ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡಿಲ್ಲ, ನಾನೂ ಅವರನ್ನು ಟಾರ್ಗೆಟ್ ಮಾಡಲ್ಲ
ಮೈಸೂರು

ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡಿಲ್ಲ, ನಾನೂ ಅವರನ್ನು ಟಾರ್ಗೆಟ್ ಮಾಡಲ್ಲ

June 6, 2019

ಮೈಸೂರು: ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡಿ ರುವ ನಾಯಕರಾಗಿದ್ದಾರೆ. ನಾನು ಅವರನ್ನು ಎಂದಿಗೂ ಟಾರ್ಗೆಟ್ ಮಾಡುವುದಿಲ್ಲ. ಅವರೂ ನನ್ನನ್ನು ಟಾರ್ಗೆಟ್ ಮಾಡಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ.ಟಿ.ದೇವೇಗೌಡರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವರದಿ ಪ್ರಕಟವಾಗಿದೆ. ಅದು ವಾಸ್ತವ್ಯಕ್ಕೆ ದೂರವಾದ ಸಂಗತಿ. ಸಿದ್ದರಾಮಯ್ಯ ರಾಜ್ಯಕ್ಕೆ 5 ವರ್ಷ ಒಳ್ಳೆಯ ಆಡಳಿತ ನೀಡಿ ದ್ದಾರೆ. ಒಳ್ಳೆ ಸರ್ಕಾರ ನಡೆಸಿ ದ್ದಾರೆ. ಇಂದಿಗೂ ಜನರ ಮನ ಸ್ಸಲ್ಲಿ ಜನನಾಯಕರಾಗಿ ಉಳಿದಿ ದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರೇ ನಾಯಕರಾಗಿದ್ದಾರೆ. ಅದನ್ನು ಆ ಪಕ್ಷದ ಹೈಕಮಾಂಡ್ ತೀರ್ಮಾ ನಿಸಿದೆ. ನಮ್ಮಿಬ್ಬರ ಬಾಂಧವ್ಯ ಉತ್ತಮವಾಗಿದೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಮುಂದುವರೆ ಯಲಿದ್ದಾರೆ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎ.ಹೆಚ್.ವಿಶ್ವ ನಾಥ್ ರಾಜೀನಾಮೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪತ್ರÀಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಅವರೇ ಮುಂದುವರೆ ಯುತ್ತಾರೆ. ಪಕ್ಷದ ಸಂಘಟನೆ ಜವಾಬ್ದಾರಿ ಅವರ ಬಳಿಯೇ ಇರಬೇಕೆಂಬುದು ನಮ್ಮ ಅಭಿಲಾಷೆ. ಮಂಗಳವಾರ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ರಾಜೀನಾಮೆ ಅಂಗೀಕರಿಸದಂತೆ ಸಲಹೆ ನೀಡಿದರಲ್ಲದೆ, ಪಕ್ಷದ ರಾಜ್ಯಾ ಧ್ಯಕ್ಷರಾಗಿ ಮುಂದುವರೆಯುವಂತೆ ವಿಶ್ವನಾಥ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎ.ಹೆಚ್.ವಿಶ್ವನಾಥ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸೂಚನೆ ಪಾಲಿಸುತ್ತೇನೆ. ಇಂದು ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಅವರೇ ಮುಂದು ವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಾತನಾಡದಂತೆ ಸೂಚನೆ: ಮೈತ್ರಿಗೆ ಸಂಬಂಧಿಸಿದಂತೆ ಯಾರೂ ಮಾತನಾಡದಂತೆ ಸೂಚನೆ ನೀಡಲಾಗಿದೆ. ಎರಡೂ ಪಕ್ಷದ ವರಿಷ್ಠರು ತಮ್ಮ ಪಕ್ಷದ ನಾಯಕರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಸಮನ್ವಯತೆಯಲ್ಲಿ ಉಂಟಾಗಿರುವ ಕೊರತೆಯನ್ನು ಸರಿದೂಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ ಅವರು, ಚುನಾವಣೆಯಲ್ಲಿ ಆಗಿರುವ ಹಿನ್ನಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಹೊಣೆಯಾಗಿಸುವುದು ಸರಿಯಲ್ಲ. ನಮ್ಮೆಲ್ಲರ ಮೇಲೂ ಜವಾಬ್ದಾರಿ ಇತ್ತು ಎಂದು ತಿಳಿಸಿದರು.

ರಾಜ್ಯದಿಂದಲೇ ಉಗಮ: ಈ ಹಿಂದೆ ದೇಶದಲ್ಲಿ ಕಾಂಗ್ರೆಸ್ ಅವನತಿ ಸ್ಥಿತಿಗೆ ತಲುಪಿತ್ತು. ಆಗ ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿ ಅವರಿಗೆ ರಾಜ್ಯದಲ್ಲಿ ಭಾರಿ ಬೆಂಬಲ ದೊರೆಯಿತು. ಆ ಮೂಲಕ ಕರ್ನಾಟಕದಿಂದಲೇ ಕಾಂಗ್ರೆಸ್‍ಗೆ ರಾಜಕೀಯ ಪುನರ್ಜನ್ಮ ದೊರೆಯಿತು. ಅದೇ ಪರಿಸ್ಥಿತಿ ಮತ್ತೆ ಕಾಂಗ್ರೆಸ್‍ಗೆ ಬಂದಿದೆ. ಮತ್ತೆ ದೇಶದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಕರ್ನಾಟಕದಿಂದ ಮಾತ್ರ ಸಾಧÀ್ಯ. ಜನತಾ ಪರಿವಾರದ ಮೂಲಕ ದೇವೇಗೌಡರು ಹಾಗೂ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿ ದ್ದರು. ಮುಂದೆಯೂ ದೇವೇಗೌಡ ಅವರಿಗೆ ದೊಡ್ಡ ಜವಾಬ್ದಾರಿ ಇದೆ. ರಾಷ್ಟ್ರಮಟ್ಟದಲ್ಲಿ ಮುಂದೆ ಎಲ್ಲಾ ಜಾತ್ಯಾತೀತ ಪಕ್ಷಗಳು ಒಟ್ಟಾಗುವ ಸನ್ನಿವೇಶ ರಾಜ್ಯದಿಂದಲೇ ಸೃಷ್ಟಿಯಾಗುತ್ತದೆ ಎಂದರು.

Translate »