ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಇನ್ನು ಮುಂದೆ ಕಾಂಗ್ರೆಸ್ ಟಿಕೆಟ್ ಇಲ್ಲ
ಮೈಸೂರು

 ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಇನ್ನು ಮುಂದೆ ಕಾಂಗ್ರೆಸ್ ಟಿಕೆಟ್ ಇಲ್ಲ

June 24, 2019

ಮೈಸೂರು: ಮುಂಬರುವ ಚುನಾವಣೆಗಳಲ್ಲಿ ನಿಷ್ಠಾವಂತ ಕಾರ್ಯ ಕರ್ತರಿಗೆ ಮೊದಲ ಆದ್ಯತೆಯನ್ನು ನೀಡುವುದರ ಜತೆಗೆ ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡದಂತೆ ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾನುವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತ ನಾಡಿದ ಅವರು, ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘಟನೆಗೆ ಇಳಿಯಬೇಕು. ಯಾವುದೇ ದೊಡ್ಡ ನಾಯಕರು ತಮ್ಮವರ ಪರ ಲಾಬಿ ಮಾಡುವುದಕ್ಕೆ ಬೆಂಬಲ ನೀಡದೆ, ಪಕ್ಷ ಸೂಚಿಸುವ ಅಭ್ಯರ್ಥಿಗಳ ಪರ ಮಾತ್ರ ಕೆಲಸ ಮಾಡುವಂತಾಗಬೇಕು. ಅಲ್ಲಿಯೂ ಸಹ ಪಕ್ಷ ನಿಷ್ಠರಿಗೆ, ಪಕ್ಷಕ್ಕಾಗಿ ದುಡಿದವ ರಿಗೆ ಆದ್ಯತೆ ನೀಡಲಾಗುವುದು. ಅವರು ಆರ್ಥಿಕವಾಗಿ ದುರ್ಬಲರಾಗಿದ್ದರೂ ಪಕ್ಷ ನಿಷ್ಠೆಯನ್ನಷ್ಟೇ ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.

ಲೋಕಸಭಾ ಚುನಾವಣೆ ಫಲಿತಾಂಶ ವಿಚಿತ್ರವಾಗಿದೆ ಬಂದಿದೆ. ನಾನು ಸಹ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಮೈಸೂ ರಿನಲ್ಲಿ ಸೋಲಾಗಿದ್ದರೂ ಇಲ್ಲಿ ಪಕ್ಷ ಪ್ರಬಲ ವಾಗಿದೆ ಎಂಬುದಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ದಲ್ಲೇ ಪಕ್ಷ ಕಟ್ಟಬೇಕು. ಎಂ.ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಪಕ್ಷ ಸಂಘ ಟನೆಗೆ ಆದ್ಯತೆ ನೀಡಲಾಗುವುದು. ಎಲ್ಲಾ ಪಕ್ಷಗಳಲ್ಲೂ ಸಮಸ್ಯೆ
ಇರುವಂತೆ ಸಣ್ಣ ಪುಟ್ಟ ತಪ್ಪುಗಳಿದ್ದರೂ ಎಲ್ಲವನ್ನು ನಿಭಾಯಿಸಿ ಪಕ್ಷ ಸಂಘಟಿಸ ಬೇಕಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷ ಮಾಡಿರುವ ಸಾಧನೆಯಿಂದ ಸಾಮಾಜಿಕ ನ್ಯಾಯ ದೊರಕಿದೆ. ಭಾರ ತವು ವಿಶ್ವಮಟ್ಟದಲ್ಲೆ ತಲೆ ಎತ್ತುವಂತಾಗಿದೆ. ಕಾಂಗ್ರೆಸ್ ಪಕ್ಷವಿರುವುದು ಸರ್ವರ ಉದ್ದಾರಕ್ಕಾಗಿಯೇ ಹೊರತು ಅಧಿಕಾರದ ಪಡೆಯುವ ಹಂಬಲದಿಂದಲ್ಲ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದೇವೆ. ಇಷ್ಟೆಲ್ಲಾ ಕಾರ್ಯಕ್ರಮ, ಕೆಲಸ ಮಾಡಿಯೂ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರುವುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಭಾರತದ ಆರ್ಥಿಕ ವ್ಯವಸ್ಥೆ ಕುಸಿಯು ತ್ತಿದ್ದು, ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತಗಳಾಗಿದ್ದರೂ ಅವರೆ ಗೆಲ್ಲುತ್ತಾರೆ ಎಂದರೆ ನಾವೆಲ್ಲರೂ ಆಲೋ ಚನೆ ಮಾಡಬೇಕಾಗಿದೆ. ಕಾಂಗ್ರೆಸ್ ಪ್ರಚಾರ ವನ್ನು ಬದಲಿಸಿಕೊಳ್ಳುವ ಅವಶ್ಯಕತೆ ಇದೆ. ನಾಳೆಯೇ ಚುನಾವಣೆ ಬರಲಿದೆ ಎಂಬ ಗಂಭೀರತೆಯಿಂದ ಪಕ್ಷ ಸಂಘಟಿಸಬೇಕಾಗಿದೆ ಎಂದರು.

ಮಾಜಿ ಸಚಿವ ತನ್ವೀರ್ ಸೇಠ್, ಶಾಸಕ ಆರ್.ಧರ್ಮಸೇನ, ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್, ಮಾಜಿ ಶಾಸಕ ವಾಸು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ ನಾಥ್, ಮೇಯರ್ ಪುಷ್ಪಲತಾ ಜಗನ್ನಾಥ್, ಮುಖಂಡರಾದ ಪ್ರಕಾಶ್, ಅಬ್ದುಲ್ ಖಾದರ್ ಸಾಹಿದ್, ಬಸವರಾಜು, ನಾಗೇಶ್ ಕರಿಯಪ್ಪ, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.

Translate »