅರಮನೆ ಆವರಣದಲ್ಲಿ ಸಿದ್ಧತೆ ಚುರುಕಾಗಿದೆ.

ಅರಮನೆ ಮುಂಭಾಗದ ಉದ್ಯಾನಗಳು ಹಾಗೂ ರಸ್ತೆಯಲ್ಲಿರುವ ವಿದ್ಯುತ್ ದೀಪ ಗಳ ದುರಸ್ತಿ ಕಾರ್ಯ ನಡೆಯುತ್ತಿದೆ.  25 ಫೈವ್ ಲೈಟ್ಸ್ ಕಂಬಗಳು, 12 ಸೆವೆನ್ ಲೈಟ್ಸ್ ಕಂಬಗಳು, 250ಕ್ಕೂ ಹೆಚ್ಚು ಓಎಲ್‍ಪಿ ಕಂಬಗಳಿವೆ. ಈಗಾಗಲೇ ಕಂಬಗಳಿಗೆ ಬಣ್ಣ ಬಳಿಯುವ ಕಾರ್ಯ ಬಿರುಸಾಗಿ ಸಾಗಿದೆ. ಅಲ್ಲದೆ ವಿದ್ಯುತ್ ದೀಪಗಳ ದುರಸ್ತಿಗಾಗಿ ಕಬ್ಬಿಣದ ಕಾಲಾವದಿ ಅಳವಡಿಸಲಾಗುತ್ತಿದೆ.

ಅರಮನೆ ಸುತ್ತಲಿನ ವಿದ್ಯುತ್ ದೀಪಗಳ ದುರಸ್ತಿ ಬಳಿಕ ಅರಮನೆ ದೀಪಾಲಂಕಾರ ನಿರ್ವಹಣೆಯೂ ಆರಂಭವಾಗಲಿದೆ. ವಿದ್ಯುತ್ ದೀಪಗಳನ್ನು ಹೊತ್ತಿಸಿ, ಬಲ್ಬ್, ಹೋಲ್ಡರ್, ವೈರಿಂಗ್ ಹಾಳಾಗಿದ್ದರೆ ಅದನ್ನು ಬದಲಿ ಸಲಾಗುತ್ತದೆ. ಎತ್ತರದಲ್ಲೂ ದುರಸ್ತಿ ಕಾರ್ಯ ಮಾಡಬೇಕಿರುವ ಕಾರಣ ಕ್ರೇನ್ ಬಳಸಬೇಕಾ ಗುತ್ತದೆ. ಹಾಗಾಗಿ ಇನ್ನೊಂದು ವಾರದಲ್ಲಿ ದೀಪಾಲಂಕಾರ ದುರಸ್ತಿ ನಡೆಯಬಹುದು.

ಸ್ವದೇಶಿ ಲೈಟಿಂಗ್: ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಮಾತ್ರ ದಸರಾ ಉತ್ಸವ ಸೀಮಿತವಾಗಿದ್ದರೂ ನಗರದ ಪ್ರಮುಖ ರಸ್ತೆ, ವೃತ್ತಗಳು, ಸರ್ಕಾರಿ ಕಟ್ಟಡಗಳಿಗೆ ಎಂದಿನಂತೆ ವಿದ್ಯುತ್ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ. ಈ ಬಾರಿ ಚೀನಾ ಮೇಡ್ ಲೈಟಿಂಗ್ಸ್ ಬದಲಿಗೆ ದೇಶಿ ವಿದ್ಯುತ್ ದೀಪಗಳನ್ನು ಬಳಸಲು ಚಿಂತನೆ ನಡೆಸಿರುವುದು ಈ ಬಾರಿಯ ವಿಶೇಷ.

ಆತ್ಮನಿರ್ಭರ ಘೋಷಣೆಯೊಂದಿಗೆ ಚೀನಾ ವಸ್ತುಗಳ ವಿರುದ್ಧ ಅಭಿಯಾನ ನಡೆ ಯುತ್ತಿರುವ ಸಂದರ್ಭದಲ್ಲಿ ಐತಿಹಾಸಿಕ ದಸರಾ ದೀಪಾಲಂಕಾರದಲ್ಲೂ ದೇಸೀ ಯತೆ ಸಾರಲು ಸಿದ್ಧತೆ ನಡೆಸಲಾಗಿದೆ. ಚೀನಾ ಲೈಟಿಂಗ್ ಬಳಸದಂತೆ ಮುಖ್ಯ ಮಂತ್ರಿಗಳೂ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಹಾಗಾಗಿ ಚೀನಾದ ಸೀರಿ ಯಲ್ ಸೆಟ್, ಬಲ್ಬ್ ಇನ್ನಿತರ ಉಪಕರಣ ಗಳ  ಪರ್ಯಾಯವಾಗಿ ಸ್ಥಳೀಯವಾಗಿ ಸಿಗುವ ಉಪಕರಣಗಳ ಜೊತೆಗೆ ಕೋಲ್ಕತ್ತ ಹಾಗೂ ನವದೆಹಲಿಯಿಂದ ಬಿಡಿ ಉಪ ಕರಣಗಳನ್ನು ತರಿಸಿಕೊಂಡು ದೀಪಾ ಲಂಕಾರ ಮಾಡುವ ನಿಟ್ಟಿನಲ್ಲಿ ಸೆಸ್ಕ್ ಮುಂದಾಗಿದೆ. ಇದರಿಂದ ವೆಚ್ಚವೂ ಕಡಿಮೆಯಾಗುವ ನಿರೀಕ್ಷೆಯಿದೆ.

 

 

 

 

Translate »