ವೇಶ್ಯಾವಾಟಿಕೆ: 6 ಮಂದಿ ಬಂಧನ
ಮೈಸೂರು

ವೇಶ್ಯಾವಾಟಿಕೆ: 6 ಮಂದಿ ಬಂಧನ

July 3, 2019

ಮೈಸೂರು,ಜು.2(ಎಂಟಿವೈ)-ಮೈಸೂರಿನ ಡಿಸಿಐಬಿ ಶಾಖೆಯ ಪೊಲೀಸರು ವೀರ ರಾಜೇ ಅರಸ್ ಬಡಾವಣೆಯ ಮನೆಯೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಓರ್ವ ಮಹಿಳೆಯನ್ನು ರಕ್ಷಿಸಿ ಇಬ್ಬರು ಗ್ರಾಹಕರು ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಿ 9 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಮೈಸೂರು ಹೆಚ್.ಡಿ.ಕೋಟೆ ರಸ್ತೆಯಲ್ಲಿ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವೀರ ರಾಜೇ ಅರಸ್ ಬಡಾವಣೆ ನಿವಾಸಿ ಸರಸ್ವತಿ, ಅಭಿಷೇಕ್, ರವಿ ಕುಮಾರ್, ಸಂದೇಶ್ ಕುಮಾರ್ ಎಂಬುವರು ತಮ್ಮ ಮನೆಯಲ್ಲಿಯೇ ಮಹಿಳೆಯರು ಹಾಗೂ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿಯನ್ನು ಸ್ಥಳೀಯರು ಡಿಸಿಐಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಎಎಸ್‍ಪಿ ಸ್ನೇಹ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸುನೀಲ್ ಕುಮಾರ್, ಸಬ್ ಇನ್ಸ್‍ಪೆಕ್ಟರ್ ಯಾಸ್ಮಿನ್ ತಾಜ್, ಸಿಬ್ಬಂದಿಗಳಾದ ಎಂ.ಕೆ. ಸಂದೀಪ್, ಬಿ.ಆರ್. ಸುನೀಲ್, ಸಿ.ಎಸ್. ರಾಮಪ್ರಸಾದ್, ಎಂ.ಸಿ. ಕುಮುದಾ ಹಾಗೂ ಜೀಪ್ ಚಾಲಕ ಸಿದ್ದಲಿಂಗು ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.
ಬಂದಿದ್ದ ನಾಲ್ವರು ಆರೋಪಿಗಳ ವಿರುದ್ಧ ಐಟಿಪಿ ಆ್ಯಕ್ಟ್ 3, 4, 5, 6 ಮತ್ತು 7 ಮೊಕದ್ದಮೆ ದಾಖಲಿಸಿ ದಕ್ಷಿಣ ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ.

Translate »