ವಿದ್ಯುತ್ ದರ ಯೂನಿಟ್‍ಗೆ 19ರಿಂದ 31 ಪೈಸೆ ಏರಿಕೆ
News

ವಿದ್ಯುತ್ ದರ ಯೂನಿಟ್‍ಗೆ 19ರಿಂದ 31 ಪೈಸೆ ಏರಿಕೆ

July 2, 2022

ಬೆಂಗಳೂರು, ಜು.1- ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಸರ್ಕಾರ ಜನತೆಗೆ ಕರೆಂಟ್ ಶಾಕ್ ನೀಡಿದೆ. ದರ ಏರಿಕೆ ನಿಯಮ ಇಂದಿನಿಂದಲೇ ಜಾರಿಯಾಗಿದೆ.

ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19 ರಿಂದ 31 ಪೈಸೆ ಹೆಚ್ಚಳ ಮಾಡಲಾಗಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಇನ್ಮುಂದೆ 19 ರಿಂದ 31 ರೂ. ಪಾವತಿಸಬೇಕು. ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಸ್ಕಾಂ ಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಎಸ್ಕಾಂಗಳ ಮನವಿ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ದರ ಏರಿಕೆ ಮಾಡಿದೆ. ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಳ, ಹೊರೆ ಕಡಿಮೆಯಾದ ಕೂಡಲೇ ಬೆಲೆಗಳು ವಾಪಸ್ ಯಥಾಸ್ಥಿತಿಗೆ ಬರುವ ಸಾಧ್ಯತೆ, ಕಲ್ಲಿದ್ದಲು ಅಭಾವ ಹಾಗೂ ದರ ಕೂಡ ಹೆಚ್ಚಳ, ಆರ್ಥಿಕವಾಗಿ ನಷ್ಟದಲ್ಲಿರುವ ಎಸ್ಕಾಂಗಳು ತಾತ್ಕಾಲಿಕ ಮಟ್ಟಕ್ಕೆ ದರ ಹೆಚ್ಚು ಮಾಡಿರುವುದು ವಿದ್ಯುತ್ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

Translate »