ಮೈಸೂರು

ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಜನಸ್ಪಂದನಾ ಕಾರ್ಯಕ್ರಮ
ಮೈಸೂರು

ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಜನಸ್ಪಂದನಾ ಕಾರ್ಯಕ್ರಮ

July 4, 2019

ಮೈಸೂರು,ಜು.3(ಎಸ್‍ಬಿಡಿ)- ಮೈಸೂರಿನ ಜೆ.ಕೆ.ಮೈದಾನದಲ್ಲಿ ನಾಳೆ (ಜು.4) ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಸಿದ್ಧತೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರಪಾಲಿಕೆ ಹಾಗೂ ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯ ನಾಗರಿಕರ ಸಮಸ್ಯೆಗಳನ್ನು ಒಂದೇ ಸೂರಿ ನಡಿ ಆಲಿಸಿ, ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದ್ದು, ಗುರುವಾರ ಬೆಳಿಗ್ಗೆ 9ರಿಂದ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿ, ಪರಿಹಾರ ಕಂಡು ಕೊಳ್ಳಬಹುದು ಎಂದರು. ಕುಡಿಯುವ ನೀರಿನ ಸಮಸ್ಯೆ,…

ರಾಜ್ಯದಲ್ಲಿ ಆಪರೇಷನ್ ಕಮಲಗೆ ಮೋದಿ, ಅಮಿತ್ ಶಾ ಮಾರ್ಗದರ್ಶನ
ಮೈಸೂರು

ರಾಜ್ಯದಲ್ಲಿ ಆಪರೇಷನ್ ಕಮಲಗೆ ಮೋದಿ, ಅಮಿತ್ ಶಾ ಮಾರ್ಗದರ್ಶನ

July 4, 2019

ಮೈಸೂರು, ಜು.3(ಎಂಟಿವೈ)- ಪ್ರಧಾನಿ ನರೇಂದ್ರ ಮೋದಿ ಅವರ ಕುಮ್ಮಕ್ಕು ಹಾಗೂ ಕೇಂದ್ರ ಸಚಿವ ಅಮಿತ್ ಶಾ ಮಾರ್ಗ ದರ್ಶನಲ್ಲಿಯೇ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿ ನಾಯಕರು ಕಸರತ್ತು ಮಾಡುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ. ಸಂವಿಧಾನಬಾಹಿರ ಕೃತ್ಯ ವಾದ ಆಪರೇಷನ್ ಕಮಲದ ಮೂಲಕ ಶಾಸಕರನ್ನು…

ಶೌಚಾಲಯದ ಸ್ವಚ್ಛತೆ ನಿರ್ವಹಿಸದ ಅಧಿಕಾರಿಗಳ ಅಮಾನತ್ತಿಗೆ ಜಿಟಿಡಿ ಸೂಚನೆ
ಮೈಸೂರು

ಶೌಚಾಲಯದ ಸ್ವಚ್ಛತೆ ನಿರ್ವಹಿಸದ ಅಧಿಕಾರಿಗಳ ಅಮಾನತ್ತಿಗೆ ಜಿಟಿಡಿ ಸೂಚನೆ

July 4, 2019

ಮೈಸೂರು,ಜು.3(ಆರ್‍ಕೆ)-ಎರಡನೇ ದಿನವೂ ಮೈಸೂರಲ್ಲಿ ನಗರ ಪ್ರದಕ್ಷಿಣೆ ಮುಂದುವರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ಗ್ರಾಮಾಂ ತರ ಬಸ್ ನಿಲ್ದಾಣದೆದುರಿನ ಸುಲಭ್ ಶೌಚಾಲಯದ ಸ್ವಚ್ಛತೆ ನಿರ್ವಹಿಸದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾ ನತುಗೊಳಿಸುವಂತೆ ಸೂಚಿಸಿದ್ದಾರೆ. ಇಂದು ಬೆಳಿಗ್ಗೆ ಶಾಸಕ ಎಲ್. ನಾಗೇಂದ್ರ ಹಾಗೂ ಮೇಯರ್ ಅವರೊಂದಿಗೆ ಚಾಮ ರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರದಕ್ಷಿಣೆ ನಡೆಸಿದ ಸಚಿವರಿಗೆ ಸಬರ್ಬನ್ ಬಸ್ ಸ್ಟ್ಯಾಂಡ್ ಎದುರು ಪಾಲಿಕೆಯಿಂದ ನಿರ್ಮಿಸಿರುವ ಶೌಚಾಲಯದ ಕರ್ಮ ಕಾಂಡದ ದರ್ಶನವಾಯಿತು. ಒಳಗೆ ಹೋಗುತ್ತಿದ್ದಂತೆಯೇ ಗಬ್ಬು ವಾಸನೆ ಬಂದಿತಲ್ಲದೆ, ಶೌಚಾಲಯದ…

ರೈಲ್ವೆ ಖಾಸಗೀಕರಣ ಹುನ್ನಾರಕ್ಕೆ ಕಾರ್ಮಿಕರ ವಿರೋಧ: ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಣೆ
ಮೈಸೂರು

ರೈಲ್ವೆ ಖಾಸಗೀಕರಣ ಹುನ್ನಾರಕ್ಕೆ ಕಾರ್ಮಿಕರ ವಿರೋಧ: ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಣೆ

July 4, 2019

ಮೈಸೂರು, ಜು.3(ಪಿಎಂ)- ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಉದ್ದೇಶಿಸಿದೆ ಎಂದು ಆರೋಪಿಸಿ ರಾಜ್ಯವೂ ಸೇರಿದಂತೆ ದೇಶದಾದ್ಯಂತ ರೈಲ್ವೆ ಕಾರ್ಮಿ ಕರು ವಾರ ಕಾಲ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಮೈಸೂರಿನಲ್ಲೂ ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್‍ನ ಮೈಸೂರು ವಿಭಾಗದ ವತಿಯಿಂದ ಬುಧವಾರ ವಿಭಾಗೀಯ ಕಾರ್ಯಕಾರಿ ಸಮಿತಿ ಸಭೆ ನಡೆಸಿ ರಾಷ್ಟ್ರದ ಆರ್ಥಿಕತೆಯ ಬೆನ್ನಲುಬಾದ ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು…

ಆಷಾಢ ಶುಕ್ರವಾರಕ್ಕೆ 35 ಸಾವಿರ ಲಾಡು ಸಿದ್ಧ
ಮೈಸೂರು

ಆಷಾಢ ಶುಕ್ರವಾರಕ್ಕೆ 35 ಸಾವಿರ ಲಾಡು ಸಿದ್ಧ

July 4, 2019

ಮೈಸೂರು, ಜು.3(ಎಂಕೆ)- ಮೈಸೂರಿನಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ಬರೋಬ್ಬರಿ 35 ಸಾವಿರ ಲಾಡು ತಯಾರಿಸಲಾಗುತ್ತಿದೆ. ಜೆ.ಪಿ. ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವು ಮೊದಲ ಆಷಾಡ ಶುಕ್ರವಾರ ದಿನದಂದು ಲಾಡುಗಳನ್ನು ವಿತರಿಸಲಾಗುತ್ತದೆ. ಚಾಮುಂಡೇಶ್ವರಿ ಸೇವಾ ಸಮಿತಿಯು ಕಳೆದ 28 ವರ್ಷದಿಂದ ನಾಡಿನ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, 13 ವರ್ಷದಿಂದ ಅನ್ನದಾನ ಹಾಗೂ 16 ವರ್ಷದಿಂದ…

ಚಾಮರಾಜ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪ್ರದಕ್ಷಿಣೆ
ಮೈಸೂರು

ಚಾಮರಾಜ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪ್ರದಕ್ಷಿಣೆ

July 4, 2019

ಮೈಸೂರು, ಜು.3(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬುಧವಾರ ಸಂಚರಿಸಿ ಸಾರ್ವಜನಿಕರ ಕುಂದು -ಕೊರತೆ ಆಲಿಸಿದ್ದು, ಈ ವೇಳೆ ಕೆಆರ್‍ಎಸ್ ರಸ್ತೆಯ ಲೋಕನಾಯಕನಗರ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಸ್ಪತ್ರೆ ಆವ ರಣದಲ್ಲಿ ನಿರ್ಮಿಸುತ್ತಿರುವ ಶವಾಗಾರ ಸ್ಥಳಾಂತರ ಮಾಡುವಂತೆ ಲೋಕನಾಯಕ ನಗರ ನಿವಾಸಿಗಳು ಆಗ್ರಹಿಸಿದರು. ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಸೇರಿದಂತೆ ಅಧಿಕಾರಿಗಳೊಂ ದಿಗೆ ಬುಧವಾರ ಕ್ಷೇತ್ರದಲ್ಲಿ ಸಂಚರಿಸಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಸಾರ್ವ ಜನಿಕರ ಅಹವಾಲು…

7.5 ಕೋಟಿ ರೂ. ಜಿಎಸ್‍ಟಿ ವಂಚಿಸಿದ್ದ ಉದ್ಯಮಿ ಬಂಧನ
ಮೈಸೂರು

7.5 ಕೋಟಿ ರೂ. ಜಿಎಸ್‍ಟಿ ವಂಚಿಸಿದ್ದ ಉದ್ಯಮಿ ಬಂಧನ

July 4, 2019

ಮೈಸೂರು,ಜು.3(ಎಂಟಿವೈ)- ನಕಲಿ ಇನ್‍ವಾಯ್ಸ್ ಹಾಜರುಪಡಿಸಿ 7.5 ಕೋಟಿ ಜಿಎಸ್‍ಟಿ ವಂಚಿಸಿದ್ದ ಉದ್ಯಮಿಯೊಬ್ಬರನ್ನು ಕೇಂದ್ರ ಜಿಎಸ್‍ಟಿ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೈಸೂರಿನ ಹೂಟಗಳ್ಳಿಯಲ್ಲಿ ಸ್ಪೆಟ್ರಾ ಪೈಪ್ ಕಂಪನಿ ನಡೆಸುತ್ತಿದ್ದ ಅನಿಲ್ ಮೆಹ್ರಾ ಎಂಬುವರೇ ನಕಲಿ ಇನ್‍ವಾಯ್ಸ್ ನೀಡಿ ಜಿಎಸ್‍ಟಿ ವಂಚಿಸಿ ಬಂಧನಕ್ಕೊಳಗಾದ ಉದ್ಯಮಿಯಾಗಿದ್ದಾರೆ. ಕೃಷಿ ಚಟುವಟಿಕೆಗೆ ನೀರು ಸರಬರಾಜು ಮಾಡಲು ಬಳಸುವ ಪ್ಲಾಸ್ಟಿಕ್ (ಪಿವಿಸಿ) ಪೈಪ್ ತಯಾರಿಕಾ ಸಂಸ್ಥೆ ನಡೆಸುತ್ತಿರುವ ಅನಿಲ್ ಮೆಹ್ರಾ, ತಮ್ಮ ಸಂಸ್ಥೆಗೆ 50 ಕೋಟಿ ರೂ. ಮೌಲ್ಯದ ಕಚ್ಚಾ ವಸ್ತು…

ಬಂಡಿಪಾಳ್ಯ ಎಪಿಎಂಸಿಯಲ್ಲಿ 8 ಅಂಗಡಿ ಕಳವಿಗೆ ಯತ್ನ
ಮೈಸೂರು

ಬಂಡಿಪಾಳ್ಯ ಎಪಿಎಂಸಿಯಲ್ಲಿ 8 ಅಂಗಡಿ ಕಳವಿಗೆ ಯತ್ನ

July 4, 2019

ಮೈಸೂರು, ಜು. 3(ಆರ್‍ಕೆ)- ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಯದ ಎಪಿಎಂಸಿ ಯಾರ್ಡ್‍ನ 8 ಅಂಗಡಿಗಳ ರೋಲಿಂಗ್ ಶೆಟರ್ ಮೀಟಿರುವ ಖದೀಮರು, ಆ ಪೈಕಿ 4 ಅಂಗಡಿಗಳಲ್ಲಿ ಸುಮಾರು 10,000 ರೂ. ಹಣ ಕಳವು ಮಾಡಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ. ಮುಂಜಾನೆ 1.30ರ ನಂತರ ಕಾರ್ಯಾ ಚರಣೆ ನಡೆಸಿರುವ ಕಳ್ಳರು, ಸದಾಶಿವ ಟ್ರೇಡರ್ಸ್, ಹಿತೇಶ್ ಟ್ರೇಡರ್ಸ್, ಜೈ ಮಾತಾಜಿ ಎಂಟರ್‍ಪ್ರೈಸಸ್, ವೆಂಕಟೇಶ್ವರ ಟ್ರೇಡಿಂಗ್ ಕಾರ್ಪೊರೇಷನ್, ನವರತನ್ ಸ್ಪೈಸೀಸ್, ಈಶ್ವರಿ ಎಂಟರ್‍ಪ್ರೈಸಸ್, ನಂದೀಶ ಟ್ರೇಡರ್ಸ್ ಅಂಗಡಿಗಳ ಶೆಟರ್ ಅನ್ನು…

ಅರ್ಬನ್ ಹಾತ್‍ನಲ್ಲಿ ಇಂದಿನಿಂದ `ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ’
ಮೈಸೂರು

ಅರ್ಬನ್ ಹಾತ್‍ನಲ್ಲಿ ಇಂದಿನಿಂದ `ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ’

July 4, 2019

ಮೈಸೂರು, ಜು.3(ಎಂಟಿವೈ)- ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಅರ್ಬನ್ ಹಾತ್‍ನಲ್ಲಿ ನಾಳೆಯಿಂದ(ಜು.4) 14ರವರೆಗೆ `ಗುಜ ರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ-2019’ ನಡೆಯ ಲಿದ್ದು, 75 ಕುಶಲಕರ್ಮಿಗಳು ಕಲಾತ್ಮಕ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಿದ್ದಾರೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಇಂಡೆಕ್ಸ್ಟ್ ಸಹಯೋಗದೊಂದಿಗೆ ಈ ಮೇಳವನ್ನು ಆಯೋ ಜಿಸಲಾಗಿದೆ. ಕುಶಲಕರ್ಮಿಗಳು ತಾವೇ ತಯಾರಿ ಸಿದ…

ದಾವಣಗೆರೆ ಯುವತಿ ಚಾ.ಬೆಟ್ಟದಲ್ಲಿ ನಾಪತ್ತೆ
ಮೈಸೂರು

ದಾವಣಗೆರೆ ಯುವತಿ ಚಾ.ಬೆಟ್ಟದಲ್ಲಿ ನಾಪತ್ತೆ

July 4, 2019

ಮೈಸೂರು, ಜು.3-ಕುಟುಂಬ ಸಮೇತರಾಗಿ ದೇವರ ದರ್ಶನಕ್ಕೆ ಬಂದಿದ್ದ ದಾವಣಗೆರೆ ಯುವತಿ ಚಾಮುಂಡಿಬೆಟ್ಟದಲ್ಲಿ ನಾಪತ್ತೆಯಾದ ಬಗ್ಗೆ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣ ಗೆರೆಯ ಮಲ್ಲೇಶ್ ಎಂಬುವರ ಪುತ್ರಿ ಆಶಾ(22) ತನ್ನ ತಂದೆ-ತಾಯಿ ಯೊಂದಿಗೆ ಚಾಮುಂಡಿಬೆಟ್ಟಕ್ಕೆ ಜುಲೈ 2ರಂದು ಬಂದಿದ್ದು, ಮೂವರೂ ದೇವರ ದರ್ಶನಕ್ಕೆ ತೆರಳಿದಾಗ ತನಗೆ ಹೊಟ್ಟೆ ನೋವು ಎಂದು ಹೇಳಿ ಆಶಾ ದೇವಸ್ಥಾನದ ಹೊರಗೆ ಕುಳಿತಿದ್ದು, ದೇವಸ್ಥಾನದಿಂದ ಹೊರಗೆ ಬರುವುದರೊಳಗಾಗಿ ನಾಪತ್ತೆಯಾಗಿ ದ್ದಾಳೆ ಎಂದು ಆಕೆಯ ತಂದೆ ಮಲ್ಲೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ….

1 911 912 913 914 915 1,611
Translate »