ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ಟೀಕೆಯನ್ನು ಕಾಂಗ್ರೆಸ್ ಸಹಿಸದು
ಮೈಸೂರು

ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ಟೀಕೆಯನ್ನು ಕಾಂಗ್ರೆಸ್ ಸಹಿಸದು

June 7, 2019

ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ರಾಜೇಶ್ ಆಕ್ಷೇಪ
ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರುವ ಅಡಗೂರು ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ವಿರುದ್ಧ ಅನಗತ್ಯ ಆರೋಪ, ಟೀಕೆಯಲ್ಲಿ ತೊಡಗಿ ರುವುದನ್ನು ಕಾಂಗ್ರೆಸ್ ಪಕ್ಷವು ಸಹಿಸುವುದಿಲ್ಲ ಎಂದು ಮೈಸೂರು ನಗರ ಕಾಂಗ್ರೆಸ್ ವಕ್ತಾರ, ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ರಾಜೇಶ್ ಆಕ್ಷೇಪಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀ ನಾಮೆ ನಾಟಕವಾಡಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲವೆಂದು ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಆರೋಪ ಸರಿಯಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ದ್ದರೂ ಮೈತ್ರಿ ಧರ್ಮ ಪಾಲಿಸದೆ ಮೈಸೂರು -ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಸೋಲಿಗೂ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.

ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರ ಸೋಲಿಗೆ ಕಾಂಗ್ರೆಸ್ ಕಾರಣವಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮೈತ್ರಿ ಅಭ್ಯರ್ಥಿ ಪರ ಎಲ್ಲಿಯೂ ಅವರು ಮತ ಯಾಚಿಸಿಲ್ಲ. ಅಲ್ಲದೆ ಸಂಸದ ಶ್ರೀನಿ ವಾಸಪ್ರಸಾದ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದರು. ತಮ್ಮಲ್ಲೇ ತಪ್ಪು ಗಳನ್ನು ಇಟ್ಟುಕೊಂಡು ಅನಗತ್ಯವಾಗಿ ಕಾಂಗ್ರೆಸ್ ಬಗ್ಗೆ, ಕಾಂಗ್ರೆಸ್ ನಾಯಕರ ಬಗ್ಗೆ ದೂಷಿ ಸಲು ಅವರಿಗೆ ನೈತಿಕತೆ ಇಲ್ಲ. ಮೈತ್ರಿ ಧರ್ಮ ಪಾಲಿಸದ ವಿಶ್ವನಾಥ್ ಸಮನ್ವಯ ಸಮಿತಿ ಯಲ್ಲಿ ಸ್ಥಾನ ಬಯಸುವುದು ಖಂಡ ನೀಯ ಎಂದರು. ಇನ್ನಾದರೂ ಅವರು ಧೋರಣೆ ಬದಲಿಸಿಕೊಳ್ಳದಿದ್ದರೆ ವಿಶ್ವನಾಥ್ ಅವರ ವಿರುದ್ಧ ಪ್ರತಿಭಟನೆ ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಸಿದರು. ಗೋಷ್ಠಿ ಯಲ್ಲಿ ಕಾಂಗ್ರೆಸ್ ಮುಖಂಡರಾದ ಅಂಕಯ್ಯ, ಗಂಗಣ್ಣ ಉಪಸ್ಥಿತರಿದ್ದರು.

Translate »