ಮೈಸೂರು,ಜು.7(ವೈಡಿಎಸ್)- ಹೆಬ್ಬಾಳ್‍ನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಜು.4 ರಿಂದ 14ರವರೆಗೆ 10 ದಿನಗಳ ಕಾಲ `ಗುಜರಾತ್ ಕರಕುಶಲ ಉತ್ಸವ’ವನ್ನು ಆಯೋಜಿಸಲಾಗಿದೆ.
ಜೆಎಸ್‍ಎಸ್ ಅರ್ಬನ್ ಹಾತ್, ಗುಜ ರಾತ್ ಸರ್ಕಾರದ ಅಂಗ ಸಂಸ್ಥೆಯಾದ ಇಂಡಸ್ಟ್ರಿಯಲ್ ಎಕ್ಸ್‍ಟೆನ್ಷನ್ ಕಾಟೇಜ್ (ಇಂಡೆಕ್ಸ್-ಸಿ) ಸಹಯೋಗದೊಂದಿಗೆ ಆಯೋಜಿಸಿರುವ ಕರಕುಶಲ ಉತ್ಸವದಲ್ಲಿ ಗುಜರಾತ್‍ನ ವಿವಿಧ ಭಾಗಗಳಿಂದ 75 ಮಂದಿ ಕುಶಲಕರ್ಮಿಗಳು ಭಾಗವಹಿ ಸಿದ್ದು, ತಾವೇ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ.
ಮೇಳದಲ್ಲಿ ಪಟೋಲ, ಬಾಂದಿನಿ ಸೀರೆ ಗಳು, ಕಸೂತಿ ಮಾಡಿದ ಬೆಡ್‍ಶೀಟ್‍ಗಳು, ಟವಲ್, ಕುಶನ್ ಕವರ್. ಪರಿಸರಸ್ನೇಹಿ ಆಭ ರಣಗಳು, ಡ್ರೆಸ್ ಮೆಟೀರಿಯಲ್‍ಗಳು, ಮಣ್ಣಿ ನಿಂದ ತಯಾರಿಸಿದ ವಸ್ತುಗಳು, ಬೀಡ್‍ವರ್ಕ್, ಮೆಟಲ್ ವರ್ಕ್, ಕುರ್ತಾಗಳು, ಚನಿಯಾ ಚೋಲಿ, ಬಾಂದನಿ ಇನ್ನಿತರೆ ಅಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು ಕೈಗೆಟಕುವ ದರದಲ್ಲಿ ದೊರೆಯಲಿವೆ. ಜತೆಗೆ ಗುಜರಾತಿನ ಪ್ರಸಿದ್ಧ ರುಚಿಕರವಾದ ಖಾದ್ಯ ಗಳು, ಸಿಹಿ ತಿಂಡಿ ತಿನಿಸುಗಳು ಲಭ್ಯವಿವೆ.
ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ ಸೂರಮಠ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಜೆಎಸ್‍ಎಸ್ ಅರ್ಬನ್ ಹಾತ್‍ನಿಂದ ಪ್ರತಿ ತಿಂಗಳು ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದ್ದು, ಇಂದಿನಿಂದ ಆರಂಭವಾಗಿರುವ ಗುಜರಾತ್ ಕರಕುಶಲ ಉತ್ಸವ 105ನೇ ಕಾರ್ಯಕ್ರಮವಾಗಿದೆ. ಈ ಉತ್ಸವದಲ್ಲಿ 75ಕ್ಕೂ ಹೆಚ್ಚು ಕುಶಲ ಕರ್ಮಿಗಳು ಭಾಗವಹಿಸಿದ್ದು, ತಮ್ಮ ರಾಜ್ಯದ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ. ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಜತೆಗೆ ಜು.7ರಂದು ಗಾಲ್ಬಾನ್ ನೃತ್ಯವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ (ಯೋಜನೆ ಮತ್ತು ಅಭಿವೃದ್ಧಿ) ನಿರ್ದೇಶಕ ಡಾ.ಸಿ.ರಂಗನಾಥಯ್ಯ, ಜಂಟಿ ನಿರ್ದೇಶಕ(ಯೋಜನೆ) ಬಿ.ಆರ್. ಉಮಾಕಾಂತ್, ಗುಜರಾತ್‍ನ ಇಂಡೆಕ್ಸ್ಟ್-ಸಿ ವ್ಯವಸ್ಥಾಪಕ(ಕ್ಲಾಸ್-1) ಆರ್.ಆರ್. ಜಾಧವ್, ಮಾರುಕಟ್ಟೆ ವ್ಯವಸ್ಥಾಪಕ ಡಾ.ಎಸ್.ಡಿ.ಮಕ್ವಾನ ಕಾರ್ಯಕ್ರಮ ಸಂಯೋಜನಾಧಿಕಾರಿ ರಾಕೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.