ನವದೆಹಲಿ, ಆ.26-ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‍ಗೆ ಆಘಾತ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಯೊಂದಿಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 5 ಪುಟಗಳ ಪತ್ರವನ್ನು ಸಲ್ಲಿಸಿದ್ದಾರೆ. ಪಕ್ಷದಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ಬಗ್ಗೆ ಕಿಡಿಕಾರಿರುವ ಅವರು, ಹಿರಿಯ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಿರುವುದು ಮತ್ತು ಅನನುಭವಿ ಭಟ್ಟಂಗಿಗಳ ಗುಂಪಿನ ಒಡನಾಟ ವನ್ನು ಹೆಚ್ಚಿಸಿಕೊಂಡಿರುವುದೇ ತಾವು ಪಕ್ಷದಿಂದ ನಿರ್ಗಮಿಸಲು ಪ್ರಮುಖ ಕಾರಣ…
ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿ ರಾಜ್ಯದಲ್ಲಿ 8 ವಿಶ್ವವಿದ್ಯಾನಿಲಯ ಸ್ಥಾಪನೆ ರಾಜ್ಯ ಸಚಿವ ಸಂಪುಟ ಸಭೆ ಅನುಮತಿ
August 26, 2022ಬೆಂಗಳೂರು, ಆ. 25 (ಕೆಎಂಶಿ)-ರಾಜ್ಯದಲ್ಲಿ 8 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸೇರಿದ್ದ ರಾಜ್ಯ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ್, ಚಾಮರಾಜ ನಗರ, ಕೊಡಗು, ಮಂಡ್ಯ, ಹಾಸನ, ಹಾವೇರಿ, ಕೊಪ್ಪಳ, ಬಾಗಲಕೋಟೆ ಮತ್ತು ಬೀದರ್ ನಲ್ಲಿ ವಿವಿಗಳು ಸ್ಥಾಪನೆಯಾಗಲಿವೆ ಎಂದರು. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಗಾಗಿ ಕರ್ನಾಟಕ ವಿವಿಗಳ ಕಾಯ್ದೆ 2000ಕ್ಕೆ ತಿದ್ದುಪಡಿಗೆ ಸಂಪುಟ ಸಮ್ಮತಿಸಿದೆ. ಈಗಾ ಗಲೇ ಈ ಜಿಲ್ಲೆಗಳಲ್ಲಿ…
ಸೆ.12ರಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ
August 26, 2022ಬೆಂಗಳೂರು, ಆ. 25(ಕೆಎಂಶಿ)-ರಾಜ್ಯ ವಿಧಾನಮಂಡಲ ಮಳೆಗಾಲದ ಅಧಿವೇಶನವನ್ನು ಸೆಪ್ಟೆಂಬರ್ 12ರಿಂದ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಅಧಿವೇಶನ 15 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಹತ್ತು ದಿನ ಸರ್ಕಾರಿ ಕಾರ್ಯಕಲಾಪ ನಡೆಯಲಿದೆ. ಉಳಿದ ಐದು ದಿನ ಸರ್ಕಾರಿ ರಜೆ ಇರಲಿದೆ ಎಂದರು. ಕೆಪಿಎಸ್‍ಸಿಯಲ್ಲಿ, ಸಿ, ಡಿ ಗ್ರೂಪ್ ನೌಕರರ ನೇಮಕಾತಿ ಸಂದರ್ಭದಲ್ಲಿ ಮೌಖಿಕ ಸಂದರ್ಶನ ಇನ್ನು…
ಸಚಿವರು, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಪುರಾವೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ
August 25, 2022ಬೆಂಗಳೂರು, ಆ.24(ಕೆಎಂಶಿ)- ಭ್ರಷ್ಟಾಚಾರದ ಪುರಾವೆ, ದಾಖಲೆಗಳಿದ್ದರೆ, ಸಂಬಂಧಿಸಿದ ಸಚಿವರು, ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, 40% ಕಮಿಷನ್ ಆರೋಪಕ್ಕೆ ಸಂಬಂಧಿ ಸಿದಂತೆ ಚರ್ಚೆ ನಡೆಸಿ, ಹೇಳಿಕೆ ನೀಡಿದ ನಂತರ ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರು ಶಾಸನಬದ್ಧವಾದ ತನಿಖಾ ಸಂಸ್ಥೆಗೆ ಯಾವುದೇ ಆರೋಪಗಳಿದ್ದರೂ, ದೂರು ನೀಡಬಹುದು. ಹೈಕೋರ್ಟ್ ಆದೇಶದ ನಂತರ ಲೋಕಾಯುಕ್ತ ಸಂಸ್ಥೆಗೆ…
40% ಅಲ್ಲ 50% ಕಮಿಷನ್ ಸರ್ಕಾರ!
August 25, 2022ಬೆಂಗಳೂರು, ಆ.24-ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 40% ಅಲ್ಲ 50% ರಷ್ಟು ಕಮಿಷನ್ ತೆಗೆದುಕೊಳ್ಳುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರಿಂದ ಪರ್ಸೆಂಟೇಜ್‍ಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತಾರಕಕ್ಕೇರಿದೆ ಎಂದರು. ಆ ಮೂಲಕ ಪರ್ಸೆಂಟೇಜ್ ಆರೋಪದ ಧೂಳು ಮತ್ತೊಮ್ಮೆ ಸರ್ಕಾರದ ಮೇಲೆ ಕವಿದಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ತಾರಕಕ್ಕೇ ರುವ ಲಕ್ಷಣಗಳಿವೆ. ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಒತ್ತಾಯ ಮಾಡಬೇಕು ಎಂದು ನನಗೆ…
ಮ್ಯಾಜಿಕ್ ನಂಬರ್ 113 ತಲುಪಲು ಮತ್ತೊಮ್ಮೆ ಆಪರೇಷನ್ ಕಮಲ
August 25, 2022ಬೆಂಗಳೂರು, ಆ.24(ಕೆಎಂಶಿ)- ಮುಂಬ ರುವ ವಿಧಾನಸಭೆ ಚುನಾವಣೆ ಯಲ್ಲಿ ಮ್ಯಾಜಿಕ್ ಸಂಖ್ಯೆ 113ರ ಗಡಿ ತಲುಪಲು ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಜೆಡಿಎಸ್‍ನ ಆಯ್ದ ಶಾಸಕರನ್ನು ಗುರಿ ಯಾಗಿಸಿಕೊಂಡು ನಿರಂತರವಾಗಿ ಅವರ ಮನವೊಲಿಸುವ ಕಾರ್ಯ ನಡೆದಿದೆ.ವಿಧಾನಸಭೆ ಚುನಾವಣೆ ಇತಿಹಾಸದಲ್ಲೇ ಬಿಜೆಪಿ ನೂರು ಕ್ಷೇತ್ರದಲ್ಲಿ ಖಾತೆ ತೆರೆದಿಲ್ಲ. ಇಂತಹ ಕ್ಷೇತ್ರಗಳಲ್ಲಿ ವರ್ಚಸ್ವಿ ಮತ್ತು ಪ್ರಭಾವ ಹೊಂದಿರುವ ಜೆಡಿಎಸ್‍ನ 12ಕ್ಕೂ ಹೆಚ್ಚು ಶಾಸಕರನ್ನು ಸಂಪರ್ಕಿಸಿದೆ. ಜೆಡಿಎಸ್, ಅಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರಿಗೂ ಗಾಳ ಹಾಕಿದೆ. ಇವರನ್ನು ಸೆಳೆಯಲು ಪಕ್ಷದ…
ವಿಧಾನಸೌಧದಲ್ಲಿ ಬಸವಣ್ಣ, ಕೆಂಪೇಗೌಡರ ಪ್ರತಿಮೆ ಸ್ಥಾಪನೆ
August 24, 2022ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಬಿಜೆಪಿ ಸರ್ಕಾರವು ವಿಧಾನಸೌಧದಲ್ಲಿ ಸಮಾಜ ಸುಧಾರಕ, ದಾರ್ಶನಿಕ ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ ಎರಡು ದೊಡ್ಡ ಸಮು ದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರನ್ನು ಓಲೈಸಲು ಪ್ರಯತ್ನಿಸು ತ್ತಿದೆ. ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಪ್ರತಿಮೆಗಳು ಅನಾವರಣಗೊಳ್ಳುವ ನಿರೀಕ್ಷೆಯಿದೆ. ವಿಧಾನಸೌಧದ ಆವರಣದಲ್ಲಿ ಈಗ ಡಾ.ಬಿ.ಆರ್.ಅಂಬೇಡ್ಕರ್, ಕೆಂಗಲ್ ಹನುಮಂತಯ್ಯ, ಮಹಾತ್ಮ ಗಾಂಧಿ ಮತ್ತಿ ತರರ ಪ್ರತಿಮೆಗಳಿವೆ. ವಾಸ್ತವವಾಗಿ, 2021 ರಲ್ಲಿ,…
ಕಾಂಗ್ರೆಸ್‍ನ ಮಡಿಕೇರಿ ಚಲೋ ಮುಂದೂಡಿಕೆ
August 24, 2022ಬೆಂಗಳೂರು, ಆ. 23(ಕೆಎಂಶಿ)- ಕಾಂಗ್ರೆಸ್ ವತಿಯಿಂದ ಆಗಸ್ಟ್ 26ರಂದು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಮಡಿಕೇರಿ ಚಲೋವನ್ನು ಮುಂದೂಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿ ಸಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮುಂದೂ ಡಲಾಗಿದೆ ಎಂದರು. ವಿರೋಧ ಪಕ್ಷದ ನಾಯಕ ನಾಗಿ, ಮಾಜಿ ಮುಖ್ಯಮಂತ್ರಿಯಾಗಿ ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ. ನಮ್ಮ ಪಕ್ಷ ಕಾನೂನು ಮೀರುವುದನ್ನು ಬಯ ಸುವುದಿಲ್ಲ. ಇದು ಪಕ್ಷದ ಕಾರ್ಯಕ್ರಮ. ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ಪ್ರತಿ ಭಟನೆ…
ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ತಿಂಗಳೊಳಗೆ ಡಿಜಿಟಲ್ ನೋಂದಣಿ, ಪಾವತಿ ವ್ಯವಸ್ಥೆ
August 23, 2022ಬೆಂಗಳೂರು, ಆ.22(ಕೆಎಂಶಿ)-ಎಲ್ಲಾ ಜಿಲ್ಲಾಸ್ಪತ್ರೆ ಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್ ಹೆಸರು ನೋಂದಣಿ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ವೈದ್ಯ ಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಾಲೂಕು ಆಸ್ಪತ್ರೆಗಳಿಗೂ ಇದೇ ವ್ಯವಸ್ಥೆ ವಿಸ್ತರಿಸಿ ಜಾರಿ ಮಾಡಲಾಗುವುದು. ಜಯನಗರ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡಲು, ವೈದ್ಯರ ಭೇಟಿಗೆ ಆನ್‍ಲೈನ್‍ನಲ್ಲಿ ಅಥವಾ ಮೊಬೈಲ್ ಸಂದೇಶದ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ತರಲು ಸೂಚಿಸಲಾಗಿದೆ. ಹಾಗೆಯೇ…
ತಿಮ್ಮಪ್ಪನ ಸನ್ನಿಧಿಯಲ್ಲಿ ಬಿಜೆಪಿ ಚುನಾವಣಾ ತಯಾರಿ ಸೆಪ್ಟೆಂಬರ್‍ನಲ್ಲಿರಾಜ್ಯದಲ್ಲಿ ಮೂರು ರಥಯಾತ್ರೆ
August 21, 2022ಬೆಂಗಳೂರು, ಆ.20(ಕೆಎಂಶಿ)- ಮುಂಬರುವ ವಿಧಾನಸಭೆ ಚುನಾವಣೆ ಎದುರಿಸುವ ನೀಲಿನಕ್ಷೆ ಯನ್ನು ರಾಜ್ಯ ಬಿಜೆಪಿ ಮುಖಂಡರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ರೂಪಿಸಿದ್ದಾರೆ. ಈ ತೀರ್ಮಾ ನದಂತೆ ಸೆಪ್ಟೆಂಬರ್ ತಿಂಗಳಲ್ಲಿ ಕಮಲದ ಮೂರು ರಥಗಳು ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿವೆ. ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ಆಯ್ಕೆಗೊಂಡಿರುವ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಎರಡು ದಿನಗಳ ತಿರುಪತಿ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಸಮಾಲೋಚಿಸಿದ್ದಾರೆ. ಯಡಿಯೂರಪ್ಪ…