ವಾರಣಾಸಿ,ಡಿ.12-ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ (ಡಿ.13) ವಾರಣಾಸಿಯಲ್ಲಿ ‘ಕಾಶಿ ವಿಶ್ವ ನಾಥ ಕಾರಿಡಾರ್’ ಅನ್ನು ಉದ್ಘಾಟಿ ಸಲಿದ್ದಾರೆ. ಇಡೀ ಕಾರ್ಯಕ್ರಮವನ್ನು ದೇಶಾದ್ಯಂತ ನೇರ ಪ್ರಸಾರ ಮಾಡ ಲಾಗುತ್ತದೆ. ದೇಶಾದ್ಯಂತ 2000ಕ್ಕೂ ಹೆಚ್ಚು ಸಂತರು ಮತ್ತು ಗಣ್ಯರು ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ. 800 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಧಾಮ ಯೋಜನೆ ಪೂರ್ಣ ಗೊಂಡಿದೆ. ಈ ಕಾರಿಡಾರ್ ಯೋಜನೆ ಭಕ್ತಾದಿಗಳ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ ಹಾಗೂ ದೇವಾಲಯ ಮತ್ತು ಗಂಗಾ ನದಿಯ ನಡುವೆ ನೇರ ಸಂಪರ್ಕ…
ಕೃಷಿ ಕಾಯ್ದೆ ರದ್ದು ಹಿನ್ನೆಲೆ: ಒಂದೂವರೆ ವರ್ಷದ ಹೋರಾಟ ಕೈಬಿಡುತ್ತಿರುವ ರೈತರು
December 10, 2021ನವದೆಹಲಿ, ಡಿ.9- ತಮ್ಮ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗುರುವಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಘೋಷಿಸಿದೆ. ಡಿಸೆಂಬರ್ 11ರಂದು, ಶನಿವಾರ ದೆಹಲಿ ಗಡಿಯನ್ನು ಖಾಲಿ ಮಾಡುವುದಾಗಿ ಮತ್ತು ಜನವರಿ 15 ರಂದು ಮತ್ತೊಂದು ಸಭೆ ನಡೆಸುವುದಾಗಿ ರೈತರು ಹೇಳಿದ್ದಾರೆ. ಕೇಂದ್ರದ ಪರಿಷ್ಕೃತ ಪ್ರಸ್ತಾವನೆ ಬಂದ ಕೂಡಲೇ, ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ಒಕ್ಕೂಟ…
ಪ್ರಧಾನಿ ನಮನ
December 10, 2021ನವದೆಹಲಿ, ಡಿ.9-ಊಟಿ ಬಳಿ ಬುಧವಾರ ವಾಯುಸೇನೆಯ ಹೆಲಿ ಕಾಪ್ಟರ್ ಪತನಗೊಂಡು ದುರ್ಮರಣ ಹೊಂದಿದ ಸೇನಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ 11 ಸೇನಾಧಿಕಾರಿಗಳ ಪಾರ್ಥಿವ ಶರೀರಗಳಿಗೆ ದೆಹಲಿಯ ಪಾಲಂ ವಾಯು ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಿಮ ಗೌರವ ಸಲ್ಲಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮೂರೂ ಸೇನಾ ಪಡೆಗಳ ಮುಖ್ಯಸ್ಥರು ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ…
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಲಾಕ್‍ಡೌನ್, ನೈಟ್ ಕಫ್ರ್ಯೂ ಅನಗತ್ಯ
December 10, 2021ಬೆಂಗಳೂರು, ಡಿ.9(ಕೆಎಂಶಿ)-ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಇಂತಹ ಸಂದರ್ಭದಲ್ಲಿ ಲಾಕ್‍ಡೌನ್ ಆಗಲಿ, ರಾತ್ರಿ ವೇಳೆ ಕಫ್ರ್ಯೂ ವಿಧಿಸುವ ಅಗತ್ಯವಿಲ್ಲ ಎಂದು ತಜ್ಞರು ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ. ಒಮಿಕ್ರಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲು ಸರ್ಕಾರ ಮುಂದಾ ಗಿತ್ತು. ಆದರೆ ಅಂತಹ ಪರಿಸ್ಥಿತಿ ಸದ್ಯಕ್ಕಿಲ್ಲ. ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹಾಕದೇ ಇರಲು ನಿರ್ಧ ರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆ ಯಲ್ಲಿ ತಜ್ಞರು ಕೋವಿಡ್ ನಿಯ ಮಾವಳಿಗಳಿಗೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆ ನೀಡಿರುವುದಲ್ಲದೆ,…
ಊಟಿ ಬಳಿ ವಾಯುಪಡೆ ಹೆಲಿಕಾಪ್ಟರ್ ಪತನ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ
December 9, 2021ನೀಲಗಿರಿ, ಡಿ.8-ವಾಯುಸೇನೆ ಹೆಲಿ ಕಾಪ್ಟರ್ ಪತನಗೊಂಡು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ದುರ್ಮ ರಣಕ್ಕೀಡಾದ ಘಟನೆ ನೀಲಗಿರಿ ಜಿಲ್ಲೆಯ ಕೂನೂರು ಸಮೀಪ ಕಾಟೇರಿ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಈ ಹೆಲಿಕಾಪ್ಟರ್‍ನಲ್ಲಿ 14 ಮಂದಿ ಪ್ರಯಾಣಿಸು ತ್ತಿದ್ದು, ದುರಂತದಲ್ಲಿ ಪೈಲಟ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿ ದಿದ್ದು, ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ವೆಲ್ಲಿಂಗ್ಟನ್‍ನ ಸೇನಾ ಆಸ್ಪತ್ರೆಯಲ್ಲಿ ಚಿಂತಾ…
ನೀವಾಗೇ ಬದಲಾಗಿ ಇಲ್ಲವೇ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿ
December 8, 2021ನವದೆಹಲಿ,ಡಿ.7-ಸಂಸತ್‍ನಲ್ಲಿ ಬಿಜೆಪಿ ಸಂಸದರ ಬದ್ಧತೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ. ಹಾಜರಾತಿಯ ವಿಷಯದಲ್ಲಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದು, ಸಂಸದರು ತಮ್ಮನ್ನು ಬದಲಾ ಯಿಸಿಕೊಳ್ಳದೇ ಇದ್ದಲ್ಲಿ ಸಮ ಯದ ಜೊತೆ ಬದಲಾವಣೆ ಎದುರಿಸಲು ಸಿದ್ಧರಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಯಲ್ಲಿ ಮೋದಿ ಸಂಸದರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಸಭೆಯ ವಿವರಗಳನ್ನು ಹಂಚಿಕೊಂಡಿರುವ ಸಂಸ ದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್…
ಯಾರೊಂದಿಗೂ ಮೈತ್ರಿ ಇಲ್ಲ
December 8, 2021ಬೆಂಗಳೂರು,ಡಿ.7(ಕೆಎಂಶಿ)-ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವ ಪಕ್ಷದ ಜತೆಯೂ ಜೆಡಿಎಸ್ ಮೈತ್ರಿ ಇಲ್ಲ ಎಂದು ಪಕ್ಷದ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಾವು ಕಣಕ್ಕಿಳಿದಿರುವೆಡೆ ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ. ನಾವು ಸ್ಪರ್ಧೆ ಮಾಡದ ಕ್ಷೇತ್ರ ಗಳಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಇಲ್ಲವೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿಕೊಳ್ಳಬಹುದು. 2023ರ ವಿಧಾನಸಭೆ ಚುನಾವಣೆಯಲ್ಲಿ ನಿಗದಿತ ಗುರಿ ತಲುಪಲು ಅನುಕೂಲ ಆಗುವಂತೆ ಪಕ್ಷವು ಸ್ಪರ್ಧೆ ಮಾಡದಿರುವ 19…
ದೇಶದಲ್ಲಿ 21 ಒಮಿಕ್ರಾನ್ ಪತ್ತೆ
December 6, 2021ನವದೆಹಲಿ,ಡಿ. 5-ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದ್ದು, ಭಾನು ವಾರ ಮಹಾರಾಷ್ಟ್ರದಲ್ಲಿ 7 ಮತ್ತು ರಾಜಸ್ತಾನ್‍ನಲ್ಲಿ 9 ಮಂದಿ ಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಭಾರತದಲ್ಲಿ ಒಟ್ಟು 21 ಮಂದಿಗೆ ಒಮಿಕ್ರಾನ್ ತಗುಲಿದಂತಾಗಿದೆ. ನಿನ್ನೆಯಷ್ಟೇ ದಕ್ಷಿಣ ಆಫ್ರಿಕಾದಿಂದ ದುಬೈ ಮತ್ತು ದೆಹಲಿ ಮಾರ್ಗವಾಗಿ ಮುಂಬೈಗೆ ಆಗಮಿಸಿದ್ದ ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಪ್ರದೇಶದ ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡ ‘ಒಮಿ ಕ್ರಾನ್’ ಸೋಂಕು ಇಂದು ಪುಣೆ ಮೂಲದ ಏಳು ಮಂದಿಯಲ್ಲಿ ಕಾಣಿಸಿಕೊಂಡಿದೆ. ರಾಜಸ್ತಾನದ ಜೈಪುರದಲ್ಲಿ ಒಂದೇ…
ಹಿರಿಯ ನಟ ಶಿವರಾಂ ಇನ್ನಿಲ್ಲ
December 5, 2021ಬೆಂಗಳೂರು, ಡಿ.4-ಕನ್ನಡ ಚಿತ್ರ ರಂಗದ ಹಿರಿಯ ನಟ ಶಿವರಾಂ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾದರು. ಕನ್ನಡ ಚಿತ್ರರಂಗ ಹಿರಿಯ ನಟರೊಬ್ಬರನ್ನು ಕಳೆದುಕೊಂಡಿದೆ. ಕನ್ನಡದ ಹಲವಾರು ಚಿತ್ರಗಳಲ್ಲಿ ಹಾಸ್ಯ ನಟರಾಗಿ ನಟಿಸಿದ್ದ ಶಿವರಾಂ, ಮಹಾ ದೈವಭಕ್ತರಾಗಿದ್ದು, ಅಯ್ಯಪ್ಪ ಸ್ವಾಮಿ ಆರಾಧಕರಾಗಿದ್ದರು. ತಮ್ಮ ಮನೆಯ ಟೆರೇಸ್‍ನಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದರು….
ಎರಡೂ ಡೋಸ್
December 4, 2021ರಾಜ್ಯದಲ್ಲಿ ಒಮಿಕ್ರಾನ್‍ಗೆ ಕಡಿವಾಣ ಹಾಕಲು ಸರ್ಕಾರದ ಮೊದಲ ಹಂತದ ಎಚ್ಚರಿಕಾ ಕ್ರಮ ಸಲಹಾ ಸಮಿತಿ ತಜ್ಞರೊಂದಿಗೆ ಮುಖ್ಯಮಂತ್ರಿ ಚರ್ಚೆ ನಂತರ ಹಲವು ಎಚ್ಚರಿಕಾ ಕ್ರಮದ ನಿರ್ಧಾರ ಮದುವೆಗೆ ಮತ್ತೆ 500 ಜನರ ಹಾಜರಿ ನಿರ್ಬಂಧ ಸರ್ಕಾರಿ ನೌಕರರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಸೋಂಕಿತರಿಬ್ಬರಲ್ಲಿ ಸೌಮ್ಯ ರೀತಿ ರೋಗಲಕ್ಷಣ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಕಡ್ಡಾಯ; ನೆಗೆಟಿವ್ ಬಂದರೆ ಪ್ರವೇಶ, ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು ಆಕ್ಸಿಜನ್, ಐಸಿಯು ಬೆಡ್ ಸಿದ್ಧಗೊಳಿಸಲು ತೀರ್ಮಾನ…