ನಾಯಕತ್ವಕ್ಕಾಗಿಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ
News

ನಾಯಕತ್ವಕ್ಕಾಗಿಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ

June 29, 2022

ಬೆಂಗಳೂರು,ಜೂ.28(ಕೆಎಂಶಿ)-ನಾಯಕತ್ವದ ಪೈಪೆÇೀಟಿಗೆ ಇಳಿದಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮುಖಂಡನಾಗಿ ಪಕ್ಷದಲ್ಲಿ ನಾಯಕತ್ವ ಗಿಟ್ಟಿಸಿಕೊಳ್ಳಲು ಶಿವಕುಮಾರ್ ತಮ್ಮ ಸಮಾಜದ ಬೃಹತ್ ಸಮಾವೇಶ ವನ್ನು ನಗರದ ಅರಮನೆ ಆವರಣದಲ್ಲಿ ನಡೆಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ವಜಾತಿ ಕುರುಬ ಸಮಾಜ ದಾವಣಗೆರೆಯಲ್ಲಿ ಆಗಸ್ಟ್ ಮೊದಲ ವಾರ ತಮ್ಮ ಜನಾಂಗದ ಸಮಾವೇಶ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಬೆಂಬಲಿಗರು ಅಂದು ಐದು ಲಕ್ಷ ತಮ್ಮ ಸಮಾಜದ ಜನರನ್ನು ಸೇರಿಸಿ ಸಮಾವೇಶ ಮಾಡುತ್ತಿ ದ್ದರೆ, ಇದರ ಸುಳಿವರಿತ ಶಿವಕುಮಾರ್ ಬೆಂಬಲಿಗರು, ಅರಮನೆಯ ಆವರಣದಲ್ಲಿ ಹತ್ತು ಲಕ್ಷ ಜನರನ್ನು ಸೇರಿಸಿ ಬೃಹತ್ ಒಕ್ಕಲಿಗರ ಸಮಾವೇಶ ಮಾಡುತ್ತಿದ್ದಾರೆ. ಇತ್ತೀಚೆಗೆ ನಗರದ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಮುಖಂ ಡರ ಸಭೆಯಲ್ಲಿ ಕವಲು ದಾರಿ ಹಿಡಿದಿದ್ದ ಉಭಯ ನಾಯಕರನ್ನು ಒಂದು ಮಾಡಲಾಗಿದೆ ಎಂದು ಹೇಳಲಾಗಿತ್ತು.

ಮುಖ್ಯಮಂತ್ರಿ ಗಾದಿಗೆ ಪೈಪೆÇೀಟಿ ನಡೆಸಿರುವ ಶಿವ ಕುಮಾರ್ ಮತ್ತು ಸಿದ್ದರಾಮಯ್ಯ, ನಾಯಕತ್ವದ ತಮ್ಮ ಪಟ್ಟು ಬಿಡದೆ ಪ್ರತ್ಯೇಕ ಸಮಾವೇಶ ನಡೆಸಿ ತಮ್ಮ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಭವಿಷ್ಯದ ನಾಯಕತ್ವ ವನ್ನು ಕೈ ಬಿಡಲು ಸಿದ್ದರಾಮಯ್ಯ ಅವರೂ ತಯಾರಿಲ್ಲ, ಹಾಗೆಯೇ ಪಕ್ಷ ಸಂಘಟಿಸುವ ಜವಾಬ್ದಾರಿ ಹೊತ್ತ ತಾವು ನಾಯಕತ್ವದ ಸ್ಪರ್ಧೆಯಿಂದ ಹಿಂದೆ ಸರಿಯುವುದು ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್ ತೀರ್ಮಾನಿಸಿದ್ದಾರೆ.
ಇದರ ಭಾಗವಾಗಿಯೇ ಉಭಯ ನಾಯಕರು ಇದೀಗ ಭಾರೀ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಅಂದ ಹಾಗೆ ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿ ಆಗಬೇಕು, ಇದಕ್ಕಾಗಿ ತಮ್ಮ ಬೆಂಬಲಿಗರಿಗೇ ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಸಿಗುವಂತಾಗ ಬೇಕು ಎಂದು ಶಿವಕುಮಾರ ಮತ್ತು ಸಿದ್ದರಾಮಯ್ಯ ಕಸರತ್ತು ಆರಂಭಿಸಿರುವುದು ರಹಸ್ಯವೇನಲ್ಲ.

ಇದರ ಪರಿಣಾಮವಾಗಿಯೇ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆ ಗಳಲ್ಲಿ ಉಭಯ ನಾಯಕರ ಬೆಂಬಲಿಗರು ಟಿಕೆಟ್‍ಗಾಗಿ ಪೈಪೆÇೀಟಿ ಆರಂಭಿಸಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಸಿದ್ಧ ರಾಮಯ್ಯ ಮತ್ತು ಶಿವಕುಮಾರ್ ಬೆಂಬಲಿಗರು ಕಚ್ಚಾಟ ನಡೆಸುತ್ತಿದ್ದಾರೆ. ಕ್ಷೇತ್ರದಿಂದ ನೀವೇ ಅಭ್ಯರ್ಥಿಯಾಗು ತ್ತೀರಿ. ಈಗಿನಿಂದಲೇ ತಯಾರಿ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಸೂಚನೆ ನೀಡಿದ್ದರೆ, ಡಿಕೆಶಿ ಕೂಡಾ ತಮ್ಮ ಬೆಂಬಲಿಗರಿಗೆ ಇಂತಹುದೇ ಸೂಚನೆ ನೀಡಿ ಹೋರಾಡಲು ಅಣಿಗೊಳಿಸಿದ್ದಾರೆ.

ಈ ಇಬ್ಬರು ನಾಯಕರ ಸದರಿ ಕಸರತ್ತಿನಿಂದ ಬಹು ತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಬಣ ರಾಜ ಕೀಯ ಆರಂಭವಾಗಿದ್ದು, ಈ ಹಿಂದೆ ಸೋತ ವಿಧಾನಸಭಾ ಕ್ಷೇತ್ರಗಳಲ್ಲದೆ, ಹಲವು ಹಾಲಿ ಶಾಸಕರ ಕ್ಷೇತ್ರಗಳಲ್ಲೂ ಇಂತಹ ಪೈಪೆÇೀಟಿ ಶುರುವಾಗಿದೆ. ಅದೇ ರೀತಿ, ತಾವು ಹೇಳಿದಂತೆ ನಡೆದುಕೊಂಡರೆ ನಿಮಗೆ ಟಿಕೆಟ್ ಎಂದು ಉಭಯ ನಾಯಕರು ಹೇಳುತ್ತಿದ್ದು,ಇಬ್ಬರ ಪೈಕಿ ಒಬ್ಬರ ಗುಂಪಿನಲ್ಲಿ ಕಾಣಿಸಿಕೊಳ್ಳದೆ ಹೋದರೆ ಅಂತಹವರನ್ನು ದೂರವಿಡುವ ಕೆಲಸ ಇಬ್ಬರೂ ನಾಯಕರಿಂದ ಆಗುತ್ತಿದೆ. ಉನ್ನತ ಮೂಲಗಳ ಪ್ರಕಾರ, ನಾಯಕತ್ವದ ಪೈಪೆÇೀಟಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ನಡುವೆ ತಳ ಮಟ್ಟದಿಂದ ಹಿಡಿದು, ದಿಲ್ಲಿ ಮಟ್ಟದವರೆಗೆ ರಾಜೀ ಸಂಧಾನದ ಪ್ರಯತ್ನಗಳು ನಡೆದಿವೆಯಾದರೂ ಫಲಿತಾಂಶ ಮಾತ್ರ ಶೂನ್ಯ. ಇಂತಹ ಕಾಲಘಟ್ಟದಲ್ಲೇ ಇದೀಗ ಉಭಯ ನಾಯಕರು ಲಕ್ಷಾಂತರ ಮಂದಿಯನ್ನು ಸೇರಿಸಿ ಸಮಾವೇಶ ನಡೆಸುವ ಮೂಲಕ ತಮ್ಮ ತಮ್ಮ ಬಲ ತೋರಿಸಲು ಸಜ್ಜಾಗಿದ್ದು,ಈ ಬೆಳವಣಿಗೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

Translate »