ಬೆಂಗಳೂರು, ಜು.1(ಕೆಎಂಶಿ)- ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯು ತ್ತಿರುವ ಪೌರಕಾರ್ಮಿಕರಿಗೆ ಮಾಸಿಕ ಎರಡು ಸಾವಿರ ರೂ. ಸಂಕಷ್ಟ ಭತ್ಯೆ ನೀಡಲು ತೀರ್ಮಾನಿಸಿರುವ ರಾಜ್ಯ ಸಚಿವ ಸಂಪುಟ, ಪ್ರಭಾವಿಗಳು ಪ್ರತಿನಿಧಿ ಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುಮತಿ ನೀಡಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಆರೋಗ್ಯ ಇಲಾಖೆಯಲ್ಲಿ 438 ವೈದ್ಯಾಧಿಕಾರಿ ಮತ್ತು ಇದೇ ಪ್ರಮಾಣದ ನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು…
ವಿದ್ಯುತ್ ದರ ಯೂನಿಟ್‍ಗೆ 19ರಿಂದ 31 ಪೈಸೆ ಏರಿಕೆ
July 2, 2022ಬೆಂಗಳೂರು, ಜು.1- ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಸರ್ಕಾರ ಜನತೆಗೆ ಕರೆಂಟ್ ಶಾಕ್ ನೀಡಿದೆ. ದರ ಏರಿಕೆ ನಿಯಮ ಇಂದಿನಿಂದಲೇ ಜಾರಿಯಾಗಿದೆ. ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19 ರಿಂದ 31 ಪೈಸೆ ಹೆಚ್ಚಳ ಮಾಡಲಾಗಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಇನ್ಮುಂದೆ 19 ರಿಂದ 31 ರೂ. ಪಾವತಿಸಬೇಕು. ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಸ್ಕಾಂ ಗಳಿಂದ…
ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರ ನೆಲೆಗೆ ವರಿಷ್ಠರ ಕಾರ್ಯತಂತ್ರ
July 2, 2022ಬೆಂಗಳೂರು, ಜು.1(ಕೆಎಂಶಿ)-ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷ ತಲೆ ಎತ್ತಲು ಕರ್ನಾಟಕ ಮೂಲ ನೆಲೆಯಾಗಬೇಕು ಎಂದು ಬಯಸಿರುವ ಬಿಜೆಪಿ ವರಿಷ್ಟರು, ಈ ಸಂಬಂಧ ರಾಜ್ಯದ ನಾಯಕ ರಿಗೆ ಟಾಸ್ಕ್ ನೀಡುವ ಸಾಧ್ಯತೆಗಳಿವೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಎರಡು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಕರ್ನಾಟಕದ ನಾಯಕರಿಗೆ ವರಿಷ್ಟರು ಈ ಸಂಬಂಧ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ನಾಯಕರು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ಮುಂದಿನ…
ಶಿವಸೇನೆ ರೆಬೆಲ್ ಸ್ಟಾರ್ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ
July 1, 2022ಮುಂಬೈ, ಜೂ.30- ಮಹಾರಾಷ್ಟ್ರ ದಲ್ಲಿ ಕಳೆದ ಎರಡು ವಾರಗಳಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಅಂತ್ಯಗೊಂಡಿದೆ. ಬಿಜೆಪಿ ವರಿಷ್ಠರು ಶಿವಸೇನೆ ಬಂಡಾಯದಲ್ಲಿ ಭವಿಷ್ಯದ ರಾಜಕೀಯ ಸೌಧ ಕಟ್ಟಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ 31 ತಿಂಗಳ ಮಹಾ ಆಘಾಡಿ ಸರ್ಕಾರ ಪತನವಾಗಿ ಶಿವಸೇನೆ ಬಂಡಾಯ ನಾಯಕ ಏಕ ನಾಥ್ ಶಿಂಧೆ ನೇತೃತ್ವದಲ್ಲಿನ ನೂತನ ಶಿವಸೇನೆ-ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜಭವನದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ…
ವಿಧಾನಸಭೆ ಚುನಾವಣೆಗೆ ಮುನ್ನ ಮೇಕೆದಾಟು ಯೋಜನೆ ಪ್ರಾರಂಭಶತಸಿದ್ಧ
July 1, 2022ಬೆಂಗಳೂರು, ಜೂ.30(ಕೆ.ಎಂ.ಶಿ.)-ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಮೇಕೆದಾಟು ಕುಡಿ ಯುವ ನೀರಿನ ಯೋಜನೆ ಅನುಷ್ಠಾನ ಗೊಳ್ಳಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಪರೋಕ್ಷ ಸಹಕಾರ ನೀಡುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆಗೆ ಕೇಂದ್ರ ಬಲ ತುಂಬುತ್ತಿದೆ. ಈ ಹಿಂದೆ ಎಂ.ಬಿ.ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಹಾಗೂ ಜಯಚಂದ್ರ ಅವರು ಜಲ ಸಂಪನ್ಮೂಲ ಮತ್ತು ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಸಮಾನಾಂತರವಾಗಿ ಮೇಕೆದಾಟು ಸಮೀಪ ಅಣೆಕಟ್ಟು ನಿರ್ಮಿಸಲು ವಿಸ್ತೃತಾ ಯೋಜನಾ ವರದಿ ಸಿದ್ಧಪಡಿಸಿದ್ದಲ್ಲದೆ, ಸಂಪುಟದ…
ಇಂದಿನಿಂದ ರಾಜ್ಯಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ನಿಷೇಧ
July 1, 2022ಬೆಂಗಳೂರು, ಜೂ.30-ಜುಲೈ 1ರಿಂದ ರಾಜ್ಯಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಲಾಗುತ್ತಿದೆ. ಜುಲೈ 1ರಿಂದ ದೇಶಾದ್ಯಂತ ಏಕ-ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗಿದ್ದು, ಕರ್ನಾಟಕದಲ್ಲಿ 2016 ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸ ಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಅPಅಃ) ಹೊರಡಿಸಿದ ಈ ಆದೇಶವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಏSPಅಃ) ಗಡಿ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲು ಹೆಚ್ಚಿನ ಬಲ ನೀಡಿದಂತಾಗಿದೆ. ಏSPಅಃ ಜುಲೈ 1 ರಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಹ…
ನಾಯಕತ್ವಕ್ಕಾಗಿಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ
June 29, 2022ಬೆಂಗಳೂರು,ಜೂ.28(ಕೆಎಂಶಿ)-ನಾಯಕತ್ವದ ಪೈಪೆÇೀಟಿಗೆ ಇಳಿದಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮುಖಂಡನಾಗಿ ಪಕ್ಷದಲ್ಲಿ ನಾಯಕತ್ವ ಗಿಟ್ಟಿಸಿಕೊಳ್ಳಲು ಶಿವಕುಮಾರ್ ತಮ್ಮ ಸಮಾಜದ ಬೃಹತ್ ಸಮಾವೇಶ ವನ್ನು ನಗರದ ಅರಮನೆ ಆವರಣದಲ್ಲಿ ನಡೆಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ವಜಾತಿ ಕುರುಬ ಸಮಾಜ ದಾವಣಗೆರೆಯಲ್ಲಿ ಆಗಸ್ಟ್ ಮೊದಲ ವಾರ ತಮ್ಮ ಜನಾಂಗದ ಸಮಾವೇಶ ನಡೆಸುತ್ತಿದ್ದಾರೆ….
ನೂಪುರ್ ಶರ್ಮಾ ಬೆಂಬಲಿಸಿದ ವ್ಯಕ್ತಿಯ ಶಿರಚ್ಛೇದಿಸಿ, ಪ್ರಧಾನಿ ಮೋದಿಗೂ ಬೆದರಿಕೆ: ದುಷ್ಕರ್ಮಿಗಳ ಬಂಧನ
June 29, 2022ಉದಯಪುರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ರಾಜಸ್ಥಾನದ ಉದಯಪುರದ ಟೈಲರ್ ಹತ್ಯೆಯ ಹಂತಕರನ್ನು ಪೆÇಲೀಸರು ಬಂಧಿಸಿ ದ್ದಾರೆ. ಮಾಲ್ದಾಸ್ ಸ್ಟ್ರೀಟ್ ಪ್ರದೇಶ ದಲ್ಲಿ ಟೈಲರ್ ಶಿರಚ್ಛೇದ ಮಾಡಿ, ಬಳಿಕ ವಿಡಿಯೋವೊಂದನ್ನು ಸಾಮಾ ಜಿಕ ಮಾಧ್ಯಮಗಳಲ್ಲಿ ಹಂಚಿಕೊಂ ಡಿದ್ದ ಆರೋಪಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು. ಈ ಇಬ್ಬರೂ ದುಷ್ಕರ್ಮಿಗಳನ್ನು ರಾಜ ಸಮಂದ್‍ನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ತ್ವರಿ ತಗತಿಯಲ್ಲಿ ಕೈಗೊಳ್ಳುವ ಮೂಲಕ ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು…
ವಿಲಕ್ಷಣ ವ್ಯಕ್ತಿತ್ವದವರಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಬಾರದು
June 28, 2022ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಗಳಿಗೆ ವಿಲಕ್ಷಣ ವ್ಯಕ್ತಿತ್ವದವರನ್ನು ನೇಮಿಸಬಾರದು. ಅಂತಹ ಸಮಿತಿಗಳಿಗೆ ನೇಮಕ ಮಾಡುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಪಟ್ಟ ನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಹೇಳಿದರು. ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸ್ವಾಮೀಜಿ, ರೋಹಿತ್ ಚಕ್ರ ತೀರ್ಥ ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರನ್ನಾಗಿ ನೇಮಕ ಮಾಡಿದ್ದನ್ನು ವಿರೋಧಿಸಿದರು. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸರ್ಕಾರ ರೂಪಿಸಿದ ಪಠ್ಯವನ್ನು ಓದಿ, ಕಲಿತು, ಪರೀಕ್ಷೆ ಬರೆಯಬೇಕು. ಅಂತಹ…
ಜಗತ್ ಪ್ರಸಿದ್ಧ ಬೆಂಗಳೂರು ಮತ್ತಷ್ಟು ಬೆಳೆಯಲಿ
June 28, 2022ಬೆಂಗಳೂರು,ಜೂ.27(ಕೆಎಂಶಿ)-ಜಗತ್ತಿನ ಗಮನ ಸೆಳೆಯುತ್ತಿ ರುವ ಬೆಂಗಳೂರು ನಗರ ಇನ್ನಷ್ಟು ಬೆಳೆಯಬೇಕು. ಆ ದಿಸೆಯಲ್ಲಿ ರಾಜ್ಯ ಸರ್ಕಾರ ದೃಢವಾದ ಹೆಜ್ಜೆಗಳನ್ನು ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕೆಂಪೇಗೌಡರ 513ನೇ ಜಯಂತ್ಯುತ್ಸವದಲ್ಲಿ `ನಾಡಪ್ರಭು ಕೆಂಪೇಗೌಡ ಅಂತರ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. 1998-99ರಲ್ಲಿ ರಾಷ್ಟ್ರದ ಸಿಲಿಕಾನ್ ಕೇಂದ್ರ ಯಾವ ನಗರ ಆಗಬೇಕು ಎಂಬ ವಿಷಯದಲ್ಲಿ ಬೆಂಗಳೂರು ಮತ್ತು ಹೈದರಾ ಬಾದ್ ನಡುವೆ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ…