ದಾವಣಗೆರೆ ಯುವತಿ ಚಾ.ಬೆಟ್ಟದಲ್ಲಿ ನಾಪತ್ತೆ
ಮೈಸೂರು

ದಾವಣಗೆರೆ ಯುವತಿ ಚಾ.ಬೆಟ್ಟದಲ್ಲಿ ನಾಪತ್ತೆ

July 4, 2019

ಮೈಸೂರು, ಜು.3-ಕುಟುಂಬ ಸಮೇತರಾಗಿ ದೇವರ ದರ್ಶನಕ್ಕೆ ಬಂದಿದ್ದ ದಾವಣಗೆರೆ ಯುವತಿ ಚಾಮುಂಡಿಬೆಟ್ಟದಲ್ಲಿ ನಾಪತ್ತೆಯಾದ ಬಗ್ಗೆ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣ ಗೆರೆಯ ಮಲ್ಲೇಶ್ ಎಂಬುವರ ಪುತ್ರಿ ಆಶಾ(22) ತನ್ನ ತಂದೆ-ತಾಯಿ ಯೊಂದಿಗೆ ಚಾಮುಂಡಿಬೆಟ್ಟಕ್ಕೆ ಜುಲೈ 2ರಂದು ಬಂದಿದ್ದು, ಮೂವರೂ ದೇವರ ದರ್ಶನಕ್ಕೆ ತೆರಳಿದಾಗ ತನಗೆ ಹೊಟ್ಟೆ ನೋವು ಎಂದು ಹೇಳಿ ಆಶಾ ದೇವಸ್ಥಾನದ ಹೊರಗೆ ಕುಳಿತಿದ್ದು, ದೇವಸ್ಥಾನದಿಂದ ಹೊರಗೆ ಬರುವುದರೊಳಗಾಗಿ ನಾಪತ್ತೆಯಾಗಿ ದ್ದಾಳೆ ಎಂದು ಆಕೆಯ ತಂದೆ ಮಲ್ಲೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಇರುವವರು ಕೆ.ಆರ್.ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418309 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Translate »