ಮೈಸೂರು: ಹುಟ್ಟು ವಾಗಲೇ ವಿಕಲಚೇತನರಾಗಿದ್ದರೆ ಮನಸ್ಸಿಗೆ ಆಘಾತವಾಗುವುದಿಲ್ಲ. ಆದರೆ, ಅಪ ಘಾತದಲ್ಲಿ ಕೈ-ಕಾಲು ಕಳೆದುಕೊಂಡರೆ ಜೀವನವೇ ಮುಗಿಯಿತೆಂದು ಪ್ರಾಣಕ್ಕೆ ಕುತ್ತು ತಂದುಕೊಳ್ಳುವವರ ಮಧ್ಯೆ ಅಪಘಾತ ದಲ್ಲಿ 2 ಕಾಲುಗಳು ತುಂಡಾದರೂ ಆತ್ಮ ಸ್ಥೈರ್ಯದಿಂದ ಮುನ್ನಡೆದು ಕುಸ್ತಿಯಲ್ಲಿ ತರಬೇತಿ ಪಡೆದು ಜೂ.19ರಿಂದ ಛತ್ತೀಸ್ ಗಢ್‍ನಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂಜಕುಸ್ತಿಗೆ ಆಯ್ಕೆಯಾಗಿದ್ದಾರೆ. ಮೈಸೂರು ಕುಂಬಾರಕೊಪ್ಪಲು ನಿವಾಸಿ, ಆಟೋ ಚಾಲಕ ಕೃಷ್ಣ ಮತ್ತು ಗೌರಿ ದಂಪತಿ ಪುತ್ರ ಪವನ್ ಈ ಸಾಧಕ. ಇವರು ಹುಟ್ಟು ವಿಕಲಚೇತನರಲ್ಲ. ವಿಜಯ ನಗರದಲ್ಲಿನ ಜೆಎಸ್‍ಎಸ್ ಶಾಲೆಯಲ್ಲಿ…
ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡಿಲ್ಲ, ನಾನೂ ಅವರನ್ನು ಟಾರ್ಗೆಟ್ ಮಾಡಲ್ಲ
June 6, 2019ಮೈಸೂರು: ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡಿ ರುವ ನಾಯಕರಾಗಿದ್ದಾರೆ. ನಾನು ಅವರನ್ನು ಎಂದಿಗೂ ಟಾರ್ಗೆಟ್ ಮಾಡುವುದಿಲ್ಲ. ಅವರೂ ನನ್ನನ್ನು ಟಾರ್ಗೆಟ್ ಮಾಡಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ.ಟಿ.ದೇವೇಗೌಡರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವರದಿ ಪ್ರಕಟವಾಗಿದೆ. ಅದು ವಾಸ್ತವ್ಯಕ್ಕೆ ದೂರವಾದ ಸಂಗತಿ. ಸಿದ್ದರಾಮಯ್ಯ ರಾಜ್ಯಕ್ಕೆ 5 ವರ್ಷ ಒಳ್ಳೆಯ…
ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಮೈಸೂರಿನ ವಿದ್ಯಾರ್ಥಿಗಳು
June 6, 2019ಮೈಸೂರು: ಹರಿ ಯಾಣದ ಪಾಣಿಪತ್‍ನಲ್ಲಿ ಜೂ.9ರಿಂದ 12ರವರೆಗೆ ನಡೆಯಲಿರುವ ನ್ಯಾಷನಲ್ ಗೇಮ್ಸ್ ಚಾಂಪಿಯನ್‍ಷಿಪ್‍ನಲ್ಲಿ 12 ಹಾಗೂ 17 ವರ್ಷದೊಳಗಿನವರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿ ಸಲಿರುವ ಮೈಸೂರಿನ 19 ಬಾಲಕ-ಬಾಲಕಿ ಯರಿಗೆ ಮೈಸೂರಿನ ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯೂತ್ ಆರ್ಗನೈಜೇಷನ್ ನೆರವಾಗಿದೆ. ಸಂಸ್ಥೆಯು ತನ್ನ ವಿದ್ಯಾ ಪ್ರೋತ್ಸಾಹ ಯೋಜನೆಯಡಿ 19 ಮಂದಿ ಬಾಲಕ-ಬಾಲಕಿಯರಿಗೆ ಪಾಣಿಪತ್ ಕಬಡ್ಡಿ ಪಂದ್ಯಾ ವಳಿಗೆ ಹೋಗಿ ಬರುವ ರೈಲ್ವೆ ಟಿಕೆಟ್ ವ್ಯವಸ್ಥೆ ಕಲ್ಪಿಸಿದ್ದು, ಒಂದಷ್ಟು ಆಹಾರ ಪದಾರ್ಥಗಳನ್ನು ನೀಡಿದೆ. ಬುಧವಾರ ಬೆಳಿಗ್ಗೆ…
ಚಿತ್ರಕಲೆಯಲ್ಲಿ ವಾಯುಮಾಲಿನ್ಯ ಕಣ್ಣಿಗೆ ಕಟ್ಟಿದ ಚಿಣ್ಣರು
June 6, 2019ಮೈಸೂರು: ವಾಯು ಮಾಲಿನ್ಯದ ದುಷ್ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಚಿಣ್ಣರು ತಮ್ಮ ಕುಂಚದಲ್ಲಿ ಮೂಡಿಸಿ, ಪರಿಸರ ಸಂರಕ್ಷಣೆಯ ಮಹತ್ವ ಸಾರಿದರು. ಮೈಸೂರಿನ ಸಿದ್ಧಾರ್ಥನಗರ ದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ವತಿಯಿಂದ `ವಾಯುಮಾಲಿನ್ಯ’ ಕುರಿತಂತೆ ಬುಧವಾರ ಸಂಸ್ಥೆ ಆವರಣದಲ್ಲಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ವಾಯು ಮಾಲಿನ್ಯದ ಕರಾಳ ಮುಖಗಳನ್ನು ತಮ್ಮ ಚಿತ್ರಕಲೆಯಲ್ಲಿ ಅನಾವರಣಗೊಳಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಚಿತ್ರ ಬರೆಯುವ ಸ್ಪರ್ಧೆಗೆ ಉಚಿತ ಪ್ರವೇ ಶಾವಕಾಶ ಕಲ್ಪಿಸಲಾಗಿತ್ತು….
ವಿಶ್ವ ಪರಿಸರ ದಿನಾಚರಣೆ: ವಿವಿಧ ಸಂಘ ಸಂಸ್ಥೆಗಳಿಂದ ಗಿಡ ನೆಡುವ ಕಾರ್ಯಕ್ರಮ
June 6, 2019ಮೈಸೂರು: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೈಕಲ್ ಜಾಥಾ ಆಯೋ ಜಿಸಿದ್ದರೆ, ವಿವಿಧ ಸಂಘ-ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಕಾಳಜಿ ಪ್ರದರ್ಶಿಸಿದವು. ಸೈಕಲ್ ಜಾಥಾ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎನ್‍ಸಿಸಿ, ಎನ್‍ಎಸ್‍ಎಸ್, ಐಪಿಎಂಓ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಲ್ಲಿ ಸೈಕಲ್ ಜಾಥಾ ಆಯೋಜಿಸಿತ್ತು. ಜಿಲ್ಲಾಧಿಕಾರಿ ಕಚೇರಿ ಬಳಿ ಹಿರಿಯ ಸಿವಿಲ್…
ಮೈಸೂರು ಆಸ್ಪತ್ರೆಗಳಿಗೆ 5 ತಿಂಗಳಾದರೂ ಬಿಲ್ ಹಣ ಪಾವತಿಸದ ಸರ್ಕಾರ
June 6, 2019ಮೈಸೂರು: ಸುಳವಾಡಿ ಮಾರಮ್ಮ ದೇವಸ್ಥಾನ ಪ್ರಸಾದದಲ್ಲಿ ವಿಷ ಪ್ರಾಶನ ಪ್ರಕರಣದಲ್ಲಿ ಅಸ್ವಸ್ಥರಾಗಿದ್ದವರಿಗೆ ನೀಡಿದ ಚಿಕಿತ್ಸಾ ಬಿಲ್ ಹಣವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ 5 ತಿಂಗಳಾದರೂ ಸರ್ಕಾರ ಬಿಡುಗಡೆ ಮಾಡಿಲ್ಲ. 2018ರ ಡಿಸೆಂಬರ್ 14ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಿಚುಗುತ್ ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಬೆರೆಸಿದ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿ, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ದ್ದರು. ಚಾಮರಾಜನಗರದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣ ಹಲವರನ್ನು ಮೈಸೂರಿನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ…
ಪೌರಕಾರ್ಮಿಕರ ನಿಯೋಜನೆ ಹಾಜರಾತಿ ಸಂಬಂಧ ಆಯುಕ್ತರ ಅಸಮಾಧಾನ
June 6, 2019ಮೈಸೂರು: ಪೌರಕಾರ್ಮಿಕರ ನಿಯೋಜನೆ, ಹಾಜರಾತಿ ಸಂಬಂಧ ವಾರದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಬೇಸರ ಹೊರಹಾಕಿದ್ದಾರೆ. ಜೂ.7ರಂದು ಕೌನ್ಸಿಲ್ ಸಭೆ ನಡೆಯ ಲಿರುವ ಹಿನ್ನೆಲೆಯಲ್ಲಿ ಪಾಲಿಕೆ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ, ಸದ ಸ್ಯರ ದೂರಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ವಾರ್ಡ್‍ಗೆ ನಿಯೋಜಿಸುವ ಪೌರಕಾರ್ಮಿ ಕರ ಸಂಖ್ಯೆ ಹಾಗೂ ಅವರ ಹಾಜರಾತಿ ಯನ್ನು ಸಲ್ಲಿಸುವಂತೆ ಸೂಚಿಸಿದ್ದರೂ ಸಂಬಂಧ…
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ
June 5, 2019ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಡಗೂರು ಎಚ್. ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇ ಗೌಡ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ್ದ ಲ್ಲದೆ, ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ, ಹುಣಸೂರು ಕ್ಷೇತ್ರದ ಜನರ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಮ್ರ ವಾಗಿ ಕೋರುತ್ತೇನೆ ಎಂದು ಕೇಳಿಕೊಂಡಿದ್ದಾರೆ. ವಿಶ್ವನಾಥ್ ರಾಜೀನಾಮೆ ಬಗ್ಗೆ ಪಕ್ಷ ಯಾವುದೇ ತೀರ್ಮಾನ ಕೈಗೊಂಡಿಲ್ಲವಾದರೂ, ಪಕ್ಷ ಸಂಘಟನೆ…
ಪಕ್ಷದ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಮಣೆ ಹಾಕಿದ್ದೇ ಕಾಂಗ್ರೆಸ್‍ನ ಇಂದಿನ ಸ್ಥಿತಿಗೆ ಕಾರಣ: ರಾಮಲಿಂಗಾರೆಡ್ಡಿ
June 5, 2019ಬೆಂಗಳೂರು: ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ, ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಪರಿಸ್ಥಿತಿಗೆ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಏಕೈಕ ಸ್ಥಾನ ಗಳಿಸುವ ಮೂಲಕ ಕಳಪೆ ಸಾಧನೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ರಾಮಲಿಂಗಾರೆಡ್ಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ರಾಜ್ಯ ಸರ್ಕಾರ ದಲ್ಲಿ…
ಲೋಕಸಭಾ ಚುನಾವಣೆ ಹೀನಾಯ ಸೋಲಿಗೆ ಮೊದಲು ಸಿದ್ದರಾಮಯ್ಯಗೆ ನೋಟೀಸ್ ನೀಡಿ: ರೋಷನ್ ಬೇಗ್
June 5, 2019ಬೆಂಗಳೂರು: ಪ್ರಸಕ್ತ ಲೋಕಸಭಾ ಚುನಾ ವಣೆಯಲ್ಲಿ ಪಕ್ಷ ದಯನೀಯವಾಗಿ ಸೋಲಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾರಣರಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲು ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಬೇಕೆಂದು ಮಾಜಿ ಸಚಿವ, ಹಿರಿಯ ಮುಖಂಡ ರೋಷನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಳು ಬಾರಿ ಗೆದ್ದಿರುವ ತಮಗೆ ಮಂತ್ರಿ ಸ್ಥಾನ ನೀಡದೇ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಟೀಕೆ ಮಾಡಿ ರುವ ಬೆನ್ನಲ್ಲೇ ಇದೀಗ…










