ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಲಾಕ್‍ಡೌನ್, ನೈಟ್ ಕಫ್ರ್ಯೂ ಅನಗತ್ಯ
News

ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಲಾಕ್‍ಡೌನ್, ನೈಟ್ ಕಫ್ರ್ಯೂ ಅನಗತ್ಯ

December 10, 2021

ಬೆಂಗಳೂರು, ಡಿ.9(ಕೆಎಂಶಿ)-ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಇಂತಹ ಸಂದರ್ಭದಲ್ಲಿ ಲಾಕ್‍ಡೌನ್ ಆಗಲಿ, ರಾತ್ರಿ ವೇಳೆ ಕಫ್ರ್ಯೂ ವಿಧಿಸುವ ಅಗತ್ಯವಿಲ್ಲ ಎಂದು ತಜ್ಞರು ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.

ಒಮಿಕ್ರಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲು ಸರ್ಕಾರ ಮುಂದಾ ಗಿತ್ತು. ಆದರೆ ಅಂತಹ ಪರಿಸ್ಥಿತಿ ಸದ್ಯಕ್ಕಿಲ್ಲ. ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹಾಕದೇ ಇರಲು ನಿರ್ಧ ರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆ ಯಲ್ಲಿ ತಜ್ಞರು ಕೋವಿಡ್ ನಿಯ ಮಾವಳಿಗಳಿಗೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆ ನೀಡಿರುವುದಲ್ಲದೆ, ಎಚ್ಚರವಿರಬೇಕು. ಆದರೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ತಜ್ಞರ ಸಲಹೆಗಳಿಗೆ ಸಚಿವರು ತಲೆದೂಗಿದ್ದಲ್ಲದೆ, ಯಾವುದೇ ಕಾರಣಕ್ಕೂ ಕಫ್ರ್ಯೂ, ಲಾಕ್‍ಡೌನ್ ವಿಧಿಸಬಾರದು ಎಂದು ಮುಖ್ಯ ಮಂತ್ರಿಯವರ ಮೇಲೆ ಒತ್ತಡ ಹೇರಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇಕಡ 62ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ಉಳಿದ ನಾಲ್ಕು ತಿಂಗಳಲ್ಲಿ ಶೇಕಡ 38ರಷ್ಟು ತೆರಿಗೆ ಸಂಗ್ರಹವಾಗಬೇಕು. ನಮ್ಮ ಗುರಿ ಯನ್ನು ಮುಟ್ಟದಿದ್ದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀೀಗಾಗಿ ಲಾಕ್‍ಡೌನ್‍ನಂತಹ ಪ್ರಸ್ತಾಪವೇ ಬೇಡ. ಇದರ ಬದಲು ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿ ಎಂದು ನೀಡಿದ ಸಚಿವರ ಸಲಹೆಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಇನ್ನೆರಡು ದಿನದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಿಯಮಾವಳಿಗಳನ್ನು ರೂಪಿಸುವಂತೆ ಕೋವಿಡ್ ತಾಂತ್ರಿಕಾ ಸಲಹಾಸಮಿತಿ ಅಧ್ಯಕ್ಷ ಸುದರ್ಶನ್ ಅವರಿಗೆ ಸಭೆಯಲ್ಲಿ ಸೂಚಿಸಿದರು. ಇದೇ ಸಂದರ್ಭದಲ್ಲಿ ತಜ್ಞರು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕು ತಹಬದಿಗೆ ಬರುತ್ತಿದೆ. ಒಮಿಕ್ರಾನ್ ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಈ ಸೋಂಕಿನಿಂದ ಪ್ರಾಣ ಭೀತಿ ಇಲ್ಲ.

ರಾಷ್ಟ್ರದಲ್ಲಿ ಈ ಸೋಂಕು ಅಂತಹ ದೊಡ್ಡ ಪ್ರಮಾಣದಲ್ಲಿ ಕಂಡಿಲ್ಲ. ಈ ಸೋಂಕನ್ನು ಬಿಂಬಿಸುವುದು ಅಗತ್ಯವಿಲ್ಲ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಶಾಲಾ ಕಾಲೇಜುಗಳನ್ನು ಮುಚ್ಚುವ ಅಗತ್ಯವಿಲ್ಲ. ರಾಜ್ಯದಲ್ಲಿ 1.5 ಕೋಟಿ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಅದರಲ್ಲಿ 139 ವಿದ್ಯಾರ್ಥಿಗಳಿಗೆ ಮಾತ್ರ ಸೋಂಕು ಬಂದಿದೆ. ಅದರಲ್ಲೂ 1 ರಿಂದ 10ನೇ ತರಗತಿ ಮಕ್ಕಳಿಗೆ ಸೋಂಕು ತಗುಲಿಲ್ಲ.

ಸೋಂಕು ತಗುಲಿದ ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ಎಲ್ಲೋ ಕಾಣಿಸಿಕೊಂಡಿ ದ್ದಕ್ಕೆ ಇಡೀ ರಾಜ್ಯದ ಶಾಲಾ-ಕಾಲೇಜುಗಳನ್ನು ಮುಚ್ಚುವುದು ಸರಿಯಲ್ಲ ಎಂದು ತಜ್ಞರು ಸ್ಪಷ್ಟವಾಗಿ ತಿಳಿಸಿದ್ದಾರೆ. ಮಕ್ಕಳ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಾದರೆ ಯಾವ ಶಾಲೆ ಇಲ್ಲವೇ ವಸತಿ ನಿಲಯಗಳಲ್ಲಿ ಮೂರು ಪ್ರಕರಣಗಳಿಗಿಂತ ಹೆಚ್ಚು ಕಂಡರೆ ಅಂತಹ ಸಂಸ್ಥೆಗಳನ್ನು ಒಂದು ವಾರಗಳ ಕಾಲ ಮುಚ್ಚಿಸಿ ಮತ್ತು ಅವುಗಳನ್ನು ಕ್ಲಸ್ಟರ್ ಎಂದು ಘೋಷಿಸಿ. ಅದು ಬಿಟ್ಟು ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಬೇಡಿ, ಮಕ್ಕಳು ಶಾಲೆಗಳನ್ನೇ ಮರೆತಿದ್ದರು. ಇದೀಗ ಮತ್ತೆ ಅವರು ಶಾಲೆಗಳಿಗೆ ಹೊಂದಿ ಕೊಂಡು ಕಲಿಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಮತ್ತು ಪೋಷಕರನ್ನು ಭಯಭೀತಿಗೊಳಿಸುವ ಅಗತ್ಯವಿಲ್ಲ. ಅಂತಹ ಪರಿಸ್ಥಿತಿ ಬಂದರೆ ನಾವೇ ತಿಳಿಸುತ್ತೇವೆ.

ಜಾತ್ರೆಗಳಿಗೆ ಅವಕಾಶ ನೀಡಬೇಡಿ, ದೇವಸ್ಥಾನಗಳಿಗೆ ಹೆಚ್ಚು ಜನ ಸೇರದಂತೆ ನಿಯಮಾವಳಿ ತನ್ನಿ, ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಗುಂಪು ಆಚರಣೆಗಳಿಗೆ ಅವಕಾಶ ಕೊಡಬೇಡಿ ಎಂದು ತಜ್ಞರು ಸ್ಪಷ್ಟವಾಗಿ ತಿಳಿಸಿದ್ದಾರೆ. ಕ್ಲಬ್, ಹೊಟೇಲ್, ರೆಸಾರ್ಟ್‍ಗಳಲ್ಲಿ ಹೊಸ ವರ್ಷ ಆಚರಣೆ ಬೇಡ, ಅವರ ಮನೆಗಳಲ್ಲೇ ಆಚರಣೆ ಮಾಡಿಕೊಳ್ಳಲಿ. ಜನ ಸೇರುವ ಕಡೆ ನಿರ್ಬಂಧ ಹೇರಿ ಎಂದು ತಜ್ಞರು ತಿಳಿಸಿದ್ದಾರೆ. ತಜ್ಞರ ಈಸಲಹೆಗಳಿಗೆ ಸ್ಪಂದಿಸಿದ ಸಂಪುಟ ನಿಯಮಾವಳಿಗಳನ್ನು ನೀವೇ ರೂಪಿಸಿ ಎಂದು ತಿಳಿಸಿದೆ.

Translate »