ಮೈಸೂರು, ಮೇ 25(ಆರ್‍ಕೆಬಿ)- ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಗ್ರಂಥಾಲಯ ಇಲಾಖೆ ಜಂಟಿ ಆಶ್ರಯದಲ್ಲಿ ಮಂಗಳವಾರ (ಮೇ26) ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆವರೆಗೆ `ಇ-ಆಡಳಿತ, ಡಿಜಿಟಲ್ ಲೈಬ್ರರಿ ಮತ್ತು ಇ-ಲೈಬ್ರರಿ’ ಕುರಿತು `ಗೂಗಲ್ ಮೀಟ್’ ಅಪ್ಲಿಕೇಷನ್ ಮುಖಾಂತರ ತರಬೇತಿ ಕಾರ್ಯಕ್ರಮ ಆಯೋ ಜಿಸಲಾಗಿದೆ. ಮಧ್ಯಾಹ್ನ 3.35ರಿಂದ 3.40ರವ ರೆಗೆ ಗಣಕೀಕೃತ ಮತ್ತು ಆನ್‍ಲೈನ್ ಲೈಬ್ರರಿ ಸ್ವರೂಪ ಕುರಿತು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ವಿ.ಶಿವರಾಮಯ್ಯ, ಮಧ್ಯಾಹ್ನ 3.40ಕ್ಕೆ ಇ-ಆಡಳಿತದ ಧ್ಯೇಯೋದ್ದೇಶಗಳು’ ಕುರಿತು ಗ್ರಂಥಾಲಯ ಇಲಾಖೆ ಉಪ ನಿರ್ದೇ ಶಕ ಬಿ.ಮಂಜುನಾಥ್, 3.50ಕ್ಕೆ `ಇ-ಆಡಳಿತ, ಡಿಜಿಟಲ್ ಲೈಬ್ರರಿ ಮತ್ತು ಇ-ಲೈಬ್ರರಿ ಬಳಕೆ ಮಾಡಲು ಮಾರ್ಗದರ್ಶಿ ಸೂತ್ರಗಳು ಕುರಿತು ಬಿಸಿನೆಸ್ ಗ್ರೂಪ್‍ನ ಉಪಾಧ್ಯಕ್ಷ ಗುರುಪ್ರಸಾದ್ ಮಾಹಿತಿ ನೀಡುವರು. ಸಂಜೆ 4.40ಕ್ಕೆ ಪ್ರಶಿಕ್ಷ ಣಾರ್ಥಿಗಳಿಂದ ಪರಿಪ್ರಶ್ನೆ ಕಾರ್ಯಕ್ರಮ ವಿರುತ್ತದೆ ಎಂದು ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಆಸಕ್ತಿ ಯುಳ್ಳ ಸಾರ್ವಜನಿಕರು ಸಹ ಭಾಗವಹಿಸ ಬಹುದಾಗಿದೆ. ಆಸಕ್ತರು `ಗೂಗಲ್ ಮೀಟ್’ ಅಪ್ಲಿಕೇಷನ್ ಮೀಟಿಂಗ್ ಲಿಂಕ್ ಅನ್ನು ಡೌನ್ ಲೋಡ್ ಮಾಡಿಕೊಂಡು, ಇದರ ಪ್ರವೇಶ ಕ್ಕಾಗಿ, ಲಿಂಕ್ ಪಡೆಯಲು, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೊಬೈಲ್ ಸಂಖ್ಯೆ 9448307076ಗೆ ಕರೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬಿ.ಮಂಜುನಾಥ್, ಉಪ ನಿರ್ದೇಶಕರು, ಜಿಲ್ಲಾ ಗ್ರಂಥಾಲಯ ಇಲಾಖೆ, ಮೈಸೂರು ಮೊಬೈಲ್ ಸಂಖ್ಯೆ 8277058489 ಸಂಪರ್ಕಿಸಬಹುದು.