ಸಾಮೂಹಿಕ ಅತ್ಯಾಚಾರ: ಮತ್ತೊಬ್ಬ ಆರೋಪಿ ಸೆರೆ
ಮೈಸೂರು

ಸಾಮೂಹಿಕ ಅತ್ಯಾಚಾರ: ಮತ್ತೊಬ್ಬ ಆರೋಪಿ ಸೆರೆ

June 7, 2019

ಮೈಸೂರು: ಮೈಸೂರು ಹೊರವಲಯ ಲಿಂಗಾಂಬುದಿ ಪಾಳ್ಯದ ಬಳಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಸಂಜಯ್(20)ನನ್ನು ಪೊಲೀಸರು ಬಂಧಿಸಿದ್ದಾರೆ. ಪರಿಚಿತ ರೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಲಾಗಿತ್ತು. ಅಲ್ಲದೆ ರಕ್ಷಣೆಗೆ ಮುಂದಾದ ಆಕೆಯ ಪರಿಚಿತನ ಕಾಲನ್ನು ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖ ಲಿಸಿಕೊಂಡಿರುವ ಕುವೆಂಪುನಗರ ಠಾಣೆ ಪೊಲೀಸರು, ಈಗಾಗಲೇ ಸೂರ್ಯ ಕುಮಾರ್ ಅಲಿಯಾಸ್ ಸೂರಿ (23), ಮಧು ಅಲಿಯಾಸ್ ಬಾಂಡ್ (23) ಪ್ರಶಾಂತ್ ಅಲಿಯಾಸ್ ತಮಿಳ್ (21), ಕಾರ್ತಿಕ್‍ಕುಮಾರ್ (25), ಜೀವನ್(25) ಎಂಬುವರನ್ನು ಬಂಧಿಸಿದ್ದರು.

Translate »