ಮೈಸೂರು

ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ದೇಶಕ್ಕೆ, ಫಣೀಂದ್ರ ರಾಜ್ಯಕ್ಕೆ ಪ್ರಥಮ
ಮೈಸೂರು

ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ದೇಶಕ್ಕೆ, ಫಣೀಂದ್ರ ರಾಜ್ಯಕ್ಕೆ ಪ್ರಥಮ

June 6, 2019

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) -2019 ಫಲಿತಾಂಶ ಹೊರ ಬಿದ್ದಿದ್ದು ರಾಜಸ್ಥಾನದ ನಳಿನ್ ಖಂಡೇವಾಲ್ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಅನುಮೋದಿಸಿದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸು ಗಳಿಗೆ ಪ್ರವೇಶ ಪಡೆ ಯಲು ನಿಟ್ ಪರೀಕ್ಷೆ ಬರೆಯಬೇಕಾಗುತ್ತದೆ. ದೆಹಲಿಯ ಭವಿಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶದ ಅಕ್ಷತ್ ಕೌಶಿಕ್ ಕ್ರಮವಾಗಿ ಎರಡನೇ ಮತ್ತು 3ನೇ…

ರಾಜ್ಯದಲ್ಲಿ ಮೂಲ, ವಲಸಿಗ ಕಾಂಗ್ರೆಸ್ ನಾಯಕರ ಕಚ್ಚಾಟಮೈತ್ರಿ ಸಂಪುಟ ಪುನರ್ರಚನೆ ನೆನೆಗುದಿಗೆ
ಮೈಸೂರು

ರಾಜ್ಯದಲ್ಲಿ ಮೂಲ, ವಲಸಿಗ ಕಾಂಗ್ರೆಸ್ ನಾಯಕರ ಕಚ್ಚಾಟಮೈತ್ರಿ ಸಂಪುಟ ಪುನರ್ರಚನೆ ನೆನೆಗುದಿಗೆ

June 6, 2019

ಬೆಂಗಳೂರು: ಪ್ರದೇಶ ಕಾಂಗ್ರೆಸ್‍ನಲ್ಲಿ ಭುಗಿಲೆದ್ದಿರುವ ಮೂಲ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವಣ ಕಚ್ಚಾಟದ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರದ ಸಂಪುಟ ಪುನರ್ ರಚನೆ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ಸಂಪುಟ ಪುನರ್ ರಚನೆ ಇಲ್ಲವೇ ವಿಸ್ತರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಪಕ್ಷೇತರರಿಗೆ ಮಣೆ ಹಾಕಲಾಗುತ್ತದೆ ಮತ್ತು ವಲಸಿಗ ಕಾಂಗ್ರೆಸ್ಸಿಗರಿಗೆ ಅವಕಾಶ ಲಭ್ಯವಾಗುತ್ತದೆ ಎಂಬ ಮಾಹಿ ತಿಯ ಹಿನ್ನೆಲೆ ಯಲ್ಲಿ ಪಕ್ಷದ ಹಿರಿಯ ನಾಯಕರು ಬಂಡಾಯದ ಕಹಳೆ ಊದಿದ್ದರು. ಕಾಂಗ್ರೆಸ್ ವರಿಷ್ಠರಲ್ಲಿ ಒಬ್ಬರಾದ ಆಸ್ಕರ್ ಫರ್ನಾಂಡೀಸ್ ತೆರೆಮರೆಯಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಒಂದು…

ಮೈಸೂರಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಪ್ರಾರ್ಥನೆ
ಮೈಸೂರು

ಮೈಸೂರಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಪ್ರಾರ್ಥನೆ

June 6, 2019

ಮೈಸೂರು: ಮೈಸೂರಿನಲ್ಲಿ ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬವನ್ನುಸಂಭ್ರಮ-ಸಡಗರದಿಂದ ಆಚರಿಸಿದರು. ಒಂದು ತಿಂಗಳು ಉಪವಾಸ ಆಚರಿ ಸಿದ್ದ ಮುಸ್ಲಿಂ ಬಾಂಧವರು, ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮೈಸೂರಿನ ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಸಾಮೂ ಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾ ಶಯ ವಿನಿಮಯ ಮಾಡಿಕೊಂಡರು. ಮೈಸೂರಿನ ಸರ್ಖಾಜಿ ಹಜರತ್ ಮೌಲನಾ ಮೊಹಮದ್ ಉಸ್ಮಾನ್ ಷರೀಫ್ ಅವರು ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ, ನಾಡಿನ ಜನತೆಗೆ ರಂಜಾನ್ ಸಂದೇಶ ನೀಡಿ ದರು. ಈ ಸಂದರ್ಭ ಮಾತನಾಡಿದ ಅವರು,…

ಮೂವರು ಕಾಲೇಜು ವಿದ್ಯಾರ್ಥಿಗಳು ಕಾವೇರಿ ಪಾಲು
ಮೈಸೂರು

ಮೂವರು ಕಾಲೇಜು ವಿದ್ಯಾರ್ಥಿಗಳು ಕಾವೇರಿ ಪಾಲು

June 6, 2019

ಕುಶಾಲನಗರ: ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಇಲ್ಲಿಗೆ ಸಮೀಪದ ಮಾದಾಪಟ್ಟಣ ಸರ್ಕಾರಿ ಇಂಜಿ ನಿಯರಿಂಗ್ ಕಾಲೇಜು ಬಳಿ ಕಾವೇರಿ ನದಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಇವರೆಲ್ಲಾ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ವಾಣಿಜ್ಯ ವಿಭಾ ಗದ ವಿದ್ಯಾರ್ಥಿಗಳಾಗಿದ್ದು, ಮಡಿಕೇರಿಯ ಉಕ್ಕಡ ಗ್ರಾಮದ ರಮೇಶ್ ಪುತ್ರ ಆಕಾಶ್, ಮ್ಯಾನ್ಸ್ ಕಾಂಪೌಂಡ್ ಸಮೀಪದ ನಿವಾಸಿ ಚೆಲುವರಾಜು ಪುತ್ರ ಗಗನ್ ಮತ್ತು ಮೇಕೇರಿಯ ಉಮೇಶ್ ಪುತ್ರ ಶಶಾಂಕ್ ಎಂದು ಗುರುತಿಸಲಾಗಿದೆ. ಇಂದು ರಂಜಾನ್ ಪ್ರಯುಕ್ತ ಮೃತರು ಸೇರಿದಂತೆ…

ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಜೀವ ಸಂಕುಲಕ್ಕೆ ಆಪತ್ತು ಕಾದಿದೆ…
ಮೈಸೂರು

ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಜೀವ ಸಂಕುಲಕ್ಕೆ ಆಪತ್ತು ಕಾದಿದೆ…

June 6, 2019

ಮೈಸೂರು: ಗಿಡ-ಮರಗಳನ್ನು ಪೋಷಿಸಿ ಪರಿಸರ ಸಮ ತೋಲನ ಕಾಯ್ದುಕೊಳ್ಳದಿದ್ದರೆ ಮಾನ ವನೂ ಸೇರಿದಂತೆ ಜೀವ ಸಂಕುಲ ನಾನಾ ರೀತಿಯಲ್ಲಿ ಹಾನಿಗೆ ತುತ್ತಾಗಬೇಕಾಗು ತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಎಚ್ಚರಿಸಿದರು. ಮೈಸೂರಿನ ಬನ್ನಿಮಂಟಪದ ಓಡಿಪಿ (ಆರ್ಗನೈಜೇಷನ್ ಫಾರ್ ದಿ ಡೆವಲಪ್ ಮೆಂಟ್ ಆಫ್ ಪೀಪಲ್) ಸಂಘಟನೆ ಆವರಣದಲ್ಲಿ ಸಂಘಟನೆ ವತಿಯಿಂದ ಬುಧವಾರ `ವಾಯುಮಾಲಿನ್ಯ ತಡೆ ಯೋಣ ಶುದ್ಧ ಗಾಳಿ ಪಡೆಯೋಣ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ `ವಿಶ್ವ ಪರಿಸರ ದಿನಾಚರಣೆ’ಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು…

ಪರಿಸರ ಜಾಗೃತಿಗಾಗಿ ಜಾಥಾ, ಡಾ.ರಾಜ್ ಉದ್ಯಾನದಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ
ಮೈಸೂರು

ಪರಿಸರ ಜಾಗೃತಿಗಾಗಿ ಜಾಥಾ, ಡಾ.ರಾಜ್ ಉದ್ಯಾನದಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ

June 6, 2019

ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನ ಐಟಿಸಿ-ವಾವ್ ಮತ್ತು ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ ಮೈಸೂರಿನಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿ, ಬಳಿಕ ಡಾ.ರಾಜ್‍ಕುಮಾರ್ ಉದ್ಯಾನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಿದರು. ಡಾ.ರಾಜ್‍ಕುಮಾರ್ ಉದ್ಯಾನವನದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಾನದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಇಂದು ಕಾಡು ನಾಶದಿಂದ ವಾಯುಮಾಲಿನ್ಯ ಜಾಸ್ತಿಯಾಗುತ್ತಿದೆ. ಅದರಿಂದ ಪರಿಸರದ…

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ
ಮೈಸೂರು

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ

June 6, 2019

ಮೈಸೂರು: ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಕುವೆಂಪುನಗರದಲ್ಲಿರುವ ವಿಶ್ವನಂದನ ಉದ್ಯಾನವನದಲ್ಲಿ ಇಂದು ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯ ಕ್ರಮದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ ಕುವೆಂಪು ವಿ.ವಿ. ವಿಶ್ರಾಂತ ಕುಲಪತಿಗಳಾದ ಡಾ.ಪಿ.ವೆಂಕಟರಾಮಯ್ಯನವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪ್ರಕೃತಿ ಇರುವುದೇ ಮನುಷ್ಯನ ಆಸೆಯನ್ನು ಪೂರೈಸು ವುದಕ್ಕೆ ಹೊರತು ದುರಾಸೆಗಳನ್ನಲ್ಲ. ಪರಿಸರದ ದಿನಾಚರಣೆ ಸಾಂಕೇತಿಕ ಅಷ್ಟೇ. ವರ್ಷವಿಡೀ ಪರಿಸರದ ದಿನಾಚರಣೆಯಾಗಿ, ಜನರಲ್ಲಿ ಜಾಗೃತಿ ಮೂಡಿದಾಗ ಮಾತ್ರ…

ಯಥೇಚ್ಛವಾಗಿ ಮರ ಕಡಿಯುವುದರಿಂದ ಪರಿಸರ ಅಸಮತೋಲನ: ಜಿ.ಟಿ.ದೇವೇಗೌಡ
ಮೈಸೂರು

ಯಥೇಚ್ಛವಾಗಿ ಮರ ಕಡಿಯುವುದರಿಂದ ಪರಿಸರ ಅಸಮತೋಲನ: ಜಿ.ಟಿ.ದೇವೇಗೌಡ

June 6, 2019

ಮೈಸೂರು: ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ವಿವಿಧೆಡೆ ಅರಣ್ಯ ಇಲಾಖೆ ವತಿಯಿಂದ ನಡೆಯಲಿರುವ ವನಮಹೋತ್ಸವ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೆಬ್ಬಾಳು ಕೆರೆ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಪರಿಸರ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಅರಣ್ಯ ಇಲಾಖೆ ಈ ಸಾಲಿನಲ್ಲಿ 8 ಅಡಿ ಎತ್ತರದ 20 ಸಾವಿರ ಗಿಡಗಳನ್ನು ನೆಡಲು ನಿರ್ಧರಿಸಿದೆ. ಹೆಬ್ಬಾಳು ಕೆರೆ ಆವರಣದಲ್ಲಿ ಅರಣ್ಯ ಇಲಾಖೆ ನಿರ್ಮಿ ಸುತ್ತಿರುವ `ನೆಡುತೋಪು’ಗೆ ಗಿಡ ನೆಟ್ಟು ನೀರೆರೆದರು. ಬಳಿಕ…

ಒಂದು ತಿಂಗಳ ಕಾಲ ಸಸಿ ನೆಡುವ `ಸಸ್ಯಾರಾಧನಾ’ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಒಂದು ತಿಂಗಳ ಕಾಲ ಸಸಿ ನೆಡುವ `ಸಸ್ಯಾರಾಧನಾ’ ಕಾರ್ಯಕ್ರಮಕ್ಕೆ ಚಾಲನೆ

June 6, 2019

ಮೈಸೂರು: ಹೆಬ್ಬಾ ಳಿನ 7 ವಾರ್ಡ್‍ಗಳಲ್ಲಿ ಪ್ರತಿ ವಾರ್ಡಿ ನಲ್ಲೂ ಒಂದು ತಿಂಗಳ ಅವಧಿಯಲ್ಲಿ ಸಾವಿರ ಸಸಿ ನೆಡುವ `ಸಸ್ಯಾರಾಧನಾ’ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಚಾಲನೆ ನೀಡಿದರು. ಹೆಬ್ಬಾಳಿನ ಅನ್ನಪೂರ್ಣೇಶ್ವರಿ ದೇವ ಸ್ಥಾನ ಸಮೀಪದ ಖಾಲಿ ನಿವೇಶನದಲ್ಲಿ ಬೇವಿನ ಗಿಡವೊಂದನ್ನು ನೆಡುವ ಮೂಲಕ ಸಚಿವ ಜಿ.ಟಿ.ದೇವೇಗೌಡ ಮಹತ್ವದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ವಿದ್ಯಾವರ್ಧಕ ಸಂಘ, ನವಭಾರತ್ ನಿರ್ಮಾಣ್ ಸೇವಾ ಟ್ರಸ್ಟ್ ಹಾಗೂ ಮತ್ತಿತ ರರ ಸಂಘ ಸಂಸ್ಥೆಗಳು ಮತ್ತು…

ಸಾಹಿತ್ಯ ಪ್ರಜ್ಞೆಯುಳ್ಳ ಸಜ್ಜನ ರಾಜಕಾರಣಿ ಶಾಂತವೇರಿ ಗೋಪಾಲಗೌಡ
ಮೈಸೂರು

ಸಾಹಿತ್ಯ ಪ್ರಜ್ಞೆಯುಳ್ಳ ಸಜ್ಜನ ರಾಜಕಾರಣಿ ಶಾಂತವೇರಿ ಗೋಪಾಲಗೌಡ

June 6, 2019

ಮೈಸೂರು: ಸಮಾಜ ವಾದಿ ಚಿಂತನೆಗಳೊಂದಿಗೆ ಸದಾ ಸಾಹಿತ್ಯ ಪ್ರಜ್ಞೆಯನ್ನು ಹೊಂದಿದ್ದ ಸಜ್ಜನ, ಪ್ರಾಮಾ ಣಿಕ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರು ಎಂದು ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಹೇಳಿದರು. ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನ ಸಹ ಯೋಗದಲ್ಲಿ ಬುಧವಾರ ಆಯೋಜಿಸ ಲಾಗಿದ್ದ `ಶಾಂತವೇರಿ ಗೋಪಾಲಗೌಡ- ಒಂದು ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಲೋಹಿಯಾ ಅವರ ವಿಚಾರಗಳಿಂದ ಪ್ರಭಾ…

1 957 958 959 960 961 1,611
Translate »