ಮೈಸೂರು, ಜೂ.24(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಸೋಮವಾರ ಮೈಸೂ ರಿನ 57ನೇ ವಾರ್ಡ್‍ನಲ್ಲಿ ಜನಸ್ಪಂದನಾ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಗತ್ಯ ನಿರ್ವಹಣೆ ಇಲ್ಲದೆ, ನೀರಿಲ್ಲದೆ ಒಣಗುತ್ತಿರುವ ಉದ್ಯಾನವನದ ಗಿಡಗಳು, ಟ್ರಾಫಿಕ್ ಸಮಸ್ಯೆ, ಕೆಟ್ಟು ನಿಂತಿರುವ ಸಿಗ್ನಲ್, ಅಸಮರ್ಪಕ ನೀರಿನ ಪೂರೈಕೆ ಇತ್ಯಾದಿ ಹಲವು ದೂರುಗಳು ಕೇಳಿ ಬಂದವು. ಕುವೆಂಪುನಗರ 57ನೇ ವಾರ್ಡ್‍ನ ಹೊಂಗೆ ಮರದ ಉದ್ಯಾನವನ, ಉಮಾ ಮಹೇಶ್ವರಿ ಉದ್ಯಾನವನ, ಕೆಹೆಚ್‍ಬಿ ಕಾಂಪ್ಲೆಕ್ಸ್, ಲವಕುಶ ಉದ್ಯಾನವನ, ಸೌಗಂಧಿಕ ಉದ್ಯಾ ನವನ, ಮಸಣಿಕಮ್ಮ ದೇವಸ್ಥಾನ, ಅಂಬೇಡ್ಕರ್…
ಸಸಿ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಸಂಸ್ಮರಣೆ
June 25, 2019ಮೈಸೂರು, ಜೂ.24(ಆರ್‍ಕೆಬಿ)- ಮೈಸೂರಿನ ಪರಿಸರ ಸ್ನೇಹಿ ತಂಡದ ಸದಸ್ಯರು ಗಾಂಧಿ ನಗರದ ಶಿವಯೋಗಿ ಶಾಲಾವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನವನ್ನು ಆಚರಿಸಿದರು. ಮೊದಲಿಗೆ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ವಿವಿಧ ಗಿಡಗಳನ್ನು ನೆಟ್ಟು ನೀರೆರೆದರು. ಬಳಿಕ ಮಾತನಾಡಿದ ಬಿಜೆಪಿ ಯುವ ಮುಖಂಡ ಚೇತನ್ ಮಂಜುನಾಥ್, ಭಾರತ ಸ್ವಾತಂತ್ರ್ಯಗೊಂಡ ನಂತರ ಮೊದಲ ಕೈಗಾರಿಕಾ ಮಂತ್ರಿಯಾಗಿದ್ದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ದೇಶದ ಕೈಗಾ ರಿಕಾ ಕ್ಷೇತ್ರದಲ್ಲಿ…
ಜೂ.27ರಂದು ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಕೃತಿ ಬಿಡುಗಡೆ
June 25, 2019ಮೈಸೂರು, ಜೂ.24- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ಮಹಿಮಾ ಪ್ರಕಾಶನ ಸಹಯೋಗದಲ್ಲಿ ಸಂಸ್ಕøತಿ ಚಿಂತಕ, ಅಂಕಣಕಾರ ಡಾ. ಗುಬ್ಬಿ ಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಅಂಕಣ ಬರಹಗಳ ಸಂಕಲನದ ಕೃತಿ ಲೋಕಾರ್ಪಣೆ ಸಮಾರಂಭವನ್ನು ಜೂ.27 ರಂದು ಸಂಜೆ 4.30 ಗಂಟೆಗೆ ಕಲಾ ಮಂದಿ ರದ ಕಿರುರಂಗಮಂದಿರ ಆವರಣದಲ್ಲಿ ಆಯೋಜಿಸಲಾಗಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎ.ಎಚ್. ವಿಶ್ವನಾಥ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಗೀತ ನಿರ್ದೇಶಕ…
ಜೂ.29ರಂದು ಉದ್ಯೋಗ ಮೇಳ
June 25, 2019ಮೈಸೂರು,ಜೂ.24-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೈಸೂರು-ಬೆಂಗಳೂರಿನ ಹೆಸರಾಂತ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆ ಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಗಾಗಿ ಜೂ.29ರಂದು ಬೆಳಿಗ್ಗೆ 10 ಘಂಟೆಯಿಂದ ಉದ್ಯೋಗ ಮೇಳವನ್ನು ಸರ್ಕಾರಿ ಕೈಗಾರಿಕಾ ತರ ಬೇತಿ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಪಾಸು/ಫೇಲು, ಪಿಯುಸಿ/ಪದವಿ/ಐಟಿಐ/ಡಿಪ್ಲೋಮ/ಎಂ.ಬಿ.ಎ/ಸ್ನಾತಕೋ ತ್ತರದಲ್ಲಿ ತೇರ್ಗಡೆ ಹೊಂದಿದ 18ರಿಂದ 35 ವರ್ಷ ವಯೋಮಿತಿ ಪುರುಷ ಮತ್ತು ಮಹಿಳಾ ಅಭ್ಯರ್ಥಿ ಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿ ಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ವಿದ್ಯಾ…
ತಳ ಮಟ್ಟಕ್ಕೆ ಕುಸಿಯುತ್ತಿದೆ ಕೆಆರ್‍ಎಸ್, ಹಾರಂಗಿ ನೀರಿನ ಮಟ್ಟ
June 24, 2019ಮೈಸೂರು: ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್ ಹಾಗೂ ಹಾರಂಗಿ ಜಲಾಶಯಗಳ ನೀರಿನ ಪ್ರಮಾಣ ತಳಮಟ್ಟ(ಡೆಡ್ ಸ್ಟೋರೇಜ್)ಕ್ಕೆ ಕುಸಿಯುತ್ತಿದ್ದು, ಮೈಸೂರು, ಬೆಂಗಳೂರು ಹಾಗೂ ಇನ್ನಿತರ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿರುವ ಆತಂಕ ಎದುರಾಗಿದೆ. ಈ ಬಾರಿ ಮುಂಗಾರು ವಿಫಲವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಇದೀಗ ಕೃಷಿ ಚಟುವಟಿಕೆಗೆ ಮಾತ್ರವಲ್ಲದೆ ಕುಡಿಯುವ ನೀರಿನ ಸರಬ ರಾಜು ಮಾಡುವುದಕ್ಕೂ ಸಾಧ್ಯವಾಗದಂತಹ ದುಸ್ಥಿತಿ ಎದುರಾಗುವ ಆತಂಕ ನಿರ್ಮಾಣವಾಗಿದೆ. ಸಾಮಾನ್ಯ ವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ…
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಯೂ-ಟ್ಯೂಬ್ ನಲ್ಲಿ ಸ್ಫೋಟಕ ಮಾಹಿತಿ
June 24, 2019ಬೆಂಗಳೂರು: ವೀಡಿಯೋ ಅಪ್‍ಲೋಡ್ ಮಾಡುವ ಮೂಲಕ ಪ್ರತ್ಯಕ್ಷನಾಗಿದ್ದಾನೆ. ಆತ ಹಲವಾರು ಸ್ಫೋಟಕ ಮಾಹಿತಿ ಗಳನ್ನು ಹೇಳುವ ಮೂಲಕ ರಾಜಕಾರಣಿಗಳು, ಉದ್ಯಮಿ ಗಳು ಹಾಗೂ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ್ದಾನೆ. ಐಎಂಎ ಸಂಸ್ಥೆಯನ್ನು ಮುಗಿಸುವ ಯತ್ನದಲ್ಲಿ ಕೆಲ ರಾಜಕಾರಣಿಗಳು ಹಾಗೂ ಉದ್ಯಮಿಗಳು ಯಶಸ್ವಿಯಾಗಿ ದ್ದಾರೆ ಎಂದಿರುವ ಆತ, ಅವರೆಲ್ಲರಿಗೂ ಅಭಿನಂದನೆ ತಿಳಿಸಿ ದ್ದಾನೆ. ತಾನು ಹಲವರಿಗೆ ಹಣ ನೀಡಿದ್ದು, ಅದರ ಪಟ್ಟಿಯನ್ನು ತನಿಖಾಧಿಕಾರಿಗಳು ಹಾಗೂ ನ್ಯಾಯಾಲಯಕ್ಕೆ ನೀಡುವು ದಾಗಿ ಆತ ಹೇಳಿದ್ದಾನೆ. ತನ್ನನ್ನು ಮುಗಿಸಲು ಕೆಲವು ರಾಜಕಾರಣಿ ಗಳು ಸಂಚು…
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಇನ್ನು ಮುಂದೆ ಕಾಂಗ್ರೆಸ್ ಟಿಕೆಟ್ ಇಲ್ಲ
June 24, 2019ಮೈಸೂರು: ಮುಂಬರುವ ಚುನಾವಣೆಗಳಲ್ಲಿ ನಿಷ್ಠಾವಂತ ಕಾರ್ಯ ಕರ್ತರಿಗೆ ಮೊದಲ ಆದ್ಯತೆಯನ್ನು ನೀಡುವುದರ ಜತೆಗೆ ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡದಂತೆ ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾನುವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತ ನಾಡಿದ ಅವರು, ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘಟನೆಗೆ ಇಳಿಯಬೇಕು. ಯಾವುದೇ ದೊಡ್ಡ ನಾಯಕರು ತಮ್ಮವರ…
ದಮ್ಮನಕಟ್ಟೆ ಸಫಾರಿ ಇನ್ನೂ ಸುಲಭ
June 24, 2019ಮೈಸೂರು: ನಾಗರಹೊಳೆ ಅಭಯಾರಣ್ಯದ ಅಂತರ ಸಂತೆ ವಲಯದ ದಮ್ಮನಕಟ್ಟೆ ಸಫಾರಿ ವಾಹನಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದ್ದು, ಸರ್ಕಾರಿ ರಜೆ ಮತ್ತು ವಾರಾಂತ್ಯ ರಜೆ ದಿನಗಳಂದು ಸಫಾರಿ ಅವಧಿ ಒಂದೂವರೆ ಗಂಟೆಗೆ ಸೀಮಿತಗೊಳಿಸಿ ಹೆಚ್ಚುವರಿಯಾಗಿ ಒಂದು ಟ್ರಿಪ್ ಸಫಾರಿ ವ್ಯವಸ್ಥೆ ಮಾಡಲಾಗಿದೆ. ಕಬಿನಿ ಹಿನ್ನೀರು ಹಾಗೂ ಅಂತರಸಂತೆ ವಲಯದಲ್ಲಿ ಸಫಾರಿ ಮಾಡಲು ಪ್ರವಾಸಿಗರು ಮುಗಿ ಬೀಳುತ್ತಿ ದ್ದಾರೆ. ಆದರೆ ಈ ವಲಯದಲ್ಲಿ 3 ಮಿನಿ ಬಸ್‍ಗಳನ್ನಷ್ಟೇ ಸಫಾರಿಗೆ ನಿಯೋಜಿಸಲಾ ಗಿದೆ. ಅದರಲ್ಲಿ 2 ಬಸ್ಸು 27 ಆಸನದ್ದಾಗಿ ದ್ದರೆ, 1…
ಕೋಟಿ ವೆಚ್ಚದ ಸಿಎಂ ಗ್ರಾಮ ವಾಸ್ತವ್ಯ
June 24, 2019ಕಲಬುರಗಿ, ಜೂ.23- ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಹಾಸಿಗೆ ಬೇಡವೆಂದು ಹೇಳಿ ಚಾಪೆ ಮೇಲೆಯೇ ಮಲಗಿ ಸರಳತೆ ಮೆರೆದರು, ಆದರೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಒಂದು ದಿನದ ಗ್ರಾಮ ವಾಸ್ತವ್ಯಕ್ಕಾಗಿ ಒಂದು ಕೋಟಿ ರೂ. ಖರ್ಚಾಗಿದೆ. ಅದರಲ್ಲಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂಬ ವಿವರ ಇಲ್ಲಿದೆ, ಚಂಡರಕಿ ಗ್ರಾಮಕ್ಕೆ ಆಗಮಿಸಿದ್ದವರಿಗಾಗಿ ಊಟದ ವ್ಯವಸ್ಥೆ ಮಾಡಲು ಸುಮಾರು 25 ಲಕ್ಷ ಖರ್ಚಾಗಿದೆ ಹಾಗೂ ಕಚೇರಿಗಳನ್ನು ಶಿಫ್ಟ್ ಮಾಡಲು ಮತ್ತು ಅರ್ಜಿಗಳನ್ನು ಸ್ವೀಕರಿಸುವ ಕೌಂಟರ್‍ಗಳಿಗಾಗಿ 25…
ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಪ್ರಕೃತಿ ನಾಶಕ್ಕೆ ಎಡೆಮಾಡುತ್ತಿದೆ
June 24, 2019ಮೈಸೂರು,ಜೂ.23(ಪಿಎಂ)- ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಪ್ರಕೃತಿ ನಾಶಕ್ಕೆ ಎಡೆಯಾಗುವಂತೆ ನಡೆದುಕೊಳ್ಳು ತ್ತಿದ್ದು, ಕೃಷಿ ಭೂಮಿ ಮಾರಾಟ ಮಾಡಲು ಅನುಕೂಲವಾಗುವಂತೆ ಕಾನೂನಿಗೆ ಹಲವು ಬಾರಿ ತಿದ್ದುಪಡಿಯನ್ನೂ ತಂದಿದೆ ಎಂದು `ವಿಜಯ ಕರ್ನಾಟಕ’ ಸಂಪಾದಕ ಹರಿ ಪ್ರಕಾಶ್ ಕೋಣೆಮನೆ ವಿಷಾದಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಯುಕ್ತ ಪ್ರಕಾಶನದ ಜಂಟಿ ಆಶ್ರಯದಲ್ಲಿ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೊಡ ಗಿನ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ 23ನೇ ಕೃತಿ `ಕೊಡಗಿನ ತಲ್ಲಣ-ದುರಂತದ ಹಿಂದಿನ ಸತ್ಯಗಳು’ ಬಿಡುಗಡೆ…










