ಮೈಸೂರು, ಜು. 1(ಆರ್ಕೆ)- ಬಹು ನಿರೀಕ್ಷಿತ ಹಾಗೂ ವಿವಾದಾತ್ಮಕವಾದ ಮೈಸೂರಿನ ಅತ್ಯಂತ ಹಳೆಯ ಇರ್ವಿನ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯು 2019ರ ದಸರಾ ಒಳಗಾಗಿ ಪೂರ್ಣಗೊಳ್ಳಲಿದೆ.
ಅಗಲೀಕರಣಕ್ಕೆ ಅಡ್ಡಿಯಾಗಿರುವ ವಾಣಿಜ್ಯ ಕಟ್ಟಡಗಳ ಕೆಲ ಭಾಗವನ್ನು ಖರೀದಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯು, ಮಾಲೀಕ ರಿಗೆ ಪರಿಹಾರದ ಹಣವನ್ನು ನೀಡಿದ ತಕ್ಷಣವೇ ನೋಂದಣಿ ಮಾಡಿಸಿಕೊಂಡು ತೆರವುಗೊಳಿಸು ತ್ತಿದೆ. ನೆಹರು ಸರ್ಕಲ್ನಿಂದ ಸರ್ಕಾರಿ ಆಯು ರ್ವೇದ ಕಾಲೇಜು ಸರ್ಕಲ್ವರೆಗೆ ಇರ್ವಿನ್ ರಸ್ತೆಯ ಇಕ್ಕೆಲಗಳಲ್ಲಿ ಒಟ್ಟು 84 ಆಸ್ತಿಗಳಿದ್ದು ಆ ಪೈಕಿ 15.98 ಕೋಟಿ ರೂ. ಪರಿಹಾರ ನೀಡಿ 56 ಕಟ್ಟಡ ಗಳ ಭಾಗವನ್ನು ನೆಲಸಮಗೊಳಿಸಲಾಗಿದೆ. ವಶ ಪಡಿಸಿಕೊಳ್ಳುವ ಕಟ್ಟಡದ ಜಾಗಕ್ಕೆ ಪರಿಹಾರ ನೀಡಲು ಸರ್ಕಾರ 35 ಕೋಟಿ ರೂ. ಮಂಜೂರು ಮಾಡಿದ್ದು, ಈಗಾಗಲೇ 23.5. ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಉಳಿದ ಕಟ್ಟಡ ಗಳ ಮಾಲೀಕರಿಗೆ ಪರಿಹಾರದ ಹಣ ನೀಡಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆ ಯನ್ನು 2ನೇ ಹಂತದಲ್ಲಿ ಆರಂಭಿಸಿರುವ ಮಹಾ ನಗರಪಾಲಿಕೆ ವಲಯದ 6ರ ಅಸಿಸ್ಟೆಂಟ್ ಕಮೀ ಷ್ನರ್ ಗೀತಾ ಉಡೇದ ಹಾಗೂ ಅಭಿವೃದ್ಧಿ ಅಧಿ ಕಾರಿ ಹೆಚ್.ನಾಗರಾಜು ಕಟ್ಟಡದ ಭಾಗವನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ವಕ್ಫ್ ಮಂಡಳಿ ಕಾರ್ಯದರ್ಶಿ ಎ.ಬಿ. ಇಬ್ರಾಹಿಂರೊಂದಿಗೆ ತಾವು ಮತ್ತು ಪಾಲಿಕೆ ಕಮೀಷ್ನರ್ ಶಿಲ್ಪಾನಾಗ್ ಅವರು ಸಮಾಲೋಚನೆ ನಡೆಸಿದಾಗ, ತಮಗೆ ವಶಪಡಿ ಸಿಕೊಳ್ಳುವ ಜಾಗಕ್ಕೆ ಬದಲಾಗಿ ಮೈಸೂರು ನಗರದಲ್ಲಿ ಬೇರೆ ಜಾಗ ಕೊಡಿಸಿ ಹಾಗೂ ನೆಲಸಮಗೊಳಿ ಸುವ ಮಸೀದಿ ಗೋಪುರಗಳಂತೆಯೇ ಒಳಭಾಗ ದಲ್ಲಿ ಗೋಪುರವನ್ನು ನಿರ್ಮಿಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.
ಆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಉಳಿದಂತೆ ಕಟ್ಟಡಗಳ ನೆಲಸಮಕ್ಕೆ ಯಾವುದೇ ಅಡ್ಡಿ ಇಲ್ಲ. ಅಗಲೀಕರಣ ಕಾಮಗಾರಿ ಯನ್ನು ಜುಲೈ ಅಂತ್ಯದಲ್ಲಿ ಆರಂಭಿಸಿ ದಸರಾ ಆರಂಭವಾಗುವುದರೊಳಗಾಗಿ ನ್ಯೂ ಬ್ರಾಂಡ್ ಇರ್ವಿನ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿ ಸಲಾಗುವುದು ಎಂದು ಮೇಯರ್ ತಿಳಿಸಿದರು.
ಎರಡು ಕಡೆಗಳಲ್ಲಿ 4 ಅಡಿ ಫುಟ್ಪಾತ್, ಮಧ್ಯೆ 2 ಅಡಿ ವಿಭಜಕ ಸೇರಿ 18 ಮೀಟರ್ ಅಗಲದ 4 ಪಥದ ರಸ್ತೆಯನ್ನಾಗಿ ಇರ್ವಿನ್ರಸ್ತೆ ರೂಪು ಗೊಳ್ಳಲಿದ್ದು, ಎರಡೂ ಕಡೆಗಳಲ್ಲೂ ಕಾಂಕ್ರಿಟ್ ಬಾಕ್ಸ್ ಡ್ರೇನ್ ಹಾಗೂ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಜುಲೈ ತಿಂಗಳಲ್ಲಿ ಬಾಕಿ ಉಳಿದಿರುವ ಕಟ್ಟಡಗಳ ಭಾಗ ಸಹ ಕಟ್ಟಡಗಳನ್ನು ವಶಪಡಿಸಿ ನೆಲಸಮಗೊಳಿಸುವ ಕೆಲಸವನ್ನು ಪೂರ್ಣಗೊಳಿಸಿ, ಆಗಸ್ಟ್ ತಿಂಗಳಿಂದ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಆರಂಭಿಸಿ ಎರಡೂವರೆ ತಿಂಗಳೊಳಗಾಗಿ ಪೂರ್ಣಗೊಳಿಸಲು ನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.