ಜೂ.29ರಂದು ಉದ್ಯೋಗ ಮೇಳ
ಮೈಸೂರು

ಜೂ.29ರಂದು ಉದ್ಯೋಗ ಮೇಳ

June 25, 2019

ಮೈಸೂರು,ಜೂ.24-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೈಸೂರು-ಬೆಂಗಳೂರಿನ ಹೆಸರಾಂತ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆ ಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಗಾಗಿ ಜೂ.29ರಂದು ಬೆಳಿಗ್ಗೆ 10 ಘಂಟೆಯಿಂದ ಉದ್ಯೋಗ ಮೇಳವನ್ನು ಸರ್ಕಾರಿ ಕೈಗಾರಿಕಾ ತರ ಬೇತಿ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಪಾಸು/ಫೇಲು, ಪಿಯುಸಿ/ಪದವಿ/ಐಟಿಐ/ಡಿಪ್ಲೋಮ/ಎಂ.ಬಿ.ಎ/ಸ್ನಾತಕೋ ತ್ತರದಲ್ಲಿ ತೇರ್ಗಡೆ ಹೊಂದಿದ 18ರಿಂದ 35 ವರ್ಷ ವಯೋಮಿತಿ ಪುರುಷ ಮತ್ತು ಮಹಿಳಾ ಅಭ್ಯರ್ಥಿ ಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿ ಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ವಿದ್ಯಾ ರ್ಹತೆಯ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳು ಮತ್ತು ಆಧಾರ್ ಕಾರ್ಡ್, ಸ್ವವಿವರವುಳ್ಳ 10 ಬಯೋಡೇಟಾ ಪ್ರತಿಗಳೊಂದಿಗೆ ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಆವರಣ, ಎನ್.ಆರ್. ಮೊಹಲ್ಲಾ ಮೈಸೂರು-07 ಇಲ್ಲಿ ಹಾಜರಾಗಬೇಕು. ಮಾಹಿತಿ ದೂ.0821-2489972 ಸಂಪರ್ಕಿಸಿ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾ ಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »