ಎಲ್ಲಾ ವಂಚಿತ ಸಮುದಾಯಗಳನ್ನು  ಪಕ್ಷತಲುಪಬೇಕು
News

ಎಲ್ಲಾ ವಂಚಿತ ಸಮುದಾಯಗಳನ್ನು ಪಕ್ಷತಲುಪಬೇಕು

July 4, 2022

ಹೈದರಾಬಾದ್, ಜು.3-ನಾವು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗದೆ ಎಲ್ಲಾ ವಂಚಿತ ಸಮುದಾಯಗಳನ್ನು ತಲುಪಬೇಕುಎಂದು ಬಿಜೆಪಿಯಎಲ್ಲಾ ಪ್ರಧಾನಕಾರ್ಯ ದರ್ಶಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.

ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದಅವರು, ಎಲ್ಲಾ ಸಮುದಾಯಗಳಲ್ಲೂ ದೀನ-ದಲಿತರ ವರ್ಗಗಳಿವೆ. ಆ ವರ್ಗಗಳ ಪರವಾಗಿ ಕೆಲಸ ಮಾಡುವ ಮೂಲಕ ಅವರನ್ನು ನಾವು ತಲುಪಬೇಕುಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಪ್ರಮುಖವಾಗಿದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲ ಪಡಿಸಬೇಕು ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆಎನ್ನಲಾಗಿದ್ದು, ಅದಕ್ಕೆಕರ್ನಾಟಕವನ್ನುಉದಾಹರಣೆ ನೀಡಿಇದೇ ಮಾದರಿಯಲ್ಲಿ ತಮಿಳುನಾಡು, ಕೇರಳ, ಆಂಧ್ರ ಮತ್ತುತೆಲಂಗಾಣದಲ್ಲಿಕಾರ್ಯಕರ್ತರುಕಾರ್ಯನಿರ್ವ ಹಿಸಬೇಕು ಎಂದು ತಿಳಿಸಿದ್ದಾಗಿ ಮೂಲಗಳು ಹೇಳಿವೆ. ಚುನಾ ವಣಾ ಪರೀಕ್ಷೆಯಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಿರುವಉತ್ತರಪ್ರದೇಶದ
ಅಜೆಂಗಢ ಮತ್ತುರಾಂಪುರ ಲೋಕಸಭಾ ಉಪ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸಿದ್ದನ್ನು ಮೋದಿ ಉಲ್ಲೇಖಿಸಿದರು ಎಂದು ಹೇಳಲಾಗಿದ್ದು, ಸಾಮಾಜಿಕವಾಗಿ ಮತ್ತುಆರ್ಥಿಕವಾಗಿ ಹಿಂದುಳಿದಿರುವ ಪಸ್ಮಾಂಡ ಮುಸ್ಲೀಮರಂತಹ ಸಮುದಾಯ ಗಳನ್ನು ತಲುಪಲು ಪ್ರಧಾನಿ ಪಕ್ಷಕ್ಕೆ ನೀಡಿದ ಸಂದೇಶಇದಾಗಿದೆಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೇರಳಾದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಒಲವನ್ನು ಗಳಿಸುವ ನಿಟ್ಟಿನಲ್ಲಿಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದ್ದು, ರಾಜಕೀಯ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮೋದಿ ಹಲವಾರು ಸಲಹೆ ಗಳನ್ನು ನೀಡಿದ್ದಾರೆಎಂದುಅಸ್ಸಾಂ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು. ನಮ್ಮರಾಷ್ಟ್ರಪತಿಅಭ್ಯರ್ಥಿದ್ರೌಪದಿ ಮುರ್ಮುಅವರಕುರಿತಾದ ಸಂದೇಶವನ್ನುಕಾರ್ಯಕರ್ತರು ತಳಮಟ್ಟದಲ್ಲಿ ಹ್ಯಾಗೆಕೊಂಡೊಯ್ಯಬೇಕು? ಮುರ್ಮುಅವರ ಸರಳತೆ ಮತ್ತು ವಿನಮ್ರತೆ ಸಂದೇಶವನ್ನುಅವರ ಹೋರಾಟಗಳ ಕಥೆಯೊಂದಿಗೆಜನರಿಗೆತಲುಪಿಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆಎನ್ನಲಾಗಿದೆ.

Translate »