ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ದೇಶಕ್ಕೆ, ಫಣೀಂದ್ರ ರಾಜ್ಯಕ್ಕೆ ಪ್ರಥಮ
ಮೈಸೂರು

ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ದೇಶಕ್ಕೆ, ಫಣೀಂದ್ರ ರಾಜ್ಯಕ್ಕೆ ಪ್ರಥಮ

June 6, 2019

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) -2019 ಫಲಿತಾಂಶ ಹೊರ ಬಿದ್ದಿದ್ದು ರಾಜಸ್ಥಾನದ ನಳಿನ್ ಖಂಡೇವಾಲ್ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಅನುಮೋದಿಸಿದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸು ಗಳಿಗೆ ಪ್ರವೇಶ ಪಡೆ ಯಲು ನಿಟ್ ಪರೀಕ್ಷೆ ಬರೆಯಬೇಕಾಗುತ್ತದೆ. ದೆಹಲಿಯ ಭವಿಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶದ ಅಕ್ಷತ್ ಕೌಶಿಕ್ ಕ್ರಮವಾಗಿ ಎರಡನೇ ಮತ್ತು 3ನೇ ಸ್ಥಾನ ಪಡೆದರು. ತೆಲಂಗಾಣದ ಮಾಧುರಿ ರೆಡ್ಡಿ ಜಿ., ಬಾಲಕಿಯರಲ್ಲಿ ಅಗ್ರ ಸ್ಥಾನ ಗಳಿಸಿಕೊಂಡಿ ದ್ದಾರೆ. ಈಕೆ ಅಖಿಲ ಭಾರತ ಮಟ್ಟದಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. 14,10,755 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದ ರಲ್ಲಿ 7,97,042 ಪ್ರವೇಶಕ್ಕೆ ಅರ್ಹ ರಾಗಿದ್ದಾರೆ. ಮೇ 5 ಮತ್ತು ಮೇ 20 ರಂದು ಎನ್‍ಡಿಎ ದೇಶದಾದ್ಯಂತ ನೀಟ್ ಪರೀಕ್ಷೆ ಆಯೋಜಿಸಿತ್ತು.

50 ರ್ಯಾಂಕ್‍ನಲ್ಲಿ ರಾಜ್ಯದ ಮೂವರು: ಇನ್ನು ನೀಟ್ ಪರೀಕ್ಷೆಯಲ್ಲಿ 50ನೇ ರ್ಯಾಂಕ್ ವರೆಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Translate »