ವಿಧಾನಸಭೆ ಚುನಾವಣೆಗೆ ಮುನ್ನ ಮೇಕೆದಾಟು ಯೋಜನೆ ಪ್ರಾರಂಭಶತಸಿದ್ಧ
News

ವಿಧಾನಸಭೆ ಚುನಾವಣೆಗೆ ಮುನ್ನ ಮೇಕೆದಾಟು ಯೋಜನೆ ಪ್ರಾರಂಭಶತಸಿದ್ಧ

July 1, 2022

ಬೆಂಗಳೂರು, ಜೂ.30(ಕೆ.ಎಂ.ಶಿ.)-ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಮೇಕೆದಾಟು ಕುಡಿ ಯುವ ನೀರಿನ ಯೋಜನೆ ಅನುಷ್ಠಾನ ಗೊಳ್ಳಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಪರೋಕ್ಷ ಸಹಕಾರ ನೀಡುತ್ತಿದೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆಗೆ ಕೇಂದ್ರ ಬಲ ತುಂಬುತ್ತಿದೆ. ಈ ಹಿಂದೆ ಎಂ.ಬಿ.ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಹಾಗೂ ಜಯಚಂದ್ರ ಅವರು ಜಲ ಸಂಪನ್ಮೂಲ ಮತ್ತು ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಸಮಾನಾಂತರವಾಗಿ ಮೇಕೆದಾಟು ಸಮೀಪ ಅಣೆಕಟ್ಟು ನಿರ್ಮಿಸಲು ವಿಸ್ತೃತಾ ಯೋಜನಾ ವರದಿ ಸಿದ್ಧಪಡಿಸಿದ್ದಲ್ಲದೆ, ಸಂಪುಟದ ಒಪ್ಪಿಗೆಯೂ ದೊರೆತಿತ್ತು. ಕೇಂದ್ರ ಜಲಸಂಪನ್ಮೂಲ ಇಲಾಖೆ ತಾತ್ವಿಕ ಅನುಮೋದನೆ ನೀಡಿದ್ದಲ್ಲದೆ, ಕೇಂದ್ರ ಜಲ ಆಯೋಗ ಹಾಗೂ ಪರಿಸರ ಇಲಾಖೆ ಅನುಮತಿ ಪಡೆಯಲು ಸೂಚಿಸಿತ್ತು. ರಾಜ್ಯ ಸರ್ಕಾರ ವರದಿ ಸಲ್ಲಿಸಿದ ನಂತರ ಸಾಕಷ್ಟು ಸಭೆಗಳು ನಡೆದಿದ್ದರೂ ರಾಜ್ಯ ಸರ್ಕಾರದ ವಿಸ್ತೃತ ಯೋಜನೆ ಚರ್ಚೆಗೆ ಬಂದಿರಲಿಲ್ಲ. ಈ ಮಧ್ಯೆ ತಮಿಳುನಾಡು ಸರ್ಕಾರ ಯೋಜನೆಗೆ ಕ್ಯಾತೆ ತೆಗೆದಿದ್ದಲ್ಲದೆ, ಕಾನೂನು ಹೋರಾಟ ಒಂದು ಕಡೆ ನಡೆಸಿದರೆ, ಮತ್ತೊಂದೆಡೆ ವಿಸ್ತೃತ ಯೋಜನೆಗೆ ಅನುಮತಿ ನೀಡಬಾರದೆಂದು ಸಿಡಬ್ಲ್ಯೂಸಿಗೆ ಪತ್ರ ಬರೆದಿತ್ತು. ಜತೆಗೆ ಕೇಂದ್ರದ ಮೇಲೆ ರಾಜಕೀಯ ಒತ್ತಡ ಹೇರಿತ್ತು. ಒತ್ತಡ ಮತ್ತು ಕಾನೂನು ಹೋರಾಟದ ನಡುವೆಯೂ ಯೋಜನೆಗೆ ಮಂಜೂರಾತಿ ನೀಡಬೇಕೇ ಅಥವಾ ಬೇಡವೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ6 ಮತ್ತು 7 ರಂದು ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನೀಡಿರುವ ವಿಸ್ತೃತ ಯೋಜನೆ ಕುರಿತಂತೆ ಚರ್ಚೆಗೆ ಕೈಗೆತ್ತಿಕೊಳ್ಳಲಿದೆ. ಸಭೆ ನಡೆಯುತ್ತಿರುವುದನ್ನು ಜಲಸಂಪ£್ಮೂಲ ಸಚಿವ ಗೋವಿಂದ ಕಾರ್ಜೋಳ ಸುದ್ದಿಗಾರರಿಗೆ ಖಚಿತಪಡಿಸಿದ್ದಾರೆ. ವಿಸ್ತೃತ ಯೋಜನೆ ಸಭೆಯ ಮುಂದೆ ಬಾರದ ರೀತಿಯಲ್ಲೇ ತಮಿಳುನಾಡು ಸರ್ಕಾರ ನೋಡಿಕೊಳ್ಳುತ್ತಿತ್ತು.

ತಮಿಳುನಾಡು ರಾಜಕೀಯವಾಗಿ ಈ ಯೋಜನೆ ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ನೀರನ್ನು ನಮ್ಮ ನೆಲದಲ್ಲಿ ಬಳಕೆ ಮಾಡಿಕೊಳ್ಳಲು ಯಾರ ಅನುಮತಿಯೂ ಬೇಕಿಲ್ಲ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಏಕೈಕ ಉದ್ದೇಶದಿಂದ ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿದುಹೋಗುವ ನೀರನ್ನು ತಡೆಯಲು ಅಣೆಕಟ್ಟು ನಿರ್ಮಿಸುತ್ತಿದ್ದೇವೆ. ಈ ಯೋಜನೆ ಎರಡೂ ರಾಜ್ಯಗಳಿಗೂ ಉಪಯುಕ್ತ. ತಮಿಳುನಾಡಿಗೆ 177 ಟಿಎಂಸಿ ನೀಡಿದ ನಂತರವೂ ಸಾಕಷ್ಟು ಬಾರಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿತ್ತು. ಅಷ್ಟೇ ಅಲ್ಲ, ಕೆಲವೊಮ್ಮೆ ನೂರಾರು ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗುತ್ತಿತ್ತು. ಮುಂದೆ ಹೆಚ್ಚುವರಿ ನೀರು ನಮಗೆ ಲಭ್ಯವಾಗುವುದಿಲ್ಲ ಎಂಬ ಕಾರಣಕ್ಕೆ ತಮಿಳುನಾಡು ಯೋಜನೆಗೆ ಅಪಸ್ವರ ಎತ್ತುತ್ತಿದೆ ಎಂದರು. ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ತಮಿಳುನಾಡಿಗೆ ನಿಗದಿಯಾದ ನೀರು ಹರಿದು ಹೋದ ಮೇಲೆ ಕರ್ನಾಟಕ ತನ್ನ ಪಾಲಿನ ನೀರನ್ನು ಹೇಗಾದರೂ ಬಳಸಿಕೊಳ್ಳಬಹುದು ಎಂದು ಕಾರ್ಜೋಳ ತಿಳಿಸಿದರು.

ಎಲ್ಲ ಕೋನಗಳಿಂದಲೂ ನಮ್ಮ ವಿಸ್ತೃತ ಯೋಜನೆಗೆ ಅನುಮತಿ ದೊರೆಯಲೇಬೇಕು. ದೊರೆತೇ ತೀರುತ್ತದೆ. ನಾವು ಕೆಲವೇ ತಿಂಗಳುಗಳಲ್ಲೇ ಯೋಜನೆ ಕೈಗೆತ್ತಿಕೊಳ್ಳುತ್ತೇವೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

Translate »