ಮೈಸೂರು

ವೇಶ್ಯಾವಾಟಿಕೆ: 6 ಮಂದಿ ಬಂಧನ
ಮೈಸೂರು

ವೇಶ್ಯಾವಾಟಿಕೆ: 6 ಮಂದಿ ಬಂಧನ

July 3, 2019

ಮೈಸೂರು,ಜು.2(ಎಂಟಿವೈ)-ಮೈಸೂರಿನ ಡಿಸಿಐಬಿ ಶಾಖೆಯ ಪೊಲೀಸರು ವೀರ ರಾಜೇ ಅರಸ್ ಬಡಾವಣೆಯ ಮನೆಯೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಓರ್ವ ಮಹಿಳೆಯನ್ನು ರಕ್ಷಿಸಿ ಇಬ್ಬರು ಗ್ರಾಹಕರು ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಿ 9 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಮೈಸೂರು ಹೆಚ್.ಡಿ.ಕೋಟೆ ರಸ್ತೆಯಲ್ಲಿ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವೀರ ರಾಜೇ ಅರಸ್ ಬಡಾವಣೆ ನಿವಾಸಿ ಸರಸ್ವತಿ, ಅಭಿಷೇಕ್, ರವಿ ಕುಮಾರ್, ಸಂದೇಶ್ ಕುಮಾರ್ ಎಂಬುವರು ತಮ್ಮ ಮನೆಯಲ್ಲಿಯೇ ಮಹಿಳೆಯರು ಹಾಗೂ ಯುವತಿಯರನ್ನು…

ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭ
ಮೈಸೂರು

ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭ

July 2, 2019

ಬೆಂಗಳೂರು,ಜು.1(ಕೆಎಂಶಿ)-ಕಾಂಗ್ರೆಸ್‍ನ ಶಾಸಕರಾದ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರುಗಳು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸ ದಲ್ಲಿರುವಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭವಾಗಿದೆ. ಇವರಿಬ್ಬರು ಮಾತ್ರವಲ್ಲದೇ, ಇನ್ನೂ ಏಳು ಶಾಸಕರು ರಾಜೀನಾಮೆ ನೀಡ ಲಿದ್ದಾರೆ ಎಂಬ ಮಾತುಗಳು ಕೇಳಿಬರು ತ್ತಿದ್ದು, ಈ ಹಿಂದೆ `ರಾಜೀನಾಮೆ ಕೊಟ್ಟರೆ ನಾನೊಬ್ಬನೇ ಕೊಡುವುದಿಲ್ಲ, ನಾವೆಲ್ಲಾ ಒಂದು ಗುಂಪಾಗಿ ರಾಜೀನಾಮೆ ಕೊಡು ತ್ತೇವೆ’ ಎಂದು ರಮೇಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ನಿಜವಾಗುವುದೇ? ಎಂಬ ಪ್ರಶ್ನೆ ರಾಜಕೀಯ…

ಮೈತ್ರಿ ಸರ್ಕಾರ ಪತನವಾದರೆ ನಾವು ಸರ್ಕಾರ ರಚಿಸುತ್ತೇವೆ
ಮೈಸೂರು

ಮೈತ್ರಿ ಸರ್ಕಾರ ಪತನವಾದರೆ ನಾವು ಸರ್ಕಾರ ರಚಿಸುತ್ತೇವೆ

July 2, 2019

ಬೆಂಗಳೂರು, ಜು.1(ಕೆಎಂಶಿ)- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಗೊಂಡರೆ ಹೊಸ ಸರ್ಕಾರ ರಚನೆ ಮಾಡುತ್ತೇವೆ, ನಾವೇನೂ ಸನ್ಯಾಸಿಗಳಲ್ಲ, ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ ಎಂದು ವಿಧಾನ ಸಭೆಯ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಈ ಸ್ಪಷ್ಟ ಉತ್ತರ ನೀಡಿದರು. ನಾವಾಗಿಯೇ ಈ ಸರ್ಕಾರ ಉರುಳಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಪುನ ರುಚ್ಛರಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್‍ನ 20ರಷ್ಟು…

ಪೊಲೀಸ್ ಭದ್ರತೆಯಲ್ಲಿ ಕಡೆಗೂ ವಿಷ್ಣು ಸ್ಮಾರಕ ಕಾಮಗಾರಿ ಆರಂಭ
ಮೈಸೂರು

ಪೊಲೀಸ್ ಭದ್ರತೆಯಲ್ಲಿ ಕಡೆಗೂ ವಿಷ್ಣು ಸ್ಮಾರಕ ಕಾಮಗಾರಿ ಆರಂಭ

July 2, 2019

ಮೈಸೂರು: ಪೊಲೀಸ್ ಭಾರೀ ಭದ್ರತೆಯೊಂದಿಗೆ ಕಡೆಗೂ ಮೈಸೂರಲ್ಲಿ ಉದ್ದೇಶಿತ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಇಂದು ಆರಂಭ ವಾಯಿತು. ಮೈಸೂರು ತಾಲೂಕು, ಹಾಲಾಳು ಗ್ರಾಮದ ಬಳಿ ಉದ್ಬೂರು ಗೇಟ್ ಎದುರು ಹೆಚ್.ಡಿ.ಕೋಟೆ ರಸ್ತೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಪತ್ನಿ ಶ್ರೀಮತಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್, ಗೆಳೆಯ ಆಲ್ವಿನ್, ಮೈಸೂರು ತಹಶೀಲ್ದಾರ್ ಟಿ.ರಮೇಶ್‍ಬಾಬು ಅವರ ಸಮ್ಮುಖದಲ್ಲಿ ಡಾ. ವಿಷ್ಣು ಸ್ಮಾರಕ ನಿರ್ಮಾ ಣದ ಕಾಮಗಾರಿಯನ್ನು ಆರಂಭಿಸಲಾಯಿತು. ಈ ವೇಳೆ ಆ ಜಮೀನಿನಲ್ಲಿ ಸ್ವಾಧೀನಾ ನುಭವದಲ್ಲಿದ್ದೆವು ಎಂದು ಹೇಳಲಾದ…

ಇಬ್ಬರು ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನ ಆರಂಭವಾಗಿದೆ
ಮೈಸೂರು

ಇಬ್ಬರು ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನ ಆರಂಭವಾಗಿದೆ

July 2, 2019

ಮೈಸೂರು, ಜು.1(ಎಂಟಿವೈ)- ರಾಜ್ಯದ ಸಮ್ಮಿಶ್ರ ಸರ್ಕಾರ ಮೇಲೆ ಯಾರಿಗೂ ನಂಬಿಕೆಯಿಲ್ಲದಂತಾಗಿದೆ. ಬಿಜೆಪಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸರ್ಕಾರದ ಪತನ ಆರಂಭವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವೇನೂ ಆಪರೇಷನ್ ಕಮಲ ಮಾಡುತ್ತಿಲ್ಲ, ಮಾಡೋದು ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಸ್ಫೋಟವಾಗಲಿದೆ. ದೋಸ್ತಿ ಸರ್ಕಾರ ಪತನವಾದರೆ ನಾವು ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿ…

ದಸರಾ ಒಳಗಾಗಿ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣ
ಮೈಸೂರು

ದಸರಾ ಒಳಗಾಗಿ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣ

July 2, 2019

ಮೈಸೂರು, ಜು. 1(ಆರ್‍ಕೆ)- ಬಹು ನಿರೀಕ್ಷಿತ ಹಾಗೂ ವಿವಾದಾತ್ಮಕವಾದ ಮೈಸೂರಿನ ಅತ್ಯಂತ ಹಳೆಯ ಇರ್ವಿನ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯು 2019ರ ದಸರಾ ಒಳಗಾಗಿ ಪೂರ್ಣಗೊಳ್ಳಲಿದೆ. ಅಗಲೀಕರಣಕ್ಕೆ ಅಡ್ಡಿಯಾಗಿರುವ ವಾಣಿಜ್ಯ ಕಟ್ಟಡಗಳ ಕೆಲ ಭಾಗವನ್ನು ಖರೀದಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯು, ಮಾಲೀಕ ರಿಗೆ ಪರಿಹಾರದ ಹಣವನ್ನು ನೀಡಿದ ತಕ್ಷಣವೇ ನೋಂದಣಿ ಮಾಡಿಸಿಕೊಂಡು ತೆರವುಗೊಳಿಸು ತ್ತಿದೆ. ನೆಹರು ಸರ್ಕಲ್‍ನಿಂದ ಸರ್ಕಾರಿ ಆಯು ರ್ವೇದ ಕಾಲೇಜು ಸರ್ಕಲ್‍ವರೆಗೆ ಇರ್ವಿನ್ ರಸ್ತೆಯ ಇಕ್ಕೆಲಗಳಲ್ಲಿ ಒಟ್ಟು 84 ಆಸ್ತಿಗಳಿದ್ದು ಆ ಪೈಕಿ…

ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ ಮಂಡನೆ
ಮೈಸೂರು

ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ ಮಂಡನೆ

July 2, 2019

ನವದೆಹಲಿ, ಜು. 1- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸೋಮವಾರ ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದು ಪಡಿ ಮಸೂದೆ ಮಂಡಿಸಿದ್ಧಾರೆ. ಮಂಡನೆ ವೇಳೆ ಜಮ್ಮು-ಕಾಶ್ಮೀರದ ಇತಿಹಾಸ ಕೆದಕಿದ ಅಮಿತ್ ಶಾ, ಕಾಂಗ್ರೆಸ್ಸಿಗೆ ತೀವ್ರ ತರಾಟೆ ತೆಗೆದುಕೊಂಡರು. ಅಲ್ಲದೇ ರಾಷ್ಟ್ರಪತಿ ಆಡಳಿತವನ್ನು ಇನ್ನೂ ಆರು ತಿಂಗಳ ವರೆಗೂ ವಿಸ್ತರಿಸಲು ಪ್ರಸ್ತಾವ ಸಲ್ಲಿಸಿ ದ್ದೇನೆ ಎಂದು ರಾಜ್ಯಸಭೆಗೆ ತಿಳಿಸಿದರು. ಕಳೆದ 3 ದಿನಗಳ ಹಿಂದೆ ಲೋಕ ಸಭೆಯಲ್ಲಿ ಕೂಡ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದಪಡಿ ಮಸೂದೆ ಯನ್ನು ಅಮಿತ್…

ಸತ್ಯ ಶೋಧಿಸದೇ ಸುದ್ದಿ ಮಾಡುವುದು ದ್ರೋಹ ಮಾಡಿದಂತೆ
ಮೈಸೂರು

ಸತ್ಯ ಶೋಧಿಸದೇ ಸುದ್ದಿ ಮಾಡುವುದು ದ್ರೋಹ ಮಾಡಿದಂತೆ

July 2, 2019

ಮೈಸೂರು,ಜು.1(ಆರ್‍ಕೆ)- ಸತ್ಯ ಶೋಧಿಸದೇ ಸುದ್ದಿ ಮಾಡುವುದು ದ್ರೋಹ ಬಗೆದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಬಿಜಿ, ರಾಜಶೇಖರ ಕೋಟಿ, ಅಂಶಿ ಪ್ರಸನ್ನಕುಮಾರ್ ರಂತಹ ಹಿರಿಯರು ಬೆಳೆಸಿದ ಮೈಸೂರು ಪತ್ರಿಕೋದ್ಯಮಕ್ಕೆ ವಿಶಿಷ್ಟ ಸ್ಥಾನವಿದೆ. ಪತ್ರಕರ್ತರಿಗೆ ಜವಾಬ್ದಾರಿಯೂ ಇದೆ. ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಬೇಕು ಎಂದರು. ವಿಷಯಾಧಾರಿತ ಹಾಗೂ ಸತ್ಯಾಧಾರಿತ ಸುದ್ದಿ ಗಳನ್ನು ಜನರು ಬಯಸುತ್ತಾರೆ. ಕೃಷಿ, ಆರೋಗ್ಯ,…

ಗರ್ಭಿಣಿ ಮಹಿಳೆ ಕೊಲೆ ಆರೋಪ
ಮೈಸೂರು

ಗರ್ಭಿಣಿ ಮಹಿಳೆ ಕೊಲೆ ಆರೋಪ

July 2, 2019

ಮೈಸೂರು,ಜು.1(ಎಸ್‍ಪಿಎನ್)- ಹೆಚ್ಚಿನ ವರದಕ್ಷಿಣೆಗಾಗಿ 7 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿ, ನೇತು ಹಾಕಿ ಪರಾರಿಯಾಗಿರುವ ಗಂಡ ಮತ್ತು ಆತನ ಕುಟುಂಬಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಮಾರಶೆಟ್ಟ ಹಳ್ಳಿ ಗ್ರಾಮಸ್ಥರು ಕೆ.ಆರ್.ಆಸ್ಪತ್ರೆ ಮುಂಭಾಗದಲ್ಲಿ ದಿಢೀರ್ ರಸ್ತೆ ತಡೆ ನಡೆಸಿ, ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ನಂತರ ಮೃತ ಸೌಮ್ಯರ ಅಣ್ಣ ರಾಜು ಮಾಧ್ಯಮಗಳೊಂದಿಗೆ ಮಾತನಾಡಿ, `ಒಂದು ವರ್ಷದ ಹಿಂದೆ ಯರಗನಹಳ್ಳಿ ಶಿವು ಎಂಬಾತನಿಗೆ ನನ್ನ ತಂಗಿ ಸೌಮ್ಯರನ್ನು ಅದ್ಧೂರಿ ಮದುವೆ ಮಾಡಿಕೊಟ್ಟೆವು. ಮದುವೆಯಾದ ಮೂರು ತಿಂಗಳ ಗರ್ಭಿಣಿಗೆ…

ಪತ್ರಿಕೋದ್ಯಮದ ಪಿತಾಮಹ ತಾತಯ್ಯ ಪ್ರತಿಮೆ ಮುಂದೆ ಪತ್ರಿಕಾ ದಿನಾಚರಣೆ
ಮೈಸೂರು

ಪತ್ರಿಕೋದ್ಯಮದ ಪಿತಾಮಹ ತಾತಯ್ಯ ಪ್ರತಿಮೆ ಮುಂದೆ ಪತ್ರಿಕಾ ದಿನಾಚರಣೆ

July 2, 2019

ಮೈಸೂರು,ಜು.1(ಎಂಟಿವೈ)-ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸೋಮ ವಾರ ಮೈಸೂರಿನ ತಾತಯ್ಯ ಪಾರ್ಕ್‍ನ ಲ್ಲಿರುವ ಪತ್ರಿಕೋದ್ಯಮ ಪಿತಾಮಹ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಾರ್ವ ಜನಿಕರಿಗೆ ಸಿಹಿ ವಿತರಿಸುವುದರೊಂದಿಗೆ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವಂತೆ ಅಭಿಯಾನ ನಡೆಸಲಾಯಿತು. ವಿವಿಧ ಸಂಘಟನೆಗಳ ಮುಖಂಡರು ತಾತಯ್ಯ ಪಾರ್ಕ್‍ಗೆ ಆಗಮಿಸಿ ತಾತಾಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಅಲ್ಲದೆ ಸಾರ್ವಜನಿ ಕರಿಗೆ ಕನ್ನಡ ಪತ್ರಿಕೆಯನ್ನು ವಿತರಿಸುವ ಮೂಲಕ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವಂತೆ ಮನವರಿಕೆ…

1 913 914 915 916 917 1,611
Translate »