ಮೈಸೂರು, ಮೇ 25(ಎಂಟಿವೈ)- ಮೈಸೂರು ಜಿಲ್ಲೆಯ ಕೊರೊನಾ ವಾರಿಯರ್ಸ್ ರಾಜ್ಯದ ಯಾವುದೇ ಜಿಲ್ಲೆಗೆ ಪ್ರಯಾಣಿಸಲು ಸೇಫ್ ವೀಲ್ಸ್ ಸಂಸ್ಥೆ ವತಿ ಯಿಂದ ಉಚಿತ ವಾಹನ ವ್ಯವಸ್ಥೆಗೆ ಶಾಸಕ ಎಸ್.ಎ. ರಾಮದಾಸ್ ಚಾಲನೆ ನೀಡಿದರು. ಸರಸ್ವತಿಪುರಂನಲ್ಲಿರುವ ಸೇಫ್ ವೀಲ್ಸ್ ಕಚೇರಿ ಬಳಿ ಸೋಮವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ ಸೇವೆಗಾಗಿ ಕಾಯ್ದಿರಿಸಿದ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ, ಸಾಂಸ್ಕøತಿಕ…
ಸೀಲ್‍ಡೌನ್ ಗ್ರಾಮಗಳಿಗೆ ಮಾಜಿ ಸಂಸದ, ಶಾಸಕರ ಭೇಟಿ
May 26, 2020ನಂಜನಗೂಡು, ಮೇ 25(ರವಿ)-ಮಳವಳ್ಳಿಯ ಸೋಂಕಿತ ಸಿಡಿಪಿಓ ಭೇಟಿ ಯಿಂದ ಸೀಲ್‍ಡೌನ್ ಮಾಡಲಾಗಿರುವ ತಾಲೂಕಿನ ಹೆಳವರಹುಂಡಿ ಹಾಗೂ ಅಂಜ ನಾಪುರ ಗ್ರಾಮಗಳಿಗೆ ಮಾಜಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಭೇಟಿ ನೀಡಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಈ ವೇಳೆ ಮಾತನಾಡಿದ ಆರ್.ಧ್ರುವ ನಾರಾಯಣ್, ಗ್ರಾಮಸ್ಥರಿಗೆ ಸೀಲ್‍ಡೌನ್ ಸಮಯದಲ್ಲಿ ತೊಂದರೆಯಾಗದಂತೆ ದಿನಸಿ, ತರಕಾರಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಸೇವೆ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಆರೋಗ್ಯ ಸೇವೆಯನ್ನೂ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಕೊರೊನಾದಿಂದಾಗಿ…
ನಾಯಿಗಳ ದಾಳಿ: ಚಿರತೆ ಮರಿ ರಕ್ಷಣೆ
May 26, 2020ಹುಣಸೂರು,ಮೇ 25(ಕೆಕೆ)- ತಾಲೂಕಿನ ಮೈಲಾಂಬೂರು ಗ್ರಾಮದ ಜಮೀನಿ ನೊಂದರಲ್ಲಿ ನಾಯಿ ದಾಳಿಗೆ ಸಿಲುಕಿದ್ದ ಚಿರತೆ ಮರಿಯನ್ನು ಯುವಕರ ತಂಡ ರಕ್ಷಿಸಿದೆ. ಗ್ರಾಮದ ಮಹೇಂದ್ರ, ಸಾಗರ್, ರಾಜು ಯುವಕರ ತಂಡ ಜಮೀನಿನ ಕೆಲಸಕ್ಕೆಂದು ತೆರಳುತ್ತಿದ್ದಾಗ ಪ್ರಮೋದ್ ಎಂಬುವವರ ಜಮೀನಿನಲ್ಲಿ ನಾಯಿಗಳ ಚೀರಾಟ ಕೇಳಿ ಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಚಿರತೆ ಮರಿ ಮೇಲೆ ನಾಯಿ ಗಳ ಹಿಂಡು ದಾಳಿ ನಡೆಸುತ್ತಿದ್ದ ದೃಶ್ಯ ಕಂಡು ಬಂದಿದೆ. ತಕ್ಷಣ ನಾಯಿಗಳನ್ನು ಓಡಿಸಿ ಯುವಕರು ಚಿರತೆ ಮರಿ ಯನ್ನು ರಕ್ಷಿಸಿ, ಹುಣಸೂರು ಗ್ರಾಮಾಂ…
ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಲು ಸಿದ್ದರಾಮಯ್ಯರ ಮೊರೆ ಹೋದ ರೈತ ಮುಖಂಡರು
May 26, 2020ಬೆಂಗಳೂರು, ಮೇ 25 (ಕೆಎಂಶಿ)-ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿ ಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರು ಮಾಜಿ ಮುಖ್ಯ ಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸುನಂದಾ ಜಯರಾಂ ಮತ್ತಿತರರು ಇಂದು ಸಿದ್ದರಾಮಯ್ಯ ಅವರನ್ನು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ, ಕಂಪನಿಯನ್ನು ಖಾಸಗೀಕರಣ ಮಾಡಲು ಸರ್ಕಾರದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಸರ್ಕಾರದ ಈ ನಿರ್ಧಾರಕ್ಕೆ ಜಿಲ್ಲಾ ರೈತರು…
ಇಂದು `ಇ-ಲೈಬ್ರರಿ’ ಬಳಕೆ ಕುರಿತು ಆನ್‍ಲೈನ್ ತರಬೇತಿ
May 26, 2020ಮೈಸೂರು, ಮೇ 25(ಆರ್‍ಕೆಬಿ)- ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಗ್ರಂಥಾಲಯ ಇಲಾಖೆ ಜಂಟಿ ಆಶ್ರಯದಲ್ಲಿ ಮಂಗಳವಾರ (ಮೇ26) ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆವರೆಗೆ `ಇ-ಆಡಳಿತ, ಡಿಜಿಟಲ್ ಲೈಬ್ರರಿ ಮತ್ತು ಇ-ಲೈಬ್ರರಿ’ ಕುರಿತು `ಗೂಗಲ್ ಮೀಟ್’ ಅಪ್ಲಿಕೇಷನ್ ಮುಖಾಂತರ ತರಬೇತಿ ಕಾರ್ಯಕ್ರಮ ಆಯೋ ಜಿಸಲಾಗಿದೆ. ಮಧ್ಯಾಹ್ನ 3.35ರಿಂದ 3.40ರವ ರೆಗೆ ಗಣಕೀಕೃತ ಮತ್ತು ಆನ್‍ಲೈನ್ ಲೈಬ್ರರಿ ಸ್ವರೂಪ ಕುರಿತು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ವಿ.ಶಿವರಾಮಯ್ಯ, ಮಧ್ಯಾಹ್ನ 3.40ಕ್ಕೆ ಇ-ಆಡಳಿತದ ಧ್ಯೇಯೋದ್ದೇಶಗಳು’ ಕುರಿತು ಗ್ರಂಥಾಲಯ ಇಲಾಖೆ ಉಪ…
ಗ್ರಾಪಂ ಚುನಾವಣೆ ಮುಂದೂಡಿಕೆ ಸರಿಯಲ್ಲ: ಶಾಸಕ ಹೆಚ್‍ಪಿಎಂ
May 26, 2020ಹುಣಸೂರು, ಮೇ 25(ಕೆಕೆ)-ಕೊರೊನಾ ನೆಪ ಹೇಳಿ ಕೊಂಡು ಗ್ರಾಪಂಗಳ ಚುನಾವಣೆ ಮುಂದೂಡಿ, ಪಕ್ಷದ ಕಾರ್ಯಕರ್ತ ರನ್ನು ನಾಮನಿರ್ದೇಶನ ಮಾಡುವ ಹುನ್ನಾರ ಕೈಬಿಟ್ಟು ಚುನಾವಣೆ ನಡೆಸು ವಂತೆ ಶಾಸಕ ಹೆಚ್.ಪಿ.ಮಂಜುನಾಥ್ ಒತ್ತಾಯಿಸಿದರು. ನಗರದ ತಾಪಂ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಸರ್ಕಾರಕ್ಕೆ ನಾಮನಿರ್ದೇಶನ ಮಾಡುವ ಅಧಿಕಾರವಿಲ್ಲ. ಬಿಜೆಪಿ ಪಕ್ಷದ ಕಾರ್ಯ ಕರ್ತರನ್ನು ಗ್ರಾಪಂಗಳಿಗೆ ನೇಮಿಸುವುದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷಾತೀತವಾಗಿ ವಿರೋಧ…
ಸಾಂಸ್ಕøತಿಕ ನಗರಿ ಮೈಸೂರು ಸ್ತಬ್ಧ
May 25, 2020ಮೈಸೂರು,ಮೇ 24(ಎಂಟಿವೈ)- ವಾರಾಂತ್ಯ ದಿನ ಭಾನುವಾರದಂದು ಜನಸಂದಣಿ ಯಿಂದ ಕೂಡಿರುತ್ತಿದ್ದ ಸಾಂಸ್ಕøತಿಕ ನಗರಿ ಮೈಸೂರು ಇಂದು ಅಕ್ಷರಶಃ ಬಿಕೋ ಎನ್ನುತ್ತಿತ್ತು. ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಸಂಪೂರ್ಣ ಲಾಕ್‍ಡೌನ್‍ಗೆ ಇಂದು ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗ್ಗಿನಿಂದ ಜನ ಹಾಗೂ ವಾಹನ ಸಂಚಾರವಿಲ್ಲದೆ ಕಫ್ರ್ಯೂನಂತಹ ವಾತಾವರಣ ನಿರ್ಮಾಣವಾಗಿತ್ತು. ಸ್ವಯಂಪ್ರೇರಣೆಯಿಂದ ಜನರು ಮನೆ ಯಲ್ಲಿಯೇ ಇದ್ದುದ್ದರಿಂದ ಪೊಲೀಸರಿಗೆ ಭದ್ರತಾ ಕಾರ್ಯ ಸುಗಮವಾಗಿ ಸಾಗಿತು. ಯಾವುದೇ ಅಹಿತಕರ ಘಟನೆ, ಅಡ ಚಣೆಯಿಲ್ಲದೆ ಸಂಪೂರ್ಣ ಲಾಕ್‍ಡೌನ್ ಯಶಸ್ವಿಯಾಗಿ…
ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ
May 25, 2020ಬೆಂಗಳೂರು, ಮೇ 24-ರಾಜ್ಯದಲ್ಲಿ ಮಹಾರಾಷ್ಟ್ರ ಜಾಡ್ಯ ಮುಂದುವರೆದಿದ್ದು, ಭಾನುವಾರ ಪತ್ತೆಯಾದ 130 ಪ್ರಕರಣ ಗಳ ಪೈಕಿ 100 ಮಂದಿ ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ. ಕೊರೊನಾ ಸೋಂಕು 2 ಸಾವಿರ ಗಡಿ ದಾಟಿದ್ದು, ಸೋಂಕಿನ ಸಂಖ್ಯೆ 2089ಕ್ಕೆ ಏರಿದೆ. ಕೊಡಗಿನಲ್ಲಿ ಮಹಾರಾಷ್ಟ್ರದಿಂದ ಬಂದ 26 ವರ್ಷದ ಯುವಕನಿಗೆ ಸೋಂಕು ಪತ್ತೆ ಯಾಗಿದ್ದು, ಅಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿದೆ. ಈಗಾಗಲೇ ಓರ್ವ ಸೋಂಕಿತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡ್ಯದಲ್ಲಿ ಇಂದು 15 ಮಂದಿಗೆ…
ಮೈಸೂರಿನಲ್ಲಿ ಲಾಕ್‍ಡೌನ್ ನಡುವೆ ಸರಳ ವಿವಾಹ!
May 25, 2020ಮೈಸೂರು, ಮೇ 24(ಆರ್‍ಕೆಬಿ)- ಭಾನುವಾರದ ಲಾಕ್‍ಡೌನ್ ನಡುವೆಯೂ ಪೂರ್ವ ನಿಗದಿತ ಮದುವೆಗಳಿಗೆ ನೀಡ ಲಾಗಿರುವ ಷರತ್ತಿನ ಅವಕಾಶವನ್ನು ಬಳಸಿ ಕೊಂಡು ಮೈಸೂರಿನ ಕೆಲವು ಕಲ್ಯಾಣ ಮಂಟಪಗಳು ಹಾಗೂ ದೇವಾಲಯಗಳಲ್ಲಿ ಹಲವು ಮದುವೆಗಳು ಸರಳವಾಗಿ ನಡೆದವು. ಮೈಸೂರಿನ ಕುವೆಂಪು ನಗರದ ಚಿಕ್ಕ ಮ್ಮಾನಿಕೇತನ, ಲಷ್ಕರ್ ಮೊಹಲ್ಲಾದ ಗೀತಾ ಮಂದಿರ ಸೇರಿದಂತೆ ಹಲವು ಕಲ್ಯಾಣ ಮಂಟಪಗಳು ಹಾಗೂ ಹಲವು ದೇವಾ ಲಯಗಳಲ್ಲಿ ನಿಗದಿಯಂತೆ ಮದುವೆಗಳು ಸರಳ ರೀತಿಯಲ್ಲಿ ನೆರವೇರಿದವು. ಸ್ಯಾನಿ ಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಕಾರ್ಯದಲ್ಲಿ…
ಮೈಸೂರು ಜನರ ಬೆಂಬಲದಿಂದ ಲಾಕ್‍ಡೌನ್ ಯಶಸ್ವಿ: ಡಿಸಿಪಿ
May 25, 2020ಮೈಸೂರು, ಮೇ 24(ಎಂಕೆ)- ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿ ಸಲು ಭಾನುವಾರ ರಾಜ್ಯದಾದ್ಯಂತ ಜಾರಿಯಾಗಿದ್ದ ಲಾಕ್ ಡೌನ್‍ಗೆ ಮೈಸೂರಿನ ಜನತೆ ಸಂಪೂರ್ಣ ಬೆಂಬಲ ಸೂಚಿಸಿ ಯಶಸ್ವಿಗೊಳಿಸಿದ್ದಾರೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ. ಮಾಧ್ಯಮಗಳಿಗೆ ವಿಡಿಯೋ ಸಂದೇಶ ನೀಡಿರುವ ಅವರು, ತುರ್ತು ಅಗತ್ಯಗಳಿಗೆ ಸಂಚಾರ, ವಹಿವಾಟಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಅಲ್ಲಲ್ಲಿ ವಾಹನ ತಪಾಸಣೆ ನಡೆಸಲಾಗಿದೆ. ಯಾವುದೇ ವಾಹನ ವಶಕ್ಕೆ ಪಡೆದಿಲ್ಲ. ಮೈಸೂರಿಗರು ಉತ್ತಮ ಸಹಕಾರ ನೀಡಿದ್ದು, ಭಾನುವಾರದ ಲಾಕ್‍ಡೌನ್ ಶಾಂತಿ ಯುತವಾಗಿ ಪೂರ್ಣಗೊಂಡಿದೆ. ನಗರದಲ್ಲಿ ಸೋಮವಾರ…










