ಶೌಚಾಲಯದ ಸ್ವಚ್ಛತೆ ನಿರ್ವಹಿಸದ ಅಧಿಕಾರಿಗಳ ಅಮಾನತ್ತಿಗೆ ಜಿಟಿಡಿ ಸೂಚನೆ
ಮೈಸೂರು

ಶೌಚಾಲಯದ ಸ್ವಚ್ಛತೆ ನಿರ್ವಹಿಸದ ಅಧಿಕಾರಿಗಳ ಅಮಾನತ್ತಿಗೆ ಜಿಟಿಡಿ ಸೂಚನೆ

July 4, 2019

ಮೈಸೂರು,ಜು.3(ಆರ್‍ಕೆ)-ಎರಡನೇ ದಿನವೂ ಮೈಸೂರಲ್ಲಿ ನಗರ ಪ್ರದಕ್ಷಿಣೆ ಮುಂದುವರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ಗ್ರಾಮಾಂ ತರ ಬಸ್ ನಿಲ್ದಾಣದೆದುರಿನ ಸುಲಭ್ ಶೌಚಾಲಯದ ಸ್ವಚ್ಛತೆ ನಿರ್ವಹಿಸದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾ ನತುಗೊಳಿಸುವಂತೆ ಸೂಚಿಸಿದ್ದಾರೆ.

ಇಂದು ಬೆಳಿಗ್ಗೆ ಶಾಸಕ ಎಲ್. ನಾಗೇಂದ್ರ ಹಾಗೂ ಮೇಯರ್ ಅವರೊಂದಿಗೆ ಚಾಮ ರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರದಕ್ಷಿಣೆ ನಡೆಸಿದ ಸಚಿವರಿಗೆ ಸಬರ್ಬನ್ ಬಸ್ ಸ್ಟ್ಯಾಂಡ್ ಎದುರು ಪಾಲಿಕೆಯಿಂದ ನಿರ್ಮಿಸಿರುವ ಶೌಚಾಲಯದ ಕರ್ಮ ಕಾಂಡದ ದರ್ಶನವಾಯಿತು.

ಒಳಗೆ ಹೋಗುತ್ತಿದ್ದಂತೆಯೇ ಗಬ್ಬು ವಾಸನೆ ಬಂದಿತಲ್ಲದೆ, ಶೌಚಾಲಯದ ಸ್ವಚ್ಛತೆ ಕಾಪಾಡದಿರುವುದು ಕಂಡಿತು. ಸರಿಯಾಗಿ ನೀರೂ ಬರುತ್ತಿರಲಿಲ್ಲ, ನೋಡುವವರೇ ಇಲ್ಲದನ್ನು ಗಮನಿಸಿದ ಸಚಿವ ಜಿ.ಟಿ. ದೇವೇಗೌಡರು, ಸ್ಥಳದಲ್ಲಿದ್ದ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರತೀದಿನ ಸಾವಿರಾರು ಪ್ರಯಾಣಿಕರು ಓಡಾಡುವ ಬಸ್ ನಿಲ್ದಾಣದೆದುರೇ ಇರುವ ಸುಲಭ್ ಶೌಚಾಲಯವನ್ನು ಇಷ್ಟು ಕೆಟ್ಟದಾಗಿಟ್ಟಿರುವುದರಿಂದ ಜನರು ಪಕ್ಕದ ಫುಟ್‍ಪಾತ್‍ನಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಕೆಂಡಾಮಂಡಲ ವಾದ ಜಿ.ಟಿ.ದೇವೇಗೌಡರು, ಅದನ್ನು ಮೇಲ್ವಿಚಾರಣೆ ಮಾಡಬೇಕಾದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತು ಗೊಳಿಸಿ ಬೇರೆಯವರಿಗೆ ಜವಾಬ್ದಾರಿ ನೀಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಿ ಎಂದು ಜೊತೆಯಲ್ಲಿದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಸೂಚನೆ ನೀಡಿದರು.

ಶಾಸಕ ಎಲ್.ನಾಗೇಂದ್ರ ಸಹ ಅಧಿಕಾರಿ ಗಳ ವಿರುದ್ಧ ಹರಿಹಾಯ್ದರಲ್ಲದೆ, ನಿರ್ಲಕ್ಷ್ಯ ವಹಿಸಿದವರಿಗೆ ತಕ್ಕ ಶಾಸ್ತಿಯಾಗಬೇಕೆಂದರು.

ಸಬರ್ಬನ್ ಬಸ್ ಸ್ಟ್ಯಾಂಡ್ ಎದುರಿನ ರಸ್ತೆ ವಿಭಜಕದಲ್ಲಿ ಅಳವಡಿಸಿರುವ ಕಬ್ಬಿಣದ ಬ್ಯಾರಿಕೇಡ್‍ಗಳನ್ನು ತೆಗೆದು ಸ್ಟೀಲ್ ಬ್ಯಾರಿಕೇಡ್ ಅಳವಡಿಸಿ ಒಳಭಾಗದಲ್ಲಿ ಲಾನ್ ಬೆಳೆಸುವ ಮೂಲಕ ಆ ರಸ್ತೆಯ ಸೌಂದರ್ಯ ಹೆಚ್ಚಿಸಬೇಕೆಂದು ಶಾಸಕರು ನೀಡಿದ ಸಲಹೆಯಂತೆ ಸೌಂದರ್ಯೀಕರಣ ಗೊಳಿಸುವಂತೆ ಸಚಿವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲಿನ ಟ್ಯಾಕ್ಸಿ ಸ್ಟ್ಯಾಂಡಿಗೆ ತೆರಳಿ ಪರಿ ಶೀಲಿಸಿದ ಸಚಿವರು, ಮಲ್ಟಿಲೆವೆಲ್ ಪಾರ್ಕಿಂಗ್ ಮಾಡಿ ಮತ್ತೊಂದು ಹೈಟೆಕ್ ಶೌಚಾಲಯ ನಿರ್ಮಿಸಬೇಕು, ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜ ನಿಕರ ಉಪಯೋಗಕ್ಕೆ ಅವಕಾಶ ನೀಡು ವಂತೆಯೂ ಜಿಟಿಡಿ ಸಲಹೆ ನೀಡಿದರು.

ಬೆಂಗಳೂರು ಕಡೆಗೆ ಹೋಗುವ ಸ್ಥಳದಲ್ಲಿ ಸಾರಿಗೆ ಬಸ್ಸುಗಳು ರಸ್ತೆಯಲ್ಲೇ ನಿಂತು ಪ್ರಯಾಣಿಕರನ್ನು ಪಿಕ್‍ಅಪ್ ಮಾಡುತ್ತಿರುವುದರಿಂದ ಪದೇ ಪದೆ ಟ್ರಾಫಿಕ್ ಜಾಮ್ ಆಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬಸ್ ಚಾಲಕರಿಗೆ ಬಸ್ ಸ್ಟ್ಯಾಂಡ್ ಒಳಗೇ ಪ್ರಯಾಣಿಕರನ್ನು ಹತ್ತಿಸಿಕೊಂಡು ರಸ್ತೆಯಲ್ಲಿ ನಿಲ್ಲದೇ ಹೊರ ಹೋಗುವಂತೆ ಸೂಚಿಸಿ ಎಂದು ದೇವರಾಜ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಸೂರಜ್ ಅವರಿಗೆ ಸಚಿವರು ನಿರ್ದೇಶನ ನೀಡಿದರು.

ದಸರೆಯೊಳಗೆ ಇರ್ವಿನ್ ರಸ್ತೆ ಅಭಿವೃದ್ಧಿ: ನಂತರ ಇರ್ವಿನ್ ರಸ್ತೆ ವೀಕ್ಷಿಸಿದ ಸಚಿವರಿಗೆ ಅಗಲೀಕರಣ ಕಾಮಗಾರಿಯ ಪ್ರಗತಿ ಕುರಿತಂತೆ ಪಾಲಿಕೆ ವಲಯಾಧಿಕಾರಿ ಗೀತಾ ಸುಡೇದ ಅವರು ವಿವರಿಸಿದರು. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿ.ಟಿ. ದೇವೇಗೌಡರು, ಈಗಾಗಲೇ 56 ಕಟ್ಟಡ ಗಳ ಸ್ವಾಧೀನ ಭಾಗವನ್ನು ನೆಲಸಮ ಗೊಳಿಸಿದ್ದು, ಹಂತ ಹಂತವಾಗಿ ಮುಂದೆ ಪರಿಹಾರ ನೀಡಿ ನೋಂದಣಿ ಮಾಡಿಸಿ ಕೊಂಡು ತೆರವುಗೊಳಿಸಲಾಗುವುದು ಎಂದರು.

ಈಗಾಗಲೇ ವಕ್ಫ್ ಮಂಡಳಿ ಆಯುಕ್ತ ಎ.ಬಿ. ಇಬ್ರಾಹಿಂರೊಂದಿಗೆ ಮೇಯರ್, ಪಾಲಿಕೆ ಆಯುಕ್ತರು ಸಮಾಲೋಚನೆ ನಡೆ ಸಿದ್ದಾರೆ. ಮಸೀದಿ ಜಾಗ ತೆರವುಗೊಳಿ ಸಲು ಅವರು ತಿಳಿಸಿರುವ ಬೇಡಿಕೆ ಅನು ಸಾರ ಕ್ರಮ ವಹಿಸಲು ಸೂಚಿಸಿದ್ದೇವೆ. ರಸ್ತೆ ಅಗಲೀಕರಣಕ್ಕೆ ಇನ್ನಾವುದೇ ವಿವಾದ ವಿಲ್ಲ. ಶೀಘ್ರ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿ ದಸರಾ ಒಳಗಾಗಿ ಮುಕ್ತಾಯಗೊಳಿಸಲಾಗುವುದು ಎಂದು ಜಿ.ಟಿ. ದೇವೇಗೌಡರು ತಿಳಿಸಿದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮದ್, ಮಾಜಿ ಮೇಯರ್ ರವಿ, ಕಾರ್ಪೊರೇಟರ್ ಗಳಾದ ಪ್ರೇಮಾ ಶಂಕರೇಗೌಡ, ಎಂ.ಡಿ. ನಾಗರಾಜು, ಎಸ್‍ಬಿಎಂ ಮಂಜು, ಸುಬ್ಬಯ್ಯ, ಲಕ್ಷ್ಮಿ ಶಿವಣ್ಣ ಸೇರಿದಂತೆ ಹಲವರು ಈ ವೇಳೆ ನಗರ ಪ್ರದಕ್ಷಿಣೆಯಲ್ಲಿ ಉಪಸ್ಥಿತರಿದ್ದರು.

ಎಡಿಸಿ ಬಿ.ಆರ್.ಪೂರ್ಣಿಮಾ, ಮುಡಾ ಆಯುಕ್ತ ಪಿ.ಎಸ್. ಕಾಂತರಾಜು, ಸೂಪ ರಿಂಟೆಂ ಡಿಂಗ್ ಇಂಜಿನಿಯರ್ ಬಿ.ಕೆ. ಸುರೇಶ್ ಬಾಬು, ಪಾಲಿಕೆ ಉಪ ಆಯುಕ್ತ ಶಿವಾ ನಂದಮೂರ್ತಿ, ಸೂಪರಿಂಟೆಂಡಿಂಗ್ ಇಂಜಿ ನಿಯರ್ ಮಹೇಶ ಸೇರಿದಂತೆ ಎಲ್ಲಾ ಇಲಾ ಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Translate »