ಮೈಸೂರು

ಎಸ್‍ಟಿ ಮೀಸಲು ಶೇ.7.5ಕ್ಕೆ ಹೆಚ್ಚಿಸಲು ಆಗ್ರಹಿಸಿ ಧರಣಿ
ಮೈಸೂರು

ಎಸ್‍ಟಿ ಮೀಸಲು ಶೇ.7.5ಕ್ಕೆ ಹೆಚ್ಚಿಸಲು ಆಗ್ರಹಿಸಿ ಧರಣಿ

June 7, 2019

ಮೈಸೂರು: ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗ ಡಕ್ಕೆ ಮೀಸಲಾತಿ ಸೌಲಭ್ಯವನ್ನು ಶೇ.7.5ರಷ್ಟು ಹೆಚ್ಚಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ನಾಯಕ ಸಂಘ-ಸಂಸ್ಥೆಗಳ ಒಕ್ಕೂಟದ ಕಾರ್ಯಕರ್ತರು ಮೈಸೂರು ಡಿಸಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದಿಂದ ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಶೇ. 7.5ರಷ್ಟು ಮೀಸಲಾತಿ ಪಡೆಯುತ್ತಿದ್ದೇವೆ. ಆದರೆ ಕರ್ನಾಟಕ ರಾಜ್ಯದಲ್ಲಿ ಶೇ.7.5 ಮೀಸಲಾತಿ ಸೌಲಭ್ಯ ದೊರೆಯುತ್ತಿಲ್ಲ. ಇದ ರಿಂದ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಜನಾಂಗದವರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ 1956ರಲ್ಲಿ ನೀಡಿದ್ದ ಆದೇಶದಂತೆ ರಾಜ್ಯದಲ್ಲಿ ಕೇವಲ…

ಜೂ.16ರಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ
ಮೈಸೂರು

ಜೂ.16ರಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ

June 7, 2019

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಪಾದದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಹಾಗೂ ಶ್ರೀ ಗುರು ವಾಯೂರಪ್ಪನ್ ದೇವಾಲಯದ ಶಬರಿ ಮಲ ಶ್ರೀ ಅಯ್ಯಪ್ಪ ಪೂಜಾ ಸಮಿತಿ ವತಿ ಯಿಂದ ಜೂ.16ರಿಂದ 19ರವರೆಗೆ ಶ್ರೀ ಗುರುವಾಯೂರಪ್ಪನ್‍ರವರ 13ನೇ ಪ್ರತಿ ಷ್ಠಾಪನಾ ವಾರ್ಷಿಕ ಮಹೋತ್ಸವ ನಡೆಯ ಲಿದೆ. ಜೂ.17ರಂದು ಸೋಮವಾರ ಶ್ರೀ ಅಯ್ಯಪ್ಪಸ್ವಾಮಿ 36ನೇ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ ಏರ್ಪಡಿಸಲಾಗಿದೆ. ಜೂ.16ರಿಂದ 19ರವರೆಗೆ ವಿಶೇಷ ಪೂಜೆಗಳು ಗುರುವಾಯೂರು ತಂತ್ರಿ ಗಳಾದ ಡಾ. ಚೆನ್ನಾಸ್ ದಿನೇಶನ್ ಪಾಡ್ ಮತ್ತು ಅವರ ತಂಡದಿಂದ ನೆರವೇರಲಿದೆ. ಜೂ.16ರಂದು…

ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ಟೀಕೆಯನ್ನು ಕಾಂಗ್ರೆಸ್ ಸಹಿಸದು
ಮೈಸೂರು

ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ಟೀಕೆಯನ್ನು ಕಾಂಗ್ರೆಸ್ ಸಹಿಸದು

June 7, 2019

ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ರಾಜೇಶ್ ಆಕ್ಷೇಪ ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರುವ ಅಡಗೂರು ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ವಿರುದ್ಧ ಅನಗತ್ಯ ಆರೋಪ, ಟೀಕೆಯಲ್ಲಿ ತೊಡಗಿ ರುವುದನ್ನು ಕಾಂಗ್ರೆಸ್ ಪಕ್ಷವು ಸಹಿಸುವುದಿಲ್ಲ ಎಂದು ಮೈಸೂರು ನಗರ ಕಾಂಗ್ರೆಸ್ ವಕ್ತಾರ, ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ರಾಜೇಶ್ ಆಕ್ಷೇಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರು…

ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬದಲಾವಣೆಗೆ ಆಗ್ರಹ
ಮೈಸೂರು

ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬದಲಾವಣೆಗೆ ಆಗ್ರಹ

June 7, 2019

ಬೆಂಗಳೂರು, ಜೂ.6-ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಬದಲಾಯಿಸಬೇಕೆಂಬ ಆಗ್ರಹ ಹಿರಿಯ ಕಾಂಗ್ರೆಸ್ ನಾಯಕರಿಂದ ಕೇಳಿಬರುತ್ತಿದೆ. ಪಕ್ಷದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವೇಣುಗೋಪಾಲ್ ವಿಫಲರಾಗಿದ್ದಾರೆ. ಅವರಿಗೆ ಕರ್ನಾಟಕ ರಾಜಕಾರಣದ ಗ್ರೌಂಡ್ ರಿಯಾಲಿಟಿಯೇ ಗೊತ್ತಿಲ್ಲ. ಪ್ರತೀ ಹಂತದಲ್ಲೂ ಒರಟು ತನ ಪ್ರದರ್ಶಿಸುತ್ತಾರೆ. ಪಕ್ಷ ಸಂಘಟನೆಗೆ ಪರಿಣಾಮಕಾರಿಯಾದ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕರುಗಳು ವೇಣು ಗೋಪಾಲ್ ಅವರನ್ನು ಕರ್ನಾಟಕ ಉಸ್ತುವಾರಿಯಿಂದ ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ.

ಅನ್ನಭಾಗ್ಯ ಯೋಜನೆ ಕೈಬಿಡಲು ಸಿಎಂ ಚಿಂತನೆ
ಮೈಸೂರು

ಅನ್ನಭಾಗ್ಯ ಯೋಜನೆ ಕೈಬಿಡಲು ಸಿಎಂ ಚಿಂತನೆ

June 7, 2019

ಬೆಂಗಳೂರು, ಜೂ.6-ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅನುಷ್ಠಾನಕ್ಕೆ ತಂದಿದ್ದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಕೈಬಿಡಲು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೈತನ ಸಾಲ ಮನ್ನಾ ದಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅದನ್ನು ಸರಿದೂಗಿಸಲು ಅನ್ನಭಾಗ್ಯ ಯೋಜನೆ ಯನ್ನು ಕೈಬಿಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಬಸ್ ಪಾಸ್ ಅನ್ನೂ ರದ್ದು ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳ ಮಧ್ಯೆ ಜಾತಿ…

ಇಂದು ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿದ್ಯುತ್ ನಿಲುಗಡೆ

June 7, 2019

ಮೈಸೂರು: ಎನ್.ಆರ್ ಮೊಹಲ್ಲಾ ವಿಭಾಗದ ಚಾಮುಂಡೇ ಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಜೂನ್ 7ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ 66/11 ಕೆ.ವಿ. ಸೌತ್ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ 1ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ನಂಜುಮಳಿಗೆ ವೃತ್ತ, ಲಕ್ಷ್ಮೀಪುರಂ, ವಿದ್ಯಾರಣ್ಯಪುರಂ, ನಾರಾಯಣ ಶಾಸ್ತ್ರಿ ರಸ್ತೆ, ಕಾಕರವಾಡಿ, ನಾಲಾ ಬೀದಿ, ಹೊಸಕೇರಿ, ಅಗ್ರಹಾರ, ತ್ಯಾಗರಾಜ ರಸ್ತೆ, ಇಂಡಸ್ಟ್ರೀಯಲ್ ಸಬರ್ಬ್, ವಿಶ್ವೇಶ್ವರಯ್ಯನಗರ, ಕೃಷ್ಣಮೂರ್ತಿಪುರಂ, ನಾಚನಹಳ್ಳಿ ಪಾಳ್ಯ,…

ಸಾಮೂಹಿಕ ಅತ್ಯಾಚಾರ: ಮತ್ತೊಬ್ಬ ಆರೋಪಿ ಸೆರೆ
ಮೈಸೂರು

ಸಾಮೂಹಿಕ ಅತ್ಯಾಚಾರ: ಮತ್ತೊಬ್ಬ ಆರೋಪಿ ಸೆರೆ

June 7, 2019

ಮೈಸೂರು: ಮೈಸೂರು ಹೊರವಲಯ ಲಿಂಗಾಂಬುದಿ ಪಾಳ್ಯದ ಬಳಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಸಂಜಯ್(20)ನನ್ನು ಪೊಲೀಸರು ಬಂಧಿಸಿದ್ದಾರೆ. ಪರಿಚಿತ ರೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಲಾಗಿತ್ತು. ಅಲ್ಲದೆ ರಕ್ಷಣೆಗೆ ಮುಂದಾದ ಆಕೆಯ ಪರಿಚಿತನ ಕಾಲನ್ನು ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖ ಲಿಸಿಕೊಂಡಿರುವ ಕುವೆಂಪುನಗರ ಠಾಣೆ ಪೊಲೀಸರು, ಈಗಾಗಲೇ ಸೂರ್ಯ ಕುಮಾರ್ ಅಲಿಯಾಸ್ ಸೂರಿ (23), ಮಧು ಅಲಿಯಾಸ್ ಬಾಂಡ್ (23)…

ಎಂ.ಎಸ್.ಶೃತಿ ಗೋಕುಲ್ ಭರತನಾಟ್ಯ ರಂಗಪ್ರವೇಶ
ಮೈಸೂರು

ಎಂ.ಎಸ್.ಶೃತಿ ಗೋಕುಲ್ ಭರತನಾಟ್ಯ ರಂಗಪ್ರವೇಶ

June 7, 2019

ಮೈಸೂರು, ಜೂ. 6- ಶ್ರೀ ಉಮಾಮಹೇಶ್ವರ ನೃತ್ಯ ಕಲಾಕ್ಷೇತ್ರ ಟ್ರಸ್ಟ್ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಜೂ. 9 ರಂದು ಸಂಜೆ 6 ಗಂಟೆಗೆ ನಾಟ್ಯ ವಿದುಷಿ ಎಂ.ಎಸ್. ಶೃತಿ ಗೋಕುಲ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯ ಕ್ರಮ ಏರ್ಪಡಿಸಲಾಗಿದೆ. ವಿದುಷಿ ಲಕ್ಷ್ಮಿಕುಮಾರ್ (ನಟುವಾಂಗ), ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ಹೆಚ್.ಎಲ್.ಶಿವಶಂಕರಸ್ವಾಮಿ (ಮೃದಂಗ), ವಿದ್ವಾನ್ ದೀಪಕ್ ಹೆಬ್ಬಾರ್ (ಕೊಳಲು) ಸಹಕಾರ ನೀಡಲಿದ್ದಾರೆ. ನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಕಾರ್ಯದರ್ಶಿ ಹೆಚ್.ವಿ. ರಾಜೀವ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ…

ಯಾವುದೇ ಸಂದರ್ಭ ವಿಧಾನಸಭೆ ಚುನಾವಣೆ
ಮೈಸೂರು

ಯಾವುದೇ ಸಂದರ್ಭ ವಿಧಾನಸಭೆ ಚುನಾವಣೆ

June 6, 2019

ಬೆಂಗಳೂರು: ಕರ್ನಾಟಕದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಬರಬಹುದು. ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. ಲೋಕಸಭೆ ಚುನಾವಣೆಯಲ್ಲಿ ಗೆದ್ದಂತೆ ಅಭೂತಪೂರ್ವ ಗೆಲುವು ಸಾಧಿಸಲು ಇಂದಿನಿಂದಲೇ ಸಜ್ಜಾಗ ಬೇಕೆಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಕರೆ ನೀಡಿದರು. ಅರಮನೆ ಮೈದಾನದಲ್ಲಿ ಪಕ್ಷದ ವತಿ ಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸಚಿ ವರು ಮತ್ತು ನೂತನ ಸಂಸದರ ಅಭಿ ನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ಮೈತ್ರಿ ಸರ್ಕಾರದ ಬೆಳ ವಣಿಗೆ, ಜೆಡಿಎಸ್, ಕಾಂಗ್ರೆಸ್ ಮುಖಂಡರ ಒಳ ಜಗಳ ಈ ಸರ್ಕಾರ ಹೆಚ್ಚು ಕಾಲ…

ವೈದ್ಯನಾಗುವ ಕನಸು ಕಂಡ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಕಂಟಕಪ್ರಾಯವಾದ ‘ನೀಟ್’
ಮೈಸೂರು

ವೈದ್ಯನಾಗುವ ಕನಸು ಕಂಡ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಕಂಟಕಪ್ರಾಯವಾದ ‘ನೀಟ್’

June 6, 2019

ಬೆಂಗಳೂರು: ವೈದ್ಯರಾಗುವ ಕನಸು ಕಂಡಿದ್ದ ಗ್ರಾಮೀಣ, ಪ್ರತಿಭಾ ವಂತ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕೇಂದ್ರದ ನೀಟ್ ಪರೀಕ್ಷೆ ಮಾರಕವಾಗಿ ಪರಿಣಮಿಸಿದೆ. ಈ ವಿದ್ಯಾರ್ಥಿಗಳ ಹಿತದೃಷ್ಟಿ ಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುತ್ತಿರುವುದಲ್ಲದೆ, ಖಾಸಗಿ ಶಿಕ್ಷಣ ಮಂಡಳಿ ಯಿಂದಲೂ ಶೇ. 40 ರಷ್ಟು ಸೀಟು ಪಡೆದು, ಸಿಇಟಿ ಮೂಲಕ ಇವರಿಗೆ ಮೀಸಲಿರಿಸಿತ್ತು. ರಾಜ್ಯದಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಎಲ್ಲಾ ವೈದ್ಯಕೀಯ ಕಾಲೇಜುಗಳಿಂದ 15 ರಿಂದ 16 ಸಾವಿರ ವೈದ್ಯಕೀಯ ಸೀಟುಗಳು…

1 956 957 958 959 960 1,611
Translate »