ಚಿತ್ರಕಲೆಯಲ್ಲಿ ವಾಯುಮಾಲಿನ್ಯ ಕಣ್ಣಿಗೆ ಕಟ್ಟಿದ ಚಿಣ್ಣರು
ಮೈಸೂರು

ಚಿತ್ರಕಲೆಯಲ್ಲಿ ವಾಯುಮಾಲಿನ್ಯ ಕಣ್ಣಿಗೆ ಕಟ್ಟಿದ ಚಿಣ್ಣರು

June 6, 2019

ಮೈಸೂರು: ವಾಯು ಮಾಲಿನ್ಯದ ದುಷ್ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಚಿಣ್ಣರು ತಮ್ಮ ಕುಂಚದಲ್ಲಿ ಮೂಡಿಸಿ, ಪರಿಸರ ಸಂರಕ್ಷಣೆಯ ಮಹತ್ವ ಸಾರಿದರು. ಮೈಸೂರಿನ ಸಿದ್ಧಾರ್ಥನಗರ ದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ವತಿಯಿಂದ `ವಾಯುಮಾಲಿನ್ಯ’ ಕುರಿತಂತೆ ಬುಧವಾರ ಸಂಸ್ಥೆ ಆವರಣದಲ್ಲಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ವಾಯು ಮಾಲಿನ್ಯದ ಕರಾಳ ಮುಖಗಳನ್ನು ತಮ್ಮ ಚಿತ್ರಕಲೆಯಲ್ಲಿ ಅನಾವರಣಗೊಳಿಸಿದರು.

ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಚಿತ್ರ ಬರೆಯುವ ಸ್ಪರ್ಧೆಗೆ ಉಚಿತ ಪ್ರವೇ ಶಾವಕಾಶ ಕಲ್ಪಿಸಲಾಗಿತ್ತು. ಮೈಸೂರು ಹಾಗೂ ಸುತ್ತಮುತ್ತಲ 80 ವಿದ್ಯಾರ್ಥಿಗಳು ಪಾಲ್ಗೊಂ ಡಿದ್ದರು. ಪ್ರಥಮ ಸ್ಥಾನ ಗಳಿಸಿದ ಮೈಸೂ ರಿನ ಗೀತಾ ಭಾರತಿ ಶಾಲೆಯ ಬಿ.ಸಿಂಚನಾಗೆ 3 ಸಾವಿರ ರೂ. ಮೌಲ್ಯದ ಉಡುಗೊರೆ ಯನ್ನು ನೀಡಲಾಯಿತು.

ದ್ವಿತೀಯ ಸ್ಥಾನ ಗಳಿಸಿದ ಬಂಟ್ವಾಳ್ ಶೆಣೈ ಶಾಲೆಯ ಎಂ. ಮಹಾಲಕ್ಷ್ಮೀಗೆ 2 ಸಾವಿರ ರೂ. ಹಾಗೂ ತೃತೀಯ ಸ್ಥಾನ ಗಳಿಸಿದ ಅದೇ ಶಾಲೆಯ ಪ್ರತಿಕ್ಷಾ ಸತೀಶ್‍ಗೆ 1 ಸಾವಿರ ರೂ. ಮೌಲ್ಯ ಉಡುಗೊರೆಗಳನ್ನು ನೀಡಲಾಯಿತು. ಅಲ್ಲದೆ, ಐವರಿಗೆ ತಲಾ 1 ಸಾವಿರ ರೂ. ಮೌಲ್ಯದ ಸಮಾಧಾನಕರ ಬಹುಮಾನಗಳನ್ನು ನೀಡ ಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಸಿಪಿ ಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್ ಸ್ವರಂಕರ್, ಸಿದ್ಧಾರ್ಥ ನಗರ ಸಂಚಾರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಗುರುಕಾಮತ್ ಬಹುಮಾನಗಳನ್ನು ವಿತರಿಸಿ ದರಲ್ಲದೆ, ಸಂಸ್ಥೆ ಆವರಣದಲ್ಲಿ ಗಿಡ ನೆಟ್ಟರು. ಸಂಗ್ರಹಾಲಯದ ಮುಖ್ಯಸ್ಥ ಡಾ.ಜಿ.ಎನ್. ಇಂದ್ರೇಶ್ ಮತ್ತು ಸಿಬ್ಬಂದಿ ಹಾಜರಿದ್ದರು.

Translate »