ಜು.12ರಂದು ಮೈಸೂರಿಗೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಭೇಟಿ
ಮೈಸೂರು

ಜು.12ರಂದು ಮೈಸೂರಿಗೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಭೇಟಿ

July 7, 2019

ಜು.13ರ ಸಿಐಐಎಲ್ ಸುವರ್ಣ ಮಹೋತ್ಸವದಲ್ಲಿ ಭಾಗಿ
ಮೈಸೂರು, ಜು.6(ಆರ್‍ಕೆ)- ಭಾರತದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಜುಲೈ 12ರಂದು ಮೈಸೂರಿಗೆ ಆಗಮಿಸುವರು. ಜುಲೈ 12ರಂದು ಸಂಜೆ 6.30ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ನೇರವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವವರು ಅಂದು ರಾತ್ರಿ ಮೈಸೂರಿನ ನಜರ್‍ಬಾದ್‍ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿರುವ ಅವರು, ಮರು ದಿನ (ಜು.13) ಬೆಳಿಗ್ಗೆ 9.30 ಗಂಟೆಗೆ ಹುಣಸೂರು ರಸ್ತೆಯಲ್ಲಿ ರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್)ಯಲ್ಲಿ ಏರ್ಪಡಿಸಿರುವ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ರಾಜ್ಯಪಾಲ ವಜುಬಾಯಿ ರೂಡಾ ಬಾಯ್ ವಾಲಾ ಅವರು ಉಪರಾಷ್ಟ್ರಪತಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗ ವಹಿಸುವರು. ನಂತರ ಬೆಳಿಗ್ಗೆ 11.45 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ವೆಂಕಯ್ಯ ನಾಯ್ಡು ಅವರು ನೇರವಾಗಿ ದೆಹಲಿಗೆ ತೆರಳುವರು.

Translate »