ಉದ್ಯಾನವನ, ಟ್ರಾಫಿಕ್ ಸಮಸ್ಯೆ ಬಗ್ಗೆ ನಿವಾಸಿಗಳಿಂದ ಅಧಿಕ ದೂರು
ಮೈಸೂರು

ಉದ್ಯಾನವನ, ಟ್ರಾಫಿಕ್ ಸಮಸ್ಯೆ ಬಗ್ಗೆ ನಿವಾಸಿಗಳಿಂದ ಅಧಿಕ ದೂರು

June 25, 2019

ಮೈಸೂರು, ಜೂ.24(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಸೋಮವಾರ ಮೈಸೂ ರಿನ 57ನೇ ವಾರ್ಡ್‍ನಲ್ಲಿ ಜನಸ್ಪಂದನಾ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಗತ್ಯ ನಿರ್ವಹಣೆ ಇಲ್ಲದೆ, ನೀರಿಲ್ಲದೆ ಒಣಗುತ್ತಿರುವ ಉದ್ಯಾನವನದ ಗಿಡಗಳು, ಟ್ರಾಫಿಕ್ ಸಮಸ್ಯೆ, ಕೆಟ್ಟು ನಿಂತಿರುವ ಸಿಗ್ನಲ್, ಅಸಮರ್ಪಕ ನೀರಿನ ಪೂರೈಕೆ ಇತ್ಯಾದಿ ಹಲವು ದೂರುಗಳು ಕೇಳಿ ಬಂದವು.

ಕುವೆಂಪುನಗರ 57ನೇ ವಾರ್ಡ್‍ನ ಹೊಂಗೆ ಮರದ ಉದ್ಯಾನವನ, ಉಮಾ ಮಹೇಶ್ವರಿ ಉದ್ಯಾನವನ, ಕೆಹೆಚ್‍ಬಿ ಕಾಂಪ್ಲೆಕ್ಸ್, ಲವಕುಶ ಉದ್ಯಾನವನ, ಸೌಗಂಧಿಕ ಉದ್ಯಾ ನವನ, ಮಸಣಿಕಮ್ಮ ದೇವಸ್ಥಾನ, ಅಂಬೇಡ್ಕರ್ ಸಮುದಾಯ ಭವನ, ಕೆ.ಬ್ಲಾಕ್ ನಂದಿನಿ ಹಾಲಿನ ಡೈರಿ ಸುತ್ತಮುತ್ತ ಪಾದಯಾತ್ರೆ ಕೈಗೊಂಡ ಶಾಸಕರಿಗೆ ಉದ್ಯಾನವನ ಮತ್ತು ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆಯೇ ಹೆಚ್ಚು ದೂರುಗಳು ಸಲ್ಲಿಕೆಯಾದವು.

ಗಂಡ ಭೇರುಂಡ ಉದ್ಯಾನವನಕ್ಕೆ ಭೇಟಿ ನೀಡಿ ಪರಿ ಶೀಲಿಸಿದ ಅವರು, ಸ್ಥಳೀಯ ಪಾಲಿಕೆ ಸದಸ್ಯರು ನೀಡಿದ ಹುಲ್ಲು ಕತ್ತರಿಸುವ ಯಂತ್ರದ ಮೂಲಕ ಸ್ವತಃ ಶಾಸಕರು ಹುಲ್ಲನ್ನು ಕತ್ತರಿಸಿ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಲವಕುಶ ಉದ್ಯಾನ ವನದ ಎದುರು ಹಲವು ವರ್ಷಗಳಿಂದ ಪಾಳು ಬಿದ್ದಿರುವ ಜಾಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಬಗ್ಗೆ ಸ್ಥಳೀಯರು ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕ ರಾಮ ದಾಸ್, ಜಾಗದ ಕುರಿತು ಸಂಪೂರ್ಣ ಮಾಹಿತಿ ನೀಡು ವಂತೆ ಮುಡಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುವೆಂಪುನಗರ ಕಾಂಪ್ಲೆಕ್ಸ್ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ: ಕುವೆಂಪುನಗರದ ಕಾಂಪ್ಲೆಕ್ಸ್ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ, ಜನರಿಗೆ ಬಸ್ ಹತ್ತಲು ಬಹಳ ಸಮಸ್ಯೆ ಇರುವುದನ್ನು ಗಮನಿಸಿದ ಅವರು, ಸಾರ್ವಜನಿಕರಿಗೆ ಅನುಕೂಲ ವಾಗುವ ರೀತಿಯಲ್ಲಿ ಸೂಕ್ತ ಬಸ್ ನಿಲ್ದಾಣ ನಿರ್ಮಿಸ ಬೇಕು. ಹಾಳಾಗಿರುವ ಸಿಗ್ನಲ್ ಶೀಘ್ರ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕುವೆಂಪುನಗರದ ಟ್ರಾಫಿಕ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು, ಚರ್ಚಿಸಿದರು. ಸಮಸ್ಯೆ ಬಗೆಹರಿಸಿ ಶಾಶ್ವತ ಪರಿ ಹಾರಕ್ಕೆ ಕ್ರಮ ಕೈಗೊಳ್ಳಲು ಸಭೆಯೊಂದನ್ನು ನಡೆಸಲು ನಿರ್ಧರಿಸಿದರು. ಕಾಂಪ್ಲೆಕ್ಸ್ ಸಿಗ್ನಲ್ ಬಳಿ ಬಸ್ ನಿಲ್ದಾ ಣಕ್ಕೆ ತಿರುವು ಪಡೆಯಲು ತೊಂದರೆಯಾಗಿದ್ದು, ಬಸ್ ಬೇ ಮಾಡಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿ ಗಳಿಗೆ ಶಾಸಕ ರಾಮದಾಸ್ ಸೂಚಿಸಿದರು.

ಕೆಲವು ಭಾಗಗಳಲ್ಲಿ ಕೆಲವೇ ಗಂಟೆಗಳು ಮಾತ್ರ ಕುಡಿ ಯುವ ನೀರು ಪೂರೈಕೆ ಆಗುತ್ತಿದ್ದು, ಆರ್ ಓ ಘಟಕ ತೆರೆಯುವಂತೆ ಸ್ಥಳೀಯರ ಮನವಿಯನ್ನು ಪುರಸ್ಕರಿಸಿದ ಶಾಸಕರು, ಇನ್ನು ಕೆಲವೇ ತಿಂಗಳಲ್ಲಿ ಶುದ್ಧ ನೀರು ಪೂರೈ ಸುವುದಾಗಿ ಭರವಸೆ ನೀಡಿದರು. ವಾರ್ಡ್‍ನ ಹಲವು ಕಡೆಗಳಲ್ಲಿ ಯುಜಿಡಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಂ.ಸಿ.ರಮೇಶ್ ಮುಖಂಡರಾದ ರವಿಶಂಕರ್, ಉಪೇಂದ್ರ, ಆದಿ, ವೆಂಕ ಟೇಶ್‍ದಾಸ್, ವಾಸು, ಗಿರಿಧರ್ ಯಾದವ್, ಮಂಜುಳ, ಅನುಪಮ, ರಾಜಣ್ಣ, ಗಿರೀಶ್, ನಾಗರಾಜು, ಸಿದ್ದೇಗೌಡ ಹಾಗೂ ಪಾಲಿಕೆಯ ಎಲ್ಲಾ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

Translate »