ಮೈಸೂರು

`ಗುಜರಾತ್ ಕರಕುಶಲ ಉತ್ಸವ’ಕ್ಕೆ ಚಾಲನೆ
ಮೈಸೂರು

`ಗುಜರಾತ್ ಕರಕುಶಲ ಉತ್ಸವ’ಕ್ಕೆ ಚಾಲನೆ

July 8, 2019

ಮೈಸೂರು,ಜು.7(ವೈಡಿಎಸ್)- ಹೆಬ್ಬಾಳ್‍ನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಜು.4 ರಿಂದ 14ರವರೆಗೆ 10 ದಿನಗಳ ಕಾಲ `ಗುಜರಾತ್ ಕರಕುಶಲ ಉತ್ಸವ’ವನ್ನು ಆಯೋಜಿಸಲಾಗಿದೆ. ಜೆಎಸ್‍ಎಸ್ ಅರ್ಬನ್ ಹಾತ್, ಗುಜ ರಾತ್ ಸರ್ಕಾರದ ಅಂಗ ಸಂಸ್ಥೆಯಾದ ಇಂಡಸ್ಟ್ರಿಯಲ್ ಎಕ್ಸ್‍ಟೆನ್ಷನ್ ಕಾಟೇಜ್ (ಇಂಡೆಕ್ಸ್-ಸಿ) ಸಹಯೋಗದೊಂದಿಗೆ ಆಯೋಜಿಸಿರುವ ಕರಕುಶಲ ಉತ್ಸವದಲ್ಲಿ ಗುಜರಾತ್‍ನ ವಿವಿಧ ಭಾಗಗಳಿಂದ 75 ಮಂದಿ ಕುಶಲಕರ್ಮಿಗಳು ಭಾಗವಹಿ ಸಿದ್ದು, ತಾವೇ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ. ಮೇಳದಲ್ಲಿ ಪಟೋಲ, ಬಾಂದಿನಿ ಸೀರೆ ಗಳು, ಕಸೂತಿ ಮಾಡಿದ ಬೆಡ್‍ಶೀಟ್‍ಗಳು, ಟವಲ್,…

ಬಿಜೆಪಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ಕೇಂದ್ರ ಸಚಿವ ಸದಾನಂದಗೌಡ ಚಾಲನೆ
ಮೈಸೂರು

ಬಿಜೆಪಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ಕೇಂದ್ರ ಸಚಿವ ಸದಾನಂದಗೌಡ ಚಾಲನೆ

July 7, 2019

ಮೈಸೂರು, ಜು.5(ಎಸ್‍ಬಿಡಿ)- ಮೈಸೂರು ನಗರ ಬಿಜೆಪಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ರಾಸಾ ಯನಿಕ ಹಾಗೂ ರಸಗೊಬ್ಬರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶನಿವಾರ ಚಾಲನೆ ನೀಡಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮೊಬೈಲ್‍ನಲ್ಲಿ ಮಿಸ್ಡ್ ಕಾಲ್ ನೀಡುವ ಮೂಲಕ ಅಭಿ ಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಲ್ಲಾ ಜನಪರ ಯೋಜನೆಗಳು, ಕಾರ್ಯಕ್ರಮ ಗಳನ್ನು ತಳಮಟ್ಟದಿಂದ ಜನರಿಗೆ ಸಮ ರ್ಪಕವಾಗಿ ತಲುಪಿಸುವ…

ಸ್ಥಳ ಪರಿಶೀಲನೆಗೆ ಹೋದ ನಗರಪಾಲಿಕೆ ನಿಯೋಗ ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಮೈಸೂರು

ಸ್ಥಳ ಪರಿಶೀಲನೆಗೆ ಹೋದ ನಗರಪಾಲಿಕೆ ನಿಯೋಗ ತರಾಟೆಗೆ ತೆಗೆದುಕೊಂಡ ಸ್ಥಳೀಯರು

July 7, 2019

ಮೈಸೂರು,ಜು.6 (ವೈಡಿಎಸ್)- ನಗರಪಾಲಿಕೆ ವತಿಯಿಂದ ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಮಳಲವಾಡಿಗೆ ಸ್ಥಳ ಪರಿಶೀಲನೆಗೆ ಹೋದ ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರನ್ನು ಅಲ್ಲಿನ ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಮೈಸೂರು ಮಹಾನಗರಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗಾಗಿ 21 ಕೋಟಿ ರೂ. ವೆಚ್ಚದಲ್ಲಿ 158 ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದು, ಈ ಹಿನ್ನೆಲೆ ಯಲ್ಲಿ ಶನಿವಾರ ಸಂಜೆ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿ ಗಳು ಮಳಲವಾಡಿಗೆ ಭೇಟಿ ನೀಡಿ ಸ್ಥಳವನ್ನು…

ಜು.12ರಂದು ಮೈಸೂರಿಗೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಭೇಟಿ
ಮೈಸೂರು

ಜು.12ರಂದು ಮೈಸೂರಿಗೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಭೇಟಿ

July 7, 2019

ಜು.13ರ ಸಿಐಐಎಲ್ ಸುವರ್ಣ ಮಹೋತ್ಸವದಲ್ಲಿ ಭಾಗಿ ಮೈಸೂರು, ಜು.6(ಆರ್‍ಕೆ)- ಭಾರತದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಜುಲೈ 12ರಂದು ಮೈಸೂರಿಗೆ ಆಗಮಿಸುವರು. ಜುಲೈ 12ರಂದು ಸಂಜೆ 6.30ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ನೇರವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವವರು ಅಂದು ರಾತ್ರಿ ಮೈಸೂರಿನ ನಜರ್‍ಬಾದ್‍ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿರುವ ಅವರು, ಮರು ದಿನ (ಜು.13) ಬೆಳಿಗ್ಗೆ 9.30 ಗಂಟೆಗೆ ಹುಣಸೂರು ರಸ್ತೆಯಲ್ಲಿ ರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್)ಯಲ್ಲಿ ಏರ್ಪಡಿಸಿರುವ ಸಂಸ್ಥೆಯ…

ಮತ್ತೆ ಜಲಪ್ರಳಯದ ಭೀತಿಯಲ್ಲಿ ಕೊಡಗು ಜನತೆ
ಮೈಸೂರು

ಮತ್ತೆ ಜಲಪ್ರಳಯದ ಭೀತಿಯಲ್ಲಿ ಕೊಡಗು ಜನತೆ

July 7, 2019

ಮಡಿಕೇರಿ, ಜು.6- ಬಿಸಿಲ ಬೇಗೆಗೆ ಕಂಗಾಲಾಗಿದ್ದ ಮಲೆನಾಡಿನಲ್ಲಿ ಈಗ ಮಳೆ ಪ್ರಾರಂಭವಾಗಿದೆ. ಕಳೆದ ಬಾರಿ ಭೀಕರ ಮಳೆಗೆ ತುತ್ತಾಗಿದ್ದ ಕೊಡಗಿನಲ್ಲೂ ಮಳೆ ಸುರಿಯುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಜು.5ರಂದು ಸುರಿದ ಮಳೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯ ರಸ್ತೆ ಕುಸಿದಿದೆ. ಭಾಗಮಂಡಲದಲ್ಲಿ ಸುರಿದ ಮಳೆಯಿಂದಾಗಿ ಕಾವೇರಿಯಲ್ಲಿ ನೀರಿನ ಪ್ರಮಾಣ ಹೆಚ್ಚ ಬಹುದೆಂಬ ಸಂತಸದಲ್ಲಿದ್ದಾರೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆ ಆದರೆ ಕಳೆದ ಬಾರಿಯ ಕರಾಳತೆಯನ್ನು ಎದುರಿಸಿದ್ದವರಿಗೆ ಮಳೆ ಹೀಗೆಯೇ ಧಾರಾಕಾರವಾಗಿ ಮುಂದುವರೆದರೆ ಜಲಾವೃತಗೊಂಡು ಜನಸಂಪರ್ಕ…

ಪುತ್ತೂರಿನ ಸಾಮೂಹಿಕ ಅತ್ಯಾಚಾರ ಖಂಡಿಸಿ ಮೈಸೂರಲ್ಲಿ ಸರಣಿ ಪ್ರತಿಭಟನೆ
ಮೈಸೂರು

ಪುತ್ತೂರಿನ ಸಾಮೂಹಿಕ ಅತ್ಯಾಚಾರ ಖಂಡಿಸಿ ಮೈಸೂರಲ್ಲಿ ಸರಣಿ ಪ್ರತಿಭಟನೆ

July 7, 2019

ಮೈಸೂರು, ಜು.6(ಆರ್‍ಕೆ)- ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆಯಿತೆನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ, ಮಹಿಳಾ ಕಾಂಗ್ರೆಸ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಲ್ಲಿ ಇಂದು ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮೋಸಿನ್ ಖಾನ್ ನೇತೃತ್ವದಲ್ಲಿ ಸದಸ್ಯರು ಮೈಸೂರಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪಿ ಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಪುತ್ತೂರಿನಲ್ಲಿ ನಡೆದಿರುವ ಹೇಯ ಕೃತ್ಯದ ಬಗ್ಗೆ ಅಲ್ಲಿನ ಬಹುತೇಕ ಜನಪ್ರತಿನಿಧಿಗಳಾಗಿರುವ ಬಿಜೆಪಿಯವರು…

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಧರಣಿ ಅಂತ್ಯ
ಮೈಸೂರು

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಧರಣಿ ಅಂತ್ಯ

July 7, 2019

ಮೈಸೂರು, ಜು. 6(ಆರ್‍ಕೆ)- ಅಂಗನವಾಡಿ ಕೇಂದ್ರಗಳನ್ನು ನರ್ಸರಿ ಶಾಲೆಗಳಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮೈಸೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ಶುಕ್ರವಾರದಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು, ಇಂದು ಸಂಜೆ ಡಿಸಿ ಕಚೇರಿ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಅಂಗನವಾಡಿ ಹಾಗೂ ಮಿನಿ ಅಂಗನವಾಡಿ ಕೇಂದ್ರಗಳನ್ನು ಕಿಂಡರ್ ಗಾರ್ಡನ್‍ಗಳನ್ನಾಗಿ ಮಾಡಿ ನರ್ಸರಿ ಶಾಲೆಗಳನ್ನಾಗಿ ಪರಿವರ್ತಿಸುವ ಮೂಲಕ ಮೂಲ ಸೌಕರ್ಯ ಕಲ್ಪಿಸಬೇಕೆಂದು ಹಾಗೂ ಅಂಗನವಾಡಿ ಕಾರ್ಯ ಕರ್ತೆಯರಿಗೆ ಪಿಂಚಣಿ ಇತ್ಯಾದಿ ಸೌಲಭ್ಯ…

ಹೆಚ್.ಡಿ.ಕೋಟೆ ತಾಲೂಕಿನ ಅಕ್ರಮ ಗಣಿಗಾರಿಕೆ ತಡೆಯಲು ರೈತ ಸಂಘ ಆಗ್ರಹ
ಮೈಸೂರು

ಹೆಚ್.ಡಿ.ಕೋಟೆ ತಾಲೂಕಿನ ಅಕ್ರಮ ಗಣಿಗಾರಿಕೆ ತಡೆಯಲು ರೈತ ಸಂಘ ಆಗ್ರಹ

July 7, 2019

ಮೈಸೂರು,ಜು.6(ಎಂಟಿವೈ)- ಪರಿಸರ ಹಾಗೂ ಸ್ಥಳೀಯ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಚಿಕ್ಕ ಕೆರೆಯೂರು ಹಾಗೂ ದೊಡ್ಡ ಕೆರೆಯೂರುಗಳ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಂದೇ ಗಾಲ ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂ ವರೆ ವರ್ಷದಿಂದ ಚಿಕ್ಕ ಕೆರೆಯೂರು ಹಾಗೂ ದೊಡ್ಡ ಕೆರೆಯೂರುಗಳ ಸುತ್ತಮುತ್ತ ವ್ಯಾಪಕವಾಗಿ ಕಲ್ಲು…

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಅವರಿಂದ ರಾಜಶೇಖರ ಕೋಟಿಯವರ ಪುತ್ಥಳಿ ಅನಾವರಣ
ಮೈಸೂರು

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಅವರಿಂದ ರಾಜಶೇಖರ ಕೋಟಿಯವರ ಪುತ್ಥಳಿ ಅನಾವರಣ

July 7, 2019

ಮೈಸೂರು, ಜು.6(ಪಿಎಂ)- ಒಡ ನಾಡಿ ಸೇವಾ ಸಂಸ್ಥೆ ವತಿಯಿಂದ ಗೆಜ್ಜ ಗಳ್ಳಿಯ ಒಡನಾಡಿ ಬಾಲಕರ ಪುನ ರ್ವಸತಿ ಕೇಂದ್ರದ ಆವರಣದಲ್ಲಿ ಪತ್ರಿ ಕೋದ್ಯಮಿ ರಾಜಶೇಖರ ಕೋಟಿ ಸ್ಮರ ಣಾರ್ಥ ನೂತನವಾಗಿ ನಿರ್ಮಿಸಿರುವ `ಜೀವ ಸಂಗಮ’ ಸಭಾಂಗಣದ ಉದ್ಘಾ ಟನೆ ಹಾಗೂ ಇದೇ ಸಭಾಂಗಣದ ಎದುರು ಪ್ರತಿಷ್ಠಾಪಿಸಿರುವ ರಾಜಶೇಖರ ಕೋಟಿ ಅವರ ಪುತ್ಥಳಿ ಅನಾವರಣವನ್ನು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಶನಿವಾರ ನೆರವೇರಿಸಿದರು. ಬಳಿಕ ಮಾತನಾಡಿದ ಜಿ.ಟಿ.ದೇವೇ ಗೌಡ, ರಾಜಶೇಖರ ಕೋಟಿ…

ಮೈಸೂರಲ್ಲಿ ಭೂ ದಾಖಲೆಗಳ ಆಯುಕ್ತರಿಂದ ಪ್ರಗತಿ ಪರಿಶೀಲನೆ
ಮೈಸೂರು

ಮೈಸೂರಲ್ಲಿ ಭೂ ದಾಖಲೆಗಳ ಆಯುಕ್ತರಿಂದ ಪ್ರಗತಿ ಪರಿಶೀಲನೆ

July 7, 2019

ಮೈಸೂರು, ಜು. 6(ಆರ್‍ಕೆ)- ಭೂ ದಾಖಲೆಗಳ ಆಯುಕ್ತರೂ ಆಗಿರುವ ಹಿರಿಯ ಐಎಎಸ್ ಅಧಿಕಾರಿ ಮನಿಷ್ ಮೌಡ್ಗಿಲ್ ಅವರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ವೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಹೆಚ್ಚುವರಿ ಡಿಸಿ ಬಿ.ಆರ್. ಪೂರ್ಣಿಮಾ, ಉಪ ವಿಭಾಗಾಧಿಕಾರಿ ಶಿವೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕಿ ರಮ್ಯಾ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಭೂ ದಾಖಲೆಗಳು, ಪೋಡಿ, ದುರಸ್ತಿ, ಸರ್ಕಾರಿ ಭೂಮಿಗಳ ಸಂರಕ್ಷಣೆಗೆ ನಡೆಸಿರುವ ಸರ್ವೆ…

1 909 910 911 912 913 1,611
Translate »