ಪಿಎಂಕೆಎಸ್‍ಎನ್ ಯೋಜನೆ ಅನುಷ್ಠಾನ ಚುರುಕು
ಹಾಸನ

ಪಿಎಂಕೆಎಸ್‍ಎನ್ ಯೋಜನೆ ಅನುಷ್ಠಾನ ಚುರುಕು

July 3, 2019

ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ
ಹಾಸನ,ಜು.2- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂಕೆಎಸ್‍ಎನ್) ಯೋಜನೆಯಡಿ ಅರ್ಹ ರೈತರಿಂದ ಸ್ವೀಕರಿಸಿದ ಹಾಗೂ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಪರಿ ಪೂರ್ಣವಾಗಿ ಗಣಕೀಕರಣಗೊಳಿಸಿ ಎಂದು ಜಿಲ್ಲಾಧಿ ಕಾರಿ ಅಕ್ರಂ ಪಾಷ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಮಂಗಳವಾರ ಪಿಎಂಕೆಎಸ್ ಯೋಜನೆಗೆ ಸಂಬಂಧಿಸಿದಂತೆ ಸಂಬಂಧ ಪಟ್ಟ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಪ್ರತಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮನೆ ಮನೆಗೂ ಭೇಟಿ ನೀಡಿ ರೈತರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಪರಿಪೂರ್ಣ ವಾದವುಗಳನ್ನು ಗಣಕೀಕರಣಗೊಳಿಸಬೇಕು ಎಂದರು.

ಸಮಸ್ಯಾತ್ಮಕ ಅರ್ಜಿಗಳಿದ್ದಲ್ಲಿ ಅದಕ್ಕೆ ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅರ್ಹವಲ್ಲದ ಅರ್ಜಿ ಗಳನ್ನು ತಿರಸ್ಕರಿಸಬೇಕು ಎಂದು ಕೃಷಿ ಇಲಾಖೆ, ತೊಟ ಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಹಸೀಲ್ದಾರ್‍ಗಳ ಮಾರ್ಗದರ್ಶನದಂತೆಯೇ ನೋಡಲ್ ಅಧಿಕಾರಿಗಳು ಮುಂದಿನ ವಾರದೊಳಗಾಗಿ ಎಲ್ಲಾ ರೈತರಿಂದಲೂ ಅರ್ಜಿಗಳನ್ನು ಯಾವುದೇ ಸಮಸ್ಯೆಗಳಿಲ್ಲದಂತೆ ಪಡೆಯಬೇಕು, ಪೌತಿ ಖಾತೆಗಳನ್ನು ಸಹ ಪರಿಶೀಲಿಸಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ವೇತನ ವಿತರಣೆಗೆ ಅಗತ್ಯವಿರುವ ಆಧಾರ್ ನೋಂದಣಿ ಯನ್ನು ಆದಷ್ಟು ಬೇಗ ಮುಗಿಸಬೇಕು ಎಂದರು.

ರೈತರಿಂದ ಪೂರ್ಣ ಹಾಗೂ ನಿಖರ ಮಾಹಿತಿ ಪಡೆಯಬೇಕು. ಆಧಾರ್ ಕಾರ್ಡ್ ಜೋಡಣೆ ವ್ಯವಸ್ಥೆ ನಡೆಯಬೇಕು ಎಂದು ಎಡಿಸಿ ಎಂ.ಎಲ್.ವೈಶಾಲಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ಡಿಡಿಪಿಐ ಮಂಜುನಾಥ್ ಮತ್ತಿತರರು ಸಭೆಯಲ್ಲಿದ್ದರು.

ರೈತರಿಗೆ ಡಿಸಿ ಮನವಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಕೃಷಿಕರಿಗೂ ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಚುರುಕಿನಿಂದ ಕೆಲಸ ನಿರ್ವಹಿಸು ತ್ತಿದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅರ್ಹ ರೈತರ ದಾಖಲೆಗಳ ಗಣಕೀರಣವನ್ನು ನಡೆಸುತ್ತಿದೆ. ಕಂದಾಯ, ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಬ್ಯಾಂಕ್‍ಗಳ ಸಿಬ್ಬಂದಿ ನೆರವಿ ನಿಂದ ಪ್ರತಿಯೊಬ್ಬ ಅರ್ಹ ರೈತರ ದಾಖಲೆಗಳ ಸಂಗ್ರಹ, ಪರಿಶೀಲನೆ ಮತ್ತು ಗಣಕೀಕರಣ ನಡೆಸಲಾಗುತ್ತಿದೆ. ರೈತರು ಸಹ ಆಧಾರ್ ಕಾರ್ಡ್, ಆರ್‍ಟಿಸಿ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಗ್ರಾಮ ಲೆಕ್ಕಿಗರು ಅಥವಾ ಕೃಷಿ ಸಂಪರ್ಕ ಕೇಂದ್ರಗಳಿಗೆ ನೀಡಿ ಪಿಎಂಕೆಎಸ್‍ಎನ್ ಯೋಜನೆಯ ಲಾಭ ಪಡೆದುಕೊಳ್ಳಬೇಕು.

ಅಧಿಕಾರಿಗಳೂ ಪ್ರತಿ ತಾಲೂಕಿನಲ್ಲಿಯೂ ರೈತರ ಮನೆಗಳಿಗೇ ಭೇಟಿ ನೀಡಿ ರೈತರ ಸಂಪೂರ್ಣ ಹಾಗೂ ನಿಖರ ಮಾಹಿತಿ ಸಂಗ್ರಹಿಸಬೇಕು ಹಾಗೂ ಆಟೋ ಮೂಲಕ ಕರಪತ್ರ ಹಂಚಿ ಹೆಚ್ಚಿನ ಪ್ರಚಾರ ನಡೆಸಬೇಕು. – ಅಕ್ರಂ ಪಾಷ, ಜಿಲ್ಲಾಧಿಕಾರಿ

Translate »