ರಾಜ್ಯದಲ್ಲಿ ಮೂಲ, ವಲಸಿಗ ಕಾಂಗ್ರೆಸ್ ನಾಯಕರ ಕಚ್ಚಾಟಮೈತ್ರಿ ಸಂಪುಟ ಪುನರ್ರಚನೆ ನೆನೆಗುದಿಗೆ
ಮೈಸೂರು

ರಾಜ್ಯದಲ್ಲಿ ಮೂಲ, ವಲಸಿಗ ಕಾಂಗ್ರೆಸ್ ನಾಯಕರ ಕಚ್ಚಾಟಮೈತ್ರಿ ಸಂಪುಟ ಪುನರ್ರಚನೆ ನೆನೆಗುದಿಗೆ

June 6, 2019

ಬೆಂಗಳೂರು: ಪ್ರದೇಶ ಕಾಂಗ್ರೆಸ್‍ನಲ್ಲಿ ಭುಗಿಲೆದ್ದಿರುವ ಮೂಲ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವಣ ಕಚ್ಚಾಟದ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರದ ಸಂಪುಟ ಪುನರ್ ರಚನೆ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.

ಸಂಪುಟ ಪುನರ್ ರಚನೆ ಇಲ್ಲವೇ ವಿಸ್ತರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಪಕ್ಷೇತರರಿಗೆ ಮಣೆ ಹಾಕಲಾಗುತ್ತದೆ ಮತ್ತು ವಲಸಿಗ ಕಾಂಗ್ರೆಸ್ಸಿಗರಿಗೆ ಅವಕಾಶ ಲಭ್ಯವಾಗುತ್ತದೆ ಎಂಬ ಮಾಹಿ ತಿಯ ಹಿನ್ನೆಲೆ ಯಲ್ಲಿ ಪಕ್ಷದ ಹಿರಿಯ ನಾಯಕರು ಬಂಡಾಯದ ಕಹಳೆ ಊದಿದ್ದರು. ಕಾಂಗ್ರೆಸ್ ವರಿಷ್ಠರಲ್ಲಿ ಒಬ್ಬರಾದ ಆಸ್ಕರ್ ಫರ್ನಾಂಡೀಸ್ ತೆರೆಮರೆಯಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಒಂದು ಮಾಡಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ರೋಷನ್ ಬೇಗ್ ಮೂಲಕ ಸಿದ್ದರಾಮಯ್ಯ ವಿರುದ್ಧ ಕಹಳೆ ಊದಿಸಿದ್ದಾರೆ.

ಹಿರಿಯ ನಾಯಕರಾದ ಖರ್ಗೆ, ಮುನಿಯಪ್ಪ, ಮೊಯಿಲಿ ಸೇರಿದಂತೆ ಮೂಲ ಕಾಂಗ್ರೆಸ್ಸಿಗರು ಒಂದಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಂಪುಟ ವಿಸ್ತರಣೆ ಬಳಕೆ ಮಾಡಿಕೊಂಡಿದ್ದಾರೆ.

ಇವರ ಆಣತಿಯಂತೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ಹರಿಹಾಯ್ದಿದ್ದ ರೋಷನ್ ಬೇಗ್, ರಾಮಲಿಂಗಾರೆಡ್ಡಿ ಮತ್ತಿತರ ನಾಯಕರಿಗೆ ವಿವಿಧ ಕಾರಣಗಳಿಗಾಗಿ ಹಿರಿಯ ನಾಯಕರು ಒತ್ತಾಸೆ ನೀಡಿದ್ದರು.
ಲೋಕಸಭಾ ಚುನಾವಣೆಯಲ್ಲಿನ ಪಕ್ಷದ ಹೀನಾಯ ಸೋಲಿಗೆ ಸಿದ್ದರಾಮಯ್ಯ,ದಿನೇಶ್ ಗುಂಡೂರಾವ್ ಕಾರಣ ಎಂಬ ಅಸಮಾ ಧಾನ ಈ ಹಿರಿಯ ನಾಯಕರಿಗೂ ಇದ್ದುದರಿಂದ ವಲಸಿಗ ಕಾಂಗ್ರೆಸ್ಸಿಗರಿಂದ ಮೂಲ ಕಾಂಗ್ರೆಸ್ಸಿಗರಿಗೆ ಕಷ್ಟವಾಗಲಿದೆ.

ಮತ್ತೊಬ್ಬ ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇರವಾಗಿ ಬಹಿರಂಗಪಡಿಸಿ, ಪ್ರದೇಶ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಪಕ್ಷದ ಅಧ್ಯಕ್ಷ ರಾಹುಲ್ ಅವರೇ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳೀಯ ನಾಯಕರಿಂದ ನಮಗೆ ನ್ಯಾಯ ದೊರಕುತ್ತಿಲ್ಲ. ಸರ್ಕಾರ ಇಲ್ಲವೆ ಪಕ್ಷದಲ್ಲಿ ಏಕ ಮೇವಾದ್ವಿತೀಯ ಆಡಳಿತ ನಡೆಯುತ್ತಿದೆ. ಇಂತಹ ದ್ದಕ್ಕೆ ತೆರೆ ಎಳೆಯಬೇಕೆಂದು ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೇ ರಾಷ್ಟ್ರೀಯ ಅಧ್ಯಕ್ಷರಿಗೆ, ಪಾಟೀಲ್ ಆಗ್ರಹಿಸಿದ್ದಾರೆ.

ರಾಮಲಿಂಗಾ ರೆಡ್ಡಿ ಸಚಿವರಾಗ್ತಾರೆ, ದೇವೇಗೌಡರ ನಾನು ಸೋಲಿಸಿಲ್ಲ…
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ನಡೆದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಸಿದ್ದರಾಮಯ್ಯ, ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಪ್ರಶ್ನೆಯೇ ಇಲ್ಲ. ಶಿವಳ್ಳಿಯ ವರ ನಿಧನದಿಂದ ತೆರವಾಗಿರುವ ಒಂದು ಸ್ಥಾನ ವನ್ನು ತುಂಬುವ ಬಗ್ಗೆ ಚರ್ಚೆ ನಡೆದಿದೆ ಅಷ್ಟೇ ಎಂದು ಹೇಳಿದರು. ಅದರೆ ಸಂಪುಟ ವಿಸ್ತರಣೆ, ಪುನರ್ ರಚನೆ ಎಲ್ಲ ಸದ್ಯಕ್ಕೆ ನಡೆಯುವುದಿಲ್ಲ ಎಂದ ಅವರು, ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮಾತಿಗೆ ಪ್ರತಿಕ್ರಿಯಿಸಿ, ಮುಂದೆ ಸಂಪುಟ ಪುನರ್ ರಚನೆಯಾ ದಾಗ ರಾಮಲಿಂಗಾರೆಡ್ಡಿ ಅವರು ಮಂತ್ರಿಯಾಗುತ್ತಾರೆ. ತುಮ ಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ. ಸ್ಪರ್ಧಿಸಿದವರು ಅವರು, ಪ್ರಚಾರ ಮಾಡಿದವರು ಅವರ ಪಕ್ಷದವರು, ಹೀಗಿರುವಾಗ ನಾನು ಹೇಗೆ ಅವರ ಸೋಲಿಗೆ ಕಾರಣನಾಗುತ್ತೇನೆ ಎಂದು ಪ್ರಶ್ನಿಸಿದರು. ನಾನು ದೇವೇಗೌಡರ ಸೋಲಿಗೆ ಕಾರಣ ಎನ್ನುವುದಾದರೆ ಮೈಸೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಅವರ ಸೋಲಿಗೆ ಯಾರು ಕಾರಣ? ಎಂದು ಪ್ರಶ್ನಿಸಿದರಲ್ಲದೆ, ಅವರವರ ಸೋಲಿಗೆ ಅವರವರೇ ಪ್ರಶ್ನೆ ಮಾಡಿಕೊಳ್ಳಬೇಕು. ಕೇಂದ್ರದಲ್ಲಿ ರಾಜ್ಯದ ದಲಿತರೊಬ್ಬರಿಗೆ ಸಚಿವ ಸ್ಥಾನ ದೊರೆತಿಲ್ಲ ಎಂಬ ತಮ್ಮ ಹೇಳಿಕೆಗೆ ಬಿಜೆಪಿ ಮಾಡಿರುವ ಟ್ವೀಟ್‍ಗೆ ಇದೇ ಸಂದರ್ಭದಲ್ಲಿ ಉತ್ತರಿಸಿದ ಅವರು, 2013 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದು ಶಾಸಕಾಂಗ ಪಕ್ಷದ ಬೆಂಬಲ ಹಾಗೂ ವರಿಷ್ಠರ ಬೆಂಬಲದಿಂದ ಎಂದು ಹೇಳಿದರು. ಶಾಸಕರು ಹಾಗೂ ವರಿಷ್ಠರು ಬಯಸಿದ್ದರಿಂದ ನಾನು ಮುಖ್ಯಮಂತ್ರಿ ಆದೇನೇ ಹೊರತು ದಲಿತ ನಾಯಕರಾದ ಡಾ. ಪರಮೇಶ್ವರ್ ಅವರಾಗಲೀ, ಮಲ್ಲಿಕಾರ್ಜುನ ಖರ್ಗೆ ಅವರಾಗಲೀ ಮುಖ್ಯ ಮಂತ್ರಿ ಆಗುವುದು ಬೇಡ ಎಂದು ಎಲ್ಲಿ ಹೇಳಿದ್ದೆ ಅಂತ ಪ್ರಶ್ನಿಸಿದರು. ಖರ್ಗೆಯವರು, ಪರಮೇಶ್ವರ್ ಅವರೂ ಮುಖ್ಯಮಂತ್ರಿ ಆಗಲಿ, ಅದನ್ನು ನಾನೇಕೆ ಬೇಡ ಎನ್ನಲಿ ಎಂದವರು ಪ್ರಶ್ನಿಸಿದರು. ಅವರಿಗೂ ಇಂತಹ ಅಧಿಕಾರ ದೊರೆಯಬೇಕೆಂಬುದು ನನ್ನ ಬಯಕೆ. ಕಾಲ ಕೂಡಿ ಬಂದಾಗ ಅವರು ಆಗುತ್ತಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ನಮ್ಮ ಪಕ್ಷದವರೇ ಅಲ್ಲ,ಹೀಗಿರುವಾಗ ಅವರ ಹೇಳಿಕೆಗಳಿಗೆ ಉತ್ತರ ನೀಡುತ್ತಾ ಕೂರಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಮೂಲ ಹಾಗೂ ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷದವರು ಅಷ್ಟೇ. ಹೀಗಾಗಿ ಬೇರೆ ಮಾತನಾಡುವ ಅಗತ್ಯವಿಲ್ಲ ಎಂದರು

ಕಾಂಗ್ರೆಸ್‍ನಲ್ಲಿ ಹಿರಿಯರು, ಪ್ರಾಮಾಣಿಕರಿಗೆ ಬೆಲೆ ಇಲ್ಲ
ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ಮತ್ತು ಪ್ರಾಮಾ ಣಿಕರಿಗೆ ಬೆಲೆ ಇಲ್ಲದಂತಾಗಿದೆ. ಈ ವಿಚಾರದಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ರೋಷನ್ ಬೇಗ್ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ತನ್ವೀರ್ ಸೇಠ್ ಪಕ್ಷದ ನಾಯಕರ ವಿರುದ್ಧ ತಮ್ಮ ಅಸಮಾ ಧಾನ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹರಾಜ ಕ್ಷೇತ್ರದ ಶಾಸಕರೂ ಆಗಿರುವ ತನ್ವೀರ್ ಸೇಠ್, ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ರಾಮಲಿಂಗಾ ರೆಡ್ಡಿ ಮತ್ತು ರೋಷನ್ ಬೇಗ್ ಸೇರಿದಂತೆ ಹಲವು ಹಿರಿಯರು ಅಸಮಾ ಧಾನ ಹೊರ ಹಾಕಿದ್ದಾರೆ. ಅವರ ಮಾತುಗಳಲ್ಲಿ ಸತ್ಯಾಂಶವಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ಮತ್ತು ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ ಎಂದು ಧ್ವನಿಗೂಡಿಸಿದ್ದಾರೆ. ಸಚಿವ ಸ್ಥಾನದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ರಾಜಕಾರಣಿ, ಸನ್ಯಾಸಿ ಅಲ್ಲ. ಆಡಳಿತ ಪಕ್ಷದಲ್ಲಿ ದ್ದೇನೆ. ಮುಸ್ಲಿಂ ಸಮುದಾಯ ತಮ್ಮನ್ನು ಗೆಲ್ಲಿಸಿ ಕಳುಹಿಸಿದೆ. ಹೀಗಾಗಿ ಸಹಜವಾಗಿಯೇ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸಲು ಎರಡೂ ಪಕ್ಷಗಳ ನಾಯಕರಿಗೆ ಸಾಧ್ಯವಾಗಿಲ್ಲ. ಈ ತಪ್ಪುಗಳನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕಾದ ಅಗತ್ಯವಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ ಅವರು ನಮ್ಮ ಪಕ್ಷದವರಲ್ಲ ಎಂದರು.

Translate »