ಬೆಂಗಳೂರು, ಜು. 11(ಕೆಎಂಶಿ)-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೊಂದು, ತಮ್ಮ ಕುಟುಂಬದವರಿ ಗೊಂದು ಟಿಕೆಟ್ ನೀಡು ವಂತೆ ರಾಜ್ಯ ಕಾಂಗ್ರೆಸ್ ಮುಖಂಡರು ಪಕ್ಷದ ನಾಯಕರಲ್ಲಿ ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಡಾ.ಹೆಚ್.ಸಿ.ಮಹ ದೇವಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ 40ಕ್ಕೂ ಹೆಚ್ಚು ಮುಖಂಡರು ತಮಗಲ್ಲದೆ, ತಮ್ಮ ಮಗನಿಗೆ ಇಲ್ಲವೇ ಸೊಸೆಗೆ ಟಿಕೆಟ್ ನೀಡಿ ಎಂದಿದ್ದಾರೆ. ಬಿಜೆಪಿ ಇಲ್ಲವೇ ಜೆಡಿಎಸ್ ಸತತವಾಗಿ ಗೆಲ್ಲುತ್ತಿ ರುವ ಕ್ಷೇತ್ರಗಳಲ್ಲಿ ತಮ್ಮ ಕುಟುಂಬ ವರ್ಗದವ ರನ್ನು ಕಣಕ್ಕಿಳಿಸಿದರೆ ಆ ಕ್ಷೇತ್ರ ಕಾಂಗ್ರೆಸ್‍ದಾಗು ತ್ತದೆ. ನಮ್ಮದಲ್ಲದ…
ರಾಷ್ಟ್ರಪತಿ ಚುನಾವಣೆ ಬೆಂಗಳೂರಿಗೆ ಆಗಮಿಸಿದ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು
July 11, 2022ಬೆಂಗಳೂರು, ಜು.10- ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಭಾನು ವಾರ ಬೆಂಗಳೂರಿಗೆ ಆಗಮಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದ್ರೌಪದಿ ಮುರ್ಮು ಅವರನ್ನು ಆತ್ಮೀಯವಾಗಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮತ್ತು ನಗರಾ ಭಿವೃದ್ಧಿ ಸಚಿವ ಬಸವರಾಜ್ ಭೈರತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ರಾಷ್ಟ್ರಪತಿ ಹುದ್ದೆಗೆ ಜುಲೈ 18 ರಂದು ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಹೊರಬೀಳಲಿದೆ….
ನಗರ ಪ್ರದೇಶದ ಮತದಾರರಿಗೆ ಬಿಜೆಪಿ ‘ಎ’ ಖಾತಾ ಗಾಳ
July 7, 2022ಬೆಂಗಳೂರು, ಜು. 6(ಕೆಎಂಶಿ)- ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ಪ್ರದೇಶದ ಮತದಾರರನ್ನು ಸೆಳೆಯಲು ಬಿ-ಖಾತಾ ನಿವೇಶನದಾರರಿಗೆ ಎ-ಖಾತಾ ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಬಿ-ಖಾತಾ ನಿವೇಶನದಾರರಿಗೆ ಪೂರ್ಣಪ್ರಮಾಣದ ಹಕ್ಕು ನೀಡುವ ತೀರ್ಮಾನವನ್ನು ಮುಖ್ಯಮಂತ್ರಿಯವರು ತೆಗೆದುಕೊಂಡಿದ್ದಾರೆ. ಸರ್ಕಾರದ ನಿರ್ಧಾರವನ್ನು ಸುದ್ದಿಗಾರರಿಗೆ ತಿಳಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಇನ್ನೆರಡು ತಿಂಗಳಲ್ಲಿ ಬಿ-ಖಾತಾದಾರರಿಗೆ ಎ-ಖಾತಾ ದಾಖಲೆಗಳು ಲಭ್ಯವಾಗಲಿವೆ. ಲಕ್ಷಾಂತರ…
`ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ
July 6, 2022ಹುಬ್ಬಳ್ಳಿ, ಜು.5-ದೇಶ-ವಿದೇಶದಲ್ಲಿ `ಸರಳ ವಾಸ್ತು’ ಮೂಲಕ ಪ್ರಖ್ಯಾತಿ ಗಳಿಸಿದ್ದ ಬಾಗಲಕೋಟೆಯ ಚಂದ್ರಶೇಖರ ಗುರೂಜಿಯ ವರನ್ನು (60) ಇಂದು ಮಧ್ಯಾಹ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಐಷಾರಾಮಿ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಭಯಾನಕ ದೃಶ್ಯ ಹೊಟೇಲ್‍ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರೂಜಿ ಅವರ `ಸರಳ ವಾಸ್ತು’ ಕಚೇರಿಯಲ್ಲಿ ಈ ಹಿಂದೆ ಉದ್ಯೋಗಿಗಳಾಗಿದ್ದು, ಗುರೂಜಿ ಅವರ ಮಾಜಿ ಆಪ್ತ ಸಹಾಯಕರೂ ಆಗಿದ್ದ ಧಾರವಾಡದ ಮಹಾಂತೇಶ್ ಶಿರೂರ್ ಹಾಗೂ ಕಲಘಟಗಿಯ ಮಂಜುನಾಥ್…
40 ಸೆಕೆಂಡ್‍ನಲ್ಲಿ ಹತ್ಯೆ: 4 ಗಂಟೆಯಲ್ಲಿ ಅಂದರ್!
July 6, 2022ಹುಬ್ಬಳ್ಳಿ, ಜು.5-ಹುಬ್ಬಳ್ಳಿಯ ಐಷಾರಾಮಿ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಚಂದ್ರಶೇಖರ್ ಗುರೂಜಿ ಅವರನ್ನು ಕೇವಲ 40 ಸೆಕೆಂಡ್‍ಗಳಲ್ಲಿ ಕಗ್ಗೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು 4 ಗಂಟೆಯಲ್ಲಿ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ವಿಷಯ ತಿಳಿದು ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಹಾಗೂ ಸಿಸಿ ಟಿವಿ ಕ್ಯಾಮರಾದ ದೃಶ್ಯಗಳ ಆಧರಿಸಿ ಕೂಡಲೇ ಹುಬ್ಬಳ್ಳಿಯಲ್ಲಿ ನಾಕಾಬಂದಿ ವಿಧಿಸಿದ್ದಲ್ಲದೆ, ನೆರೆ ಜಿಲ್ಲೆಗಳ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅಲ್ಲದೇ 5 ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಗಿಳಿದರು. ಗುರೂಜಿ ಹತ್ಯೆ…
ಮತ್ತೆ ಮುಖ್ಯಮಂತ್ರಿ ಕನಸು ಹೊತ್ತ ಸಿದ್ದರಾಮಯ್ಯರಿಗೆ… ಸುರಕ್ಷಿತ ಕ್ಷೇತ್ರ ತಲಾಷೆ!
July 6, 2022ಬೆಂಗಳೂರು, ಜು. 5(ಕೆಎಂಶಿ)- ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಇನ್ನು ಬಾದಾಮಿಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರು ತ್ತಿಲ್ಲ. ಈಗ ಎಲ್ಲಿ ನಿಲ್ಲಬೇಕು ಎಂಬುದರ ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ. ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿ ಸುವುದಾಗಿ ಈ ಹಿಂದೆ ಆಪ್ತರ ಬಳಿ ಹೇಳಿ ಕೊಂಡಿದ್ದರು. ಆದರೆ ಇದೀಗ ಮನಸ್ಸು ಬದಲಾ ಯಿಸಿದ್ದಾರೆ. ಜೆಡಿಎಸ್‍ನ ಜಿ.ಟಿ. ದೇವೇಗೌಡ, ಕಾಂಗ್ರೆಸ್ ಸೇರಲು ಪೂರ್ಣ ಆಸಕ್ತಿ ತೋರದಿ ರುವುದು…
ಪಿಎಸ್‍ಐ ನೇಮಕಾತಿ ಅಕ್ರಮ: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ಹುದ್ದೆ ಅಧಿಕಾರಿ ಅಮೃತ್ ಪೌಲ್ ಬಂಧನ, ಅಮಾನತು!
July 5, 2022ಬೆಂಗಳೂರು: 545 ಪಿಎಸ್‍ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಬಂಧಿಸಿದೆ. ಭಾರತೀಯ ಪೆÇಲೀಸ್ ಸೇವೆ (ಐಪಿಎಸ್) ಕರ್ನಾಟಕ ಕೇಡರ್‍ನ ಇತಿಹಾಸ ದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರನ್ನು ಬಂಧಿಸಿರು ವುದು ಇದೇ ಮೊದಲು. ಹತ್ತು ದಿನ ಸಿಐಡಿ ವಶಕ್ಕೆ ಕೋರ್ಟ್ ಒಪ್ಪಿಸಿದೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಇಂದು ಕಾರ್ಲ್‍ಟನ್ ಹೌಸ್‍ನಲ್ಲಿ ರುವ ಸಿಐಡಿ ಕಚೇರಿಗೆ 1995ರ ಬ್ಯಾಚ್‍ನ ಐಪಿಎಸ್ ಅಧಿಕಾರಿ ಪೌಲ್ ಅವರನ್ನು ಮೂರನೇ ಬಾರಿ ವಿಚಾರಣೆಗೆ ಕರೆಯಲಾಗಿತ್ತು….
5 ಲಕ್ಷ ರೂ. ಲಂಚ ಪಡೆದ ಪ್ರಕರಣ: ಎಸಿಬಿಯಿಂದ ಬಂಧಿತ ಐಎಎಸ್ ಅಧಿಕಾರಿ ಮಂಜುನಾಥ್ ಅಮಾನತು
July 5, 2022ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವೇಳೆ ಜಮೀನು ವ್ಯಾಜ್ಯ ಇತ್ಯರ್ಥಪಡಿಸಲು ವ್ಯಕ್ತಿಯೊಬ್ಬರಿಂದ ಐದು ಲಕ್ಷ ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜಿ.ಮಂಜುನಾಥ್ ಅವರನ್ನು ಎಸಿಬಿ ಸೋಮ ವಾರ ಬಂಧಿಸಿದೆ. ಲಂಚ ಪ್ರಕರಣದಲ್ಲಿ ಮೂರನೇ ಆರೋಪಿ ಯಾಗಿರುವ ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಇಂದು ಯಶವಂತಪುರದ ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ಲಂಚ ಪ್ರಕರಣದಲ್ಲಿ ಮಂಜುನಾಥ್ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡುವಂತೆ ಕೋರಿ ಬೆಂಗಳೂರು ಎಸಿಬಿ ಪೆÇಲೀಸರು ಭ್ರಷ್ಟಾಚಾರ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು….
ಎಲ್ಲಾ ವಂಚಿತ ಸಮುದಾಯಗಳನ್ನು ಪಕ್ಷತಲುಪಬೇಕು
July 4, 2022ಹೈದರಾಬಾದ್, ಜು.3-ನಾವು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗದೆ ಎಲ್ಲಾ ವಂಚಿತ ಸಮುದಾಯಗಳನ್ನು ತಲುಪಬೇಕುಎಂದು ಬಿಜೆಪಿಯಎಲ್ಲಾ ಪ್ರಧಾನಕಾರ್ಯ ದರ್ಶಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದಅವರು, ಎಲ್ಲಾ ಸಮುದಾಯಗಳಲ್ಲೂ ದೀನ-ದಲಿತರ ವರ್ಗಗಳಿವೆ. ಆ ವರ್ಗಗಳ ಪರವಾಗಿ ಕೆಲಸ ಮಾಡುವ ಮೂಲಕ ಅವರನ್ನು ನಾವು ತಲುಪಬೇಕುಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಪ್ರಮುಖವಾಗಿದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲ ಪಡಿಸಬೇಕು ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆಎನ್ನಲಾಗಿದ್ದು, ಅದಕ್ಕೆಕರ್ನಾಟಕವನ್ನುಉದಾಹರಣೆ ನೀಡಿಇದೇ ಮಾದರಿಯಲ್ಲಿ ತಮಿಳುನಾಡು, ಕೇರಳ, ಆಂಧ್ರ…
ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ
July 4, 2022ಹೈದರಾಬಾದ್,ಜು.3-ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಎಂದುಕೇಂದ್ರ ಗೃಹ ಸಚಿವಅಮಿತ್ ಶಾ ಹೇಳಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದಅವರು, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮಾತ್ರವಲ್ಲದೆ, ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಎಂದುಅವರು ಹೇಳಿದ್ದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಗೃಹ ಸಚಿವರ ಭಾಷಣದಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮುಂದಿನ 30ರಿಂದ 40 ವರ್ಷಗಳು ಬಿಜೆಪಿ ಪಕ್ಷದಯುಗವಾಗಿದ್ದು ಭಾರತವು “ವಿಶ್ವಗುರು” (ವಿಶ್ವ ನಾಯಕ) ಆಗಲಿದೆಎಂದುಅಮಿತ್ ಶಾ ಹೇಳಿದ್ದಾರೆ. ರಾಜವಂಶದರಾಜಕಾರಣ, ಜಾತೀಯತೆ…










