ಮೈಸೂರಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಪ್ರಾರ್ಥನೆ
ಮೈಸೂರು

ಮೈಸೂರಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಪ್ರಾರ್ಥನೆ

June 6, 2019

ಮೈಸೂರು: ಮೈಸೂರಿನಲ್ಲಿ ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬವನ್ನುಸಂಭ್ರಮ-ಸಡಗರದಿಂದ ಆಚರಿಸಿದರು.

ಒಂದು ತಿಂಗಳು ಉಪವಾಸ ಆಚರಿ ಸಿದ್ದ ಮುಸ್ಲಿಂ ಬಾಂಧವರು, ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮೈಸೂರಿನ ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಸಾಮೂ ಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾ ಶಯ ವಿನಿಮಯ ಮಾಡಿಕೊಂಡರು.

ಮೈಸೂರಿನ ಸರ್ಖಾಜಿ ಹಜರತ್ ಮೌಲನಾ ಮೊಹಮದ್ ಉಸ್ಮಾನ್ ಷರೀಫ್ ಅವರು ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ, ನಾಡಿನ ಜನತೆಗೆ ರಂಜಾನ್ ಸಂದೇಶ ನೀಡಿ ದರು. ಈ ಸಂದರ್ಭ ಮಾತನಾಡಿದ ಅವರು, ಒಂದು ತಿಂಗಳ ಉಪವಾಸ ವ್ರತ ಮಾಡಿದ ಬಳಿಕ ದೇವರಿಗೆ ವಂದನೆ ಸಲ್ಲಿಸಲು ನಾವು ಇಲ್ಲಿ ಸಮಾಗಮಗೊಂಡಿದ್ದೇವೆ ಎಂದರು. ಮುಸ್ಲಿಂ ಬಾಂಧವರು ಈ ತಿಂಗಳು ಪೂರ್ತಿ ತಾವು ಸಂಪಾದನೆ ಮಾಡಿದ ಆದಾಯ ದಲ್ಲಿ ಶೇ. 2.5ರಷ್ಟು ಹಣವನ್ನು ಜಕತ ಹೆಸರಲ್ಲಿ ಬಡವರಿಗೆ ನೀಡುತ್ತಾರೆ. ಅಲ್ಲದೆ ಸಾಮೂಹಿಕ ಪ್ರಾರ್ಥನೆಗೆ ಬರುವ ಮುನ್ನ ಫಿತ್ರಾವನ್ನು ದಾನ ಮಾಡುತ್ತಾರೆ. ಬಡ ವರೂ ಸಹ ಸಂತೋಷದಿಂದ ರಂಜಾನ್ ಹಬ್ಬವನ್ನು ಆಚರಿಸಲಿ ಎಂಬುದೇ ಇದರ ಉದ್ದೇಶವಾಗಿದೆ ಎಂದೂ ಸರ್ಖಾಜಿ ಅವರು ನುಡಿದರು.

ಪ್ರಾರ್ಥನೆ ಜೊತೆಗೆ ದೇವರಿಗೆ ಭಕ್ತಿ-ಭಾವ ಸಮರ್ಪಿಸಬೇಕು. ಮುಸ್ಲಿಮೇತರ ಸೋದರರೂ ರಂಜಾನ್‍ನಲ್ಲಿ ಭಾಗವಹಿಸಬೇಕು. ನೀವು ಸಹ ಅವರ ಹಬ್ಬಗಳಲ್ಲಿ ಪಾಲ್ಗೊಂಡು ಕೋಮು ಸೌಹಾರ್ದ ಮತ್ತು ಸೋದರತ್ವ ಮೂಡಿಸಬೇಕೆಂದೂ ಉಸ್ಮಾನ್ ಷರೀಫ್ ಇದೇ ಸಂದರ್ಭ ಕರೆ ನೀಡಿದರು. ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ನಾಡಿನ ಜನರೆಲ್ಲರೂ ಕ್ಷೇಮವಾಗಿರಲು ಸರ್ಖಾಜಿ ಅವರು ಇದೇ ವೇಳೆ ಪ್ರಾರ್ಥಿಸಿದರು. ಇದೇ ಮೊದಲ ಬಾರಿ ಈದ್ಗಾ ಮೈದಾನ ಮುಸ್ಲಿಂ ಬಾಂಧವರಿಂದ ತುಂಬಿತ್ತು. ಇಲ್ಲಿಯೂ ಬಡವರಿಗೆ ಹಣಕಾಸು ನೆರವು ನೀಡಿ ರಂಜಾನ್ ಹಬ್ಬದ ಪ್ರಾಮುಖ್ಯತೆ ಸಾರಿದರು. ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿ ಡಾ.ಬಿ.ಶೇಕ್ ಅಲಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಾಜಿ ಡೀನ್ ಡಾ.ಸೈಯದ್ ಶಕೀಬ್ ಉರ್ ರೆಹಮಾನ್, ಉಪಮೇಯರ್ ಶಫಿ ಅಹಮದ್, ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಆರಿಫ್ ಮೇಕ್ರಿ, ತನಜೀಮ್ ಎ ಅಲಹೆ ಸುನತ ಓ ಜಮತ್‍ನ ಪ್ರಧಾನ ಕಾರ್ಯದರ್ಶಿ ಜಮೀಲ್ ಅಹಮದ್ ಅಶ್ರಫಿ, ಮಾಜಿ ಕಾರ್ಪೋರೇಟರ್ ಸುಹೇಲ್ ಬೇಗ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಶಾಸಕ ತನ್ವೀರ್‍ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ವಿವಿಇಟಿ ಕಾರ್ಯದರ್ಶಿ ಕವೀಶ್‍ಗೌಡ, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್, ಹಿರಿಯ ಪತ್ರಕರ್ತ ಅಪ್ಸರ್ ಪಾಷ, ಯುವ ಕಾಂಗ್ರೆಸ್ ಮುಖಂಡ ಶೌಖತ್ ಅಲಿಖಾನ್, ಅಫ್ತಾಬ್ ಅಹಮದ್, ಅಕ್ಮಲ್ ಪಾಷಾ ಸೇರಿದಂತೆ ಹಲವು ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು. ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜ್, ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಪ್ರಾರ್ಥನೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸುತ್ತಲಿನ ರಸ್ತೆ, ಬಂಬೂ ಬಜಾರ್ ರಸ್ತೆ, ಬಾಲಭವನದ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡಿದ್ದರಿಂದ ಉಂಟಾದ ಸಮಸ್ಯೆಯನ್ನು ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ನೇತೃತ್ವದಲ್ಲಿ ನಿಭಾಯಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Translate »