ಬಿಜೆಪಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ಕೇಂದ್ರ ಸಚಿವ ಸದಾನಂದಗೌಡ ಚಾಲನೆ
ಮೈಸೂರು

ಬಿಜೆಪಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ಕೇಂದ್ರ ಸಚಿವ ಸದಾನಂದಗೌಡ ಚಾಲನೆ

July 7, 2019

ಮೈಸೂರು, ಜು.5(ಎಸ್‍ಬಿಡಿ)- ಮೈಸೂರು ನಗರ ಬಿಜೆಪಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ರಾಸಾ ಯನಿಕ ಹಾಗೂ ರಸಗೊಬ್ಬರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶನಿವಾರ ಚಾಲನೆ ನೀಡಿದರು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮೊಬೈಲ್‍ನಲ್ಲಿ ಮಿಸ್ಡ್ ಕಾಲ್ ನೀಡುವ ಮೂಲಕ ಅಭಿ ಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಲ್ಲಾ ಜನಪರ ಯೋಜನೆಗಳು, ಕಾರ್ಯಕ್ರಮ ಗಳನ್ನು ತಳಮಟ್ಟದಿಂದ ಜನರಿಗೆ ಸಮ ರ್ಪಕವಾಗಿ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಈ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಸಹಕಾರಿಯಾಗಲಿದೆ ಎಂದು ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ, ಸದಸ್ಯತ್ವ ನೋಂದಣಿಯಲ್ಲಿ ಮೈಸೂರು ನಗರ ಮೊದಲ ನಾಲ್ಕು ಸ್ಥಾನ ಗಳಲ್ಲಿ ಗುರುತಿಸಿಕೊಂಡಿದೆ. ಕಳೆದ ಬಾರಿ ಕೃಷ್ಣರಾಜ ಕ್ಷೇತ್ರದಲ್ಲಿ 1.65 ಲಕ್ಷ, ಚಾಮ ರಾಜ ಕ್ಷೇತ್ರದಲ್ಲಿ 1.10 ಲಕ್ಷ ಹಾಗೂ ನರ ಸಿಂಹರಾಜ ಕ್ಷೇತ್ರದಲ್ಲಿ 40 ಸಾವಿರ ಜನ ತಮ್ಮ ಹೆಸರು ನೋಂದಣಿ ಮಾಡಿದ್ದರು. ರಾಜ್ಯದ 80 ಲಕ್ಷ ಜನ ಅಭಿಯಾನಕ್ಕೆ ಬೆಂಬಲ ನೀಡಿದ್ದರು. ಈ ಬಾರಿ ಕೋಟಿಗೂ ಹೆಚ್ಚು ಜನರಿಂದ ನೋಂದಣಿ ಮಾಡಿ ಸುವ ಗುರಿ ಸಾಧಿಸಬೇಕಿದೆ ಎಂದು ಅವರು ಹೇಳಿದರು.

ಸಂಸದ ಪ್ರತಾಪಸಿಂಹ, ಶಾಸಕ ಎಲ್. ನಾಗೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಸಿದ್ದ ರಾಜು, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ನಗರಾಧ್ಯಕ್ಷ ಡಾ.ಬಿ. ಹೆಚ್.ಮಂಜುನಾಥ್, ಬಿಜೆಪಿ ರಾಜ್ಯ ಸಹ ವಕ್ತಾರರೂ ಆದ ಸ್ಲಂ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಘು, ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ. ಮಂಜುನಾಥ್, ಫಣೀಶ್, ಕಾರ್ಪೊ ರೇಟರ್ ಸತೀಶ್, ಸದಸ್ಯತ್ವ ಅಭಿಯಾನದ ಸಂಚಾಲಕ ರಾಜೇಶ್, ಸಹ ಸಂಚಾಲಕ ದೇವರಾಜ ಮತ್ತಿತರರು ಉಪಸ್ಥಿತರಿದ್ದರು.

Translate »