ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಮೈಸೂರಿನ ವಿದ್ಯಾರ್ಥಿಗಳು
ಮೈಸೂರು

ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಮೈಸೂರಿನ ವಿದ್ಯಾರ್ಥಿಗಳು

June 6, 2019

ಮೈಸೂರು: ಹರಿ ಯಾಣದ ಪಾಣಿಪತ್‍ನಲ್ಲಿ ಜೂ.9ರಿಂದ 12ರವರೆಗೆ ನಡೆಯಲಿರುವ ನ್ಯಾಷನಲ್ ಗೇಮ್ಸ್ ಚಾಂಪಿಯನ್‍ಷಿಪ್‍ನಲ್ಲಿ 12 ಹಾಗೂ 17 ವರ್ಷದೊಳಗಿನವರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿ ಸಲಿರುವ ಮೈಸೂರಿನ 19 ಬಾಲಕ-ಬಾಲಕಿ ಯರಿಗೆ ಮೈಸೂರಿನ ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯೂತ್ ಆರ್ಗನೈಜೇಷನ್ ನೆರವಾಗಿದೆ.

ಸಂಸ್ಥೆಯು ತನ್ನ ವಿದ್ಯಾ ಪ್ರೋತ್ಸಾಹ ಯೋಜನೆಯಡಿ 19 ಮಂದಿ ಬಾಲಕ-ಬಾಲಕಿಯರಿಗೆ ಪಾಣಿಪತ್ ಕಬಡ್ಡಿ ಪಂದ್ಯಾ ವಳಿಗೆ ಹೋಗಿ ಬರುವ ರೈಲ್ವೆ ಟಿಕೆಟ್ ವ್ಯವಸ್ಥೆ ಕಲ್ಪಿಸಿದ್ದು, ಒಂದಷ್ಟು ಆಹಾರ ಪದಾರ್ಥಗಳನ್ನು ನೀಡಿದೆ.

ಬುಧವಾರ ಬೆಳಿಗ್ಗೆ ಮೈಸೂರಿನ ಅರ ಮನೆ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಬಳಿ ಸಂಸ್ಥೆಯ ಅಧ್ಯಕ್ಷ ಮಹಾವೀರ ಚಂದ್ ಖಾಬಿಯಾ, ಉಪಾಧ್ಯಕ್ಷ ಆನಂದ ರಾಜ್ ಪಾಟ್ವಾ, ಖಜಾಂಚಿ ರಾಜನ್ ಬಾಗ್ ಮಾರ್ ಇನ್ನಿತರರು ಕಬಡ್ಡಿ ಪಂದ್ಯಾವಳಿಗೆ ತೆರಳಲಿರುವ ವಿದ್ಯಾರ್ಥಿಗಳ ತಂಡಕ್ಕೆ ರೈಲ್ವೆ ಟಿಕೆಟ್‍ಗಳನ್ನು ಹಸ್ತಾಂತರಿಸಿದರು.

ಕಬಡ್ಡಿ ಕೋಚ್ ಇಲಿಯಾಸ್ ಪಾಷಾ, ತಂಡದ ವ್ಯವಸ್ಥಾಪಕ ರವಿ ಅವರೊಂದಿಗೆ ತಂಡದ ನಾಯಕಿ ಗಾಂಧಿನಗರದ ಸುಲ್ತಾನಾ ಸೇರಿದಂತೆ 19 ಮಂದಿ ಆಟಗಾರರು ಈ ಸಂದರ್ಭದಲ್ಲಿ ಹಾಜರಿದ್ದರು. ತಂಡದಲ್ಲಿ ಮೈಸೂರಿನ ಕ್ಯಾತಮಾರನಹಳ್ಳಿಯ ಶ್ವೇತಾ, ಕಾವ್ಯ, ಹರ್ಷಿತಾ, ಸಿ.ಪುಷ್ಪಾ, ಯೋಗೇ ಶ್ವರಿ, ಪ್ರಿಯಾಂಕ, ವಿ.ಸುಜನಾ, ರಾಜೇಶ್ವರಿ, ಕೀರ್ತಿ, ಮಂಚಮ್ಮ, ಜಿ.ಸಂಜನಾ, ಬಿ.ಪವನ್, ಕೆ.ಹರ್ಷ, ಆರ್.ಮಹದೇವ, ಎನ್.ಅಭಿಷೇಕ್, ಎನ್.ರಕ್ಷಿತ್, ಜ್ಯೋತಿ ನಗರದ ಮೋಹನ್ ಇನ್ನಿತರರು ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯೂತ್ ಆರ್ಗನೈ ಜೇಷನ್‍ನ ನೆರವು ಪಡೆದವರಾಗಿದ್ದಾರೆ.

ಜೊತೆಯಲ್ಲಿ ಕೌಶಿಕ್, ಮುತ್ತುರಾಜ್, ಸುರೇಶ್, ಪವನ್, ಪ್ರಜ್ವಲ್ ಎಸ್.ರಾಜ್, ಪ್ರೀತಂ ಎಸ್.ರಾಜ್, ಎಂ.ಯುವರಾಜ್, ಎಂ.ಕೆ.ಲಕ್ಷ್ಮೀಶ, ವಿ.ಉಲ್ಲಾಸ್, ಬಾಲ ಗಂಗಾಧರ ಆದಿತ್ಯಾ ತೆರಳುತ್ತಿದ್ದಾರೆ.

ಸ್ಕೂಲ್ ಗೇಮ್ಸ್ ಅಮೆಚೂರ್ ಫೆಡ ರೇಷನ್ ಇಂಡಿಯಾ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಮೈಸೂರಿನ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿ ಮೈಸೂರಿಗೆ ಕೀರ್ತಿ ತರಲಿ ಎಂದು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾ ವೀರಚಂದ್ ಖಾಬಿಯಾ ಕಬಡ್ಡಿ ಕ್ರೀಡಾ ಪಟು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ದರು. ಸಂಸ್ಥೆಯ ಸದಸ್ಯರಾದ ಮನೋ ಹರಲಾಲ್ ಸಾಂಕ್ಲಾ, ಸುನಿಲ್ ಪಾಟ್ವಾ, ಪವನ್ ಸಾಂಚೇಟಿ, ಜಂಬು ಲೋಧಾ, ದಿನೇಶ್ ಬೊಹ್ರಾ, ಸಂಪತ್ ಬಾಗ್ ಮಾರ್, ಗೌತಮ್ ಗಾಂಧಿ, ಅನಿಲ್ ರಂಕಾ, ಧರ್ಮ ಚಂದ್ ಮುಥಾ, ಗೌತಮ್ ಪಾಟ್ವಾ, ಸುರೇಶ್ ರೂನ್ವಾಲ್, ವಿಜು ಬೊಹ್ರಾ, ದೀಪಕ್ ಬೊಹ್ರಾ ಉಪಸ್ಥಿತರಿದ್ದರು.

Translate »