ಸಸಿ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಸಂಸ್ಮರಣೆ
ಮೈಸೂರು

ಸಸಿ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಸಂಸ್ಮರಣೆ

June 25, 2019

ಮೈಸೂರು, ಜೂ.24(ಆರ್‍ಕೆಬಿ)- ಮೈಸೂರಿನ ಪರಿಸರ ಸ್ನೇಹಿ ತಂಡದ ಸದಸ್ಯರು ಗಾಂಧಿ ನಗರದ ಶಿವಯೋಗಿ ಶಾಲಾವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನವನ್ನು ಆಚರಿಸಿದರು. ಮೊದಲಿಗೆ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ವಿವಿಧ ಗಿಡಗಳನ್ನು ನೆಟ್ಟು ನೀರೆರೆದರು.

ಬಳಿಕ ಮಾತನಾಡಿದ ಬಿಜೆಪಿ ಯುವ ಮುಖಂಡ ಚೇತನ್ ಮಂಜುನಾಥ್, ಭಾರತ ಸ್ವಾತಂತ್ರ್ಯಗೊಂಡ ನಂತರ ಮೊದಲ ಕೈಗಾರಿಕಾ ಮಂತ್ರಿಯಾಗಿದ್ದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ದೇಶದ ಕೈಗಾ ರಿಕಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದರು, ಬೆಂಗ ಳೂರಿನಲ್ಲಿ ವಿಮಾನ ತಯಾರಿಕಾ ಕಾರ್ಖಾನೆ, ವಿಶಾಖಪಟ್ಟಣದಲ್ಲಿ ಹಡಗು ನಿರ್ಮಾಣ, ಬಿಹಾರ ದಲ್ಲಿ ರಸಗೊಬ್ಬರ ಕಾರ್ಖಾನೆ, ಪಶ್ಚಿಮ ಬಂಗಾಳ ದಲ್ಲಿ ರೈಲ್ವೆ ಎಂಜಿನ್ ಕಾರ್ಖಾನೆ ಆರಂಭಿಸಿದ ಕೀರ್ತಿ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದರು.

`ದೇಶದಲ್ಲಿ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ವಿರೋ ಧಿಸಿ ಕಾಂಗ್ರೆಸ್‍ನ ದ್ವಂದ್ವ ನೀತಿಯಿಂದ ಬೇಸತ್ತು 1949ರಲ್ಲಿ ನೆಹರು ಸಂಪುಟದಿಂದ ಹೊರ ಬಂದು ಅಂದಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದರು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಿ.ಲೋಹಿತ್, ಸಂತೋಷ್ ಕುಮಾರ್, ಜೀವನ್, ನವೀನ್‍ಶೆಟ್ಟಿ, ಸುರೇಂದ್ರ, ನಾಗರಾಜು ಇನ್ನಿತರರು ಉಪಸ್ಥಿತರಿದ್ದರು.

Translate »