ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ
News

ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ

July 4, 2022

ಹೈದರಾಬಾದ್,ಜು.3-ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಎಂದುಕೇಂದ್ರ ಗೃಹ ಸಚಿವಅಮಿತ್ ಶಾ ಹೇಳಿದ್ದಾರೆ.
ಹೈದರಾಬಾದ್‍ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದಅವರು, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮಾತ್ರವಲ್ಲದೆ, ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಎಂದುಅವರು ಹೇಳಿದ್ದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಗೃಹ ಸಚಿವರ ಭಾಷಣದಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮುಂದಿನ 30ರಿಂದ 40 ವರ್ಷಗಳು ಬಿಜೆಪಿ ಪಕ್ಷದಯುಗವಾಗಿದ್ದು ಭಾರತವು “ವಿಶ್ವಗುರು” (ವಿಶ್ವ ನಾಯಕ) ಆಗಲಿದೆಎಂದುಅಮಿತ್ ಶಾ ಹೇಳಿದ್ದಾರೆ. ರಾಜವಂಶದರಾಜಕಾರಣ, ಜಾತೀಯತೆ ಮತ್ತುತುಷ್ಟೀಕರಣದರಾಜಕೀಯ ಮಹಾ ಪಾಪಗಳಾಗಿದ್ದು ಹಲವಾರು ವರ್ಷಗಳಿಂದ ದೇಶವುಅನುಭವಿಸುತ್ತಿರುವ ನೋವುಗಳ ಹಿಂದಿನ ಕಾರಣಗಳಿವು ಎಂದಿದ್ದಾರೆ.

ಪಕ್ಷದಕುಟುಂಬ ರಾಜಕಾರಣ, ಜಾತೀಯರಾಜಕಾರಣ ಮತ್ತುತುಷ್ಟೀಕರಣರಾಜಕೀಯವನ್ನು ಕೊನೆಗಾಣಿಸಿ ದೇಶದ ಮತ್ತುಜನರಅಭಿವೃದ್ಧಿ, ಸಾಧನೆಗಳ ಮೂಲಕ ಪಕ್ಷವನ್ನುಜನರು ಮಾತನಾಡುವಂತಾಗಬೇಕೆಂದು ಶಾ ಒತ್ತಿಹೇಳಿದ್ದಾರೆ ಎಂದು ತಿಳಿಸಿದರು. ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಕುಟುಂಬ ಆಡಳಿತವನ್ನು ಕೊನೆಗೊಳಿಸಲಿದೆ. ಬಿಜೆಪಿಯ ಮುಂದಿನ ಸುತ್ತಿನ ಬೆಳವಣಿಗೆಯು ದಕ್ಷಿಣ ಭಾರತದಿಂದಆಗಲಿದೆಎಂದು ಸಭೆಯಲ್ಲಿ ಸಾಮೂಹಿಕ ಭರವಸೆಯನ್ನು ನಾಯಕರು ಹೊಂದಿದ್ದಾರೆಎಂದು ಹಿಮಂತ್ ಬಿಸ್ವ ಹೇಳಿದರು.

Translate »