ಮತ್ತೆ ಮುಖ್ಯಮಂತ್ರಿ ಕನಸು ಹೊತ್ತ ಸಿದ್ದರಾಮಯ್ಯರಿಗೆ… ಸುರಕ್ಷಿತ ಕ್ಷೇತ್ರ ತಲಾಷೆ!
News

ಮತ್ತೆ ಮುಖ್ಯಮಂತ್ರಿ ಕನಸು ಹೊತ್ತ ಸಿದ್ದರಾಮಯ್ಯರಿಗೆ… ಸುರಕ್ಷಿತ ಕ್ಷೇತ್ರ ತಲಾಷೆ!

July 6, 2022

ಬೆಂಗಳೂರು, ಜು. 5(ಕೆಎಂಶಿ)- ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಇನ್ನು ಬಾದಾಮಿಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರು ತ್ತಿಲ್ಲ. ಈಗ ಎಲ್ಲಿ ನಿಲ್ಲಬೇಕು ಎಂಬುದರ ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ.

ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿ ಸುವುದಾಗಿ ಈ ಹಿಂದೆ ಆಪ್ತರ ಬಳಿ ಹೇಳಿ ಕೊಂಡಿದ್ದರು. ಆದರೆ ಇದೀಗ ಮನಸ್ಸು ಬದಲಾ ಯಿಸಿದ್ದಾರೆ. ಜೆಡಿಎಸ್‍ನ ಜಿ.ಟಿ. ದೇವೇಗೌಡ, ಕಾಂಗ್ರೆಸ್ ಸೇರಲು ಪೂರ್ಣ ಆಸಕ್ತಿ ತೋರದಿ ರುವುದು ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜ ಯೇಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಬಹುದೆಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸುಲಭ ಗೆಲುವಿನ ಕ್ಷೇತ್ರಕ್ಕೆ ಮತ್ತೆ ಹುಡುಕಾಟ ಆರಂಭಿಸಿದ್ದಾರೆ.

ಆಪ್ತರ ಜೊತೆ ಚರ್ಚೆ ಮಾಡುವ ಸಂದರ್ಭ ದಲ್ಲಿ ಕೋಲಾರ, ಚಾಮರಾಜಪೇಟೆ, ಚಿಕ್ಕ ನಾಯಕನಹಳ್ಳಿ, ಹೆಬ್ಬಾಳ ಕ್ಷೇತ್ರಗಳ ಬಗ್ಗೆ ಚರ್ಚೆ ಯಾಗಿದೆ. ಕೋಲಾರದಲ್ಲಿ ಕಣಕ್ಕಿಳಿಯುವಂತೆ ಮಾಜಿ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಒತ್ತಾಯ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲೇ ಜಿಲ್ಲೆಯ ಪ್ರಮುಖ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಕೋಲಾರದಲ್ಲಿ ಕಣಕ್ಕಿಳಿದರೆ, ತಮ್ಮ ಸಮುದಾಯದ ಹೆಚ್ಚು ಮತಗಳು ಜೊತೆಗೆ ಅಲ್ಪಸಂಖ್ಯಾತರ ಮತಗಳು ಲಭ್ಯವಾಗ ಬಹುದು. ಮಾಜಿ ಸಚಿವ ಸೀತಾರಾಮ್ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡರೆ ಸಾಕಷ್ಟು ಸಂಖ್ಯೆಯಲ್ಲಿರುವ ಬಲಿಜ ಮತಗಳು ತಮಗೆ ದೊರೆಯಬಹು ದೆಂಬ ಲೆಕ್ಕಾಚಾರವೂ ಇದೆ. ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರೂ ಅವರನ್ನು ಪರಾಭವಗೊಳಿಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈಗಿನಿಂದಲೇ ಲೆಕ್ಕಾಚಾರ ಹಾಕಿದ್ದಾರೆ. ಕೋಲಾರದಲ್ಲಿ ನಿಂತರೆ ಜೆಡಿಎಸ್‍ನ ಸಿಎಂ ಇಬ್ರಾಹಿಂ ಅವರನ್ನು, ಬಿಜೆಪಿ ಕುರುಬ ಸಮುದಾಯಕ್ಕೆ ಸೇರಿದ ವರ್ತೂರ್ ಪ್ರಕಾಶ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಇನ್ನು ಚಿಕ್ಕನಾಯಕನಹಳ್ಳಿಯಲ್ಲಿ ತಮ್ಮ ಸಮುದಾಯದ ಮತಗಳು ಹೆಚ್ಚಿವೆ. ಅಲ್ಲಿ ಅದೇ ಸಮುದಾಯಕ್ಕೆ ಸೇರಿದ ಸುರೇಶ್ ಬಾಬು ಅವರನ್ನು ಜೆಡಿಎಸ್ ಕಣಕ್ಕಿಳಿಸಲಿದೆ.

ಸುರೇಶ್ ಬಾಬು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ನಡೆಸಿದ ಯತ್ನ ಫಲಪ್ರದವಾಗಿಲ್ಲ. ಇನ್ನು ಹೆಬ್ಬಾಳ, ತಮ್ಮ ಸಮುದಾಯದ ಮತಗಳು ನಿರ್ಣಾಯಕವಾದರೂ, ಬಿಜೆಪಿ ಹಿತದಲ್ಲಿದೆ. ಇನ್ನು ಚಾಮರಾಜಪೇಟೆಯಲ್ಲಿ ಕಣಕ್ಕಿಳಿದರೆ, ಗೆಲುವು ನಿಶ್ಚಿತ. ಆದರೆ ಅಲ್ಪಸಂಖ್ಯಾತರ ಕ್ಷೇತ್ರವನ್ನು ಕಸಿದುಕೊಂಡರು ಎಂಬ ಆರೋಪ ಹೂರಬೇಕಾ ಗುತ್ತದೆ. ಈ ಮಧ್ಯೆ ಆ ಕ್ಷೇತ್ರದಲ್ಲಿ ಈದ್ಗಾ ಮೈದಾನದ ವಿವಾದ ಆರಂಭವಾಗಿದೆ. ಇನ್ನು ಜಮೀರ್ ಅವರಿಗೆ ಕೇಂದ್ರದ ತನಿಖಾ ತಂಡಗಳು ಬೆನ್ನು ಬಿದ್ದಿವೆ. ಸುರಕ್ಷಿತ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಂಡಿರುವ ಸಿದ್ದರಾಮಯ್ಯ ಕೋಲಾರ, ಚಿಕ್ಕಬಳ್ಳಾ ಪುರ ಜಿಲ್ಲೆಯಲ್ಲೇ ಕಣಕ್ಕಿಳಿಯುವ ಬಗ್ಗೆ ಆ ಮುಖಂಡರ ಜೊತೆ ಎರಡು ದಿನದಿಂದ ಸರಣಿ ಸಭೆಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎನ್ನುವ ಸಿದ್ದರಾಮಯ್ಯನವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರವಿಲ್ಲದೆ, ಇನ್ನು ಹುಡುಕಾಟ ನಡೆಸುತ್ತಿದ್ದಾರೆ. ಈ ಸಲ ತಮ್ಮನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಮಾತ್ರವಲ್ಲದೆ ಸ್ವಪಕ್ಷ ಕಾಂಗ್ರೆಸ್‍ನ ಹಲವು ನಾಯಕರೂ ಸೋಲಿಸಲು ಬಯಸಿದ್ದಾರೆ ಎಂಬ ಮಾಹಿತಿ ಖುದ್ದು ಸಿದ್ಧರಾಮಯ್ಯ ಅವರಿಗೆ ತಲುಪಿದ್ದು ಈ ಕಾರಣಕ್ಕಾಗಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಎಚ್ಚರಿಕೆಯಿಂದ ಅವಲೋಕನ ಮಾಡುತ್ತಿದ್ದಾರೆ.

Translate »