ಅರ್ಬನ್ ಹಾತ್‍ನಲ್ಲಿ ಇಂದಿನಿಂದ `ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ’
ಮೈಸೂರು

ಅರ್ಬನ್ ಹಾತ್‍ನಲ್ಲಿ ಇಂದಿನಿಂದ `ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ’

July 4, 2019

ಮೈಸೂರು, ಜು.3(ಎಂಟಿವೈ)- ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಅರ್ಬನ್ ಹಾತ್‍ನಲ್ಲಿ ನಾಳೆಯಿಂದ(ಜು.4) 14ರವರೆಗೆ `ಗುಜ ರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ-2019’ ನಡೆಯ ಲಿದ್ದು, 75 ಕುಶಲಕರ್ಮಿಗಳು ಕಲಾತ್ಮಕ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಿದ್ದಾರೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಇಂಡೆಕ್ಸ್ಟ್ ಸಹಯೋಗದೊಂದಿಗೆ ಈ ಮೇಳವನ್ನು ಆಯೋ ಜಿಸಲಾಗಿದೆ. ಕುಶಲಕರ್ಮಿಗಳು ತಾವೇ ತಯಾರಿ ಸಿದ ಉತ್ಪನ್ನಗಳಾದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್‍ಶೀಟ್‍ಗಳು, ಟವಲ್ ಗಳು, ಕುಶನ್ ಕವರ್‍ಗಳು, ಪರಿಸರ ವರ್ಕ್, ಕುರ್ತಿ ಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿ ತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನ ಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ ಎದರು.

ನಾಳೆ (ಜು.4) ಸಂಜೆ 4 ಗಂಟೆಗೆ ಹೆಬ್ಬಾಳು ಕೈಗಾ ರಿಕಾ ಪ್ರದೇಶದಲ್ಲಿರುವ(ರಿಂಗ್ ರಸ್ತೆ) ಜೆಎಸ್‍ಎಸ್ ಮೈಸೂರು ಅರ್ಬನ್‍ಹಾತ್ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮೇಳವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಲಿದ್ದು, ಜವಳಿ ಅಭಿವೃದ್ಧಿ ಆಯುಕ್ತ ಹಾಗೂ ನಿರ್ದೇಶಕ ಎಂ.ಆರ್.ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ್, ಕಾರ್ಯದರ್ಶಿ ಎಸ್.ಶಿವ ಕುಮಾರಸ್ವಾಮಿ, ಜಂಟಿ ನಿರ್ದೇಶಕ ಡಾ.ಬಿ.ಆರ್. ಉಮಾಕಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ ಎಂದರು. ಗೋಷ್ಠಿಯಲ್ಲಿ ಇಂಡೆಕ್ಟ್ಸ್-ಸಿ ವ್ಯವಸ್ಥಾಪಕ ಡಾ.ಎಸ್.ಡಿ.ಮಕ್ವಾನ, ಎಂ.ಶಿವನಂಜಸ್ವಾಮಿ, ಅನಿ ಕೇತನ ಸಂಸ್ಥೆಯ ಅನಿರುಧ್ ಮತ್ತು ಕಾರ್ಯಕ್ರಮ ಸಂಯೋಜನಾಧಿಕಾರಿ ರಾಕೇಶ್ ರೈ ಇದ್ದರು.

Translate »