ನೀವಾಗೇ ಬದಲಾಗಿ ಇಲ್ಲವೇ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿ
News

ನೀವಾಗೇ ಬದಲಾಗಿ ಇಲ್ಲವೇ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿ

December 8, 2021

ನವದೆಹಲಿ,ಡಿ.7-ಸಂಸತ್‍ನಲ್ಲಿ ಬಿಜೆಪಿ ಸಂಸದರ ಬದ್ಧತೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ.
ಹಾಜರಾತಿಯ ವಿಷಯದಲ್ಲಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದು, ಸಂಸದರು ತಮ್ಮನ್ನು ಬದಲಾ ಯಿಸಿಕೊಳ್ಳದೇ ಇದ್ದಲ್ಲಿ ಸಮ ಯದ ಜೊತೆ ಬದಲಾವಣೆ ಎದುರಿಸಲು ಸಿದ್ಧರಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಯಲ್ಲಿ ಮೋದಿ ಸಂಸದರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಸಭೆಯ ವಿವರಗಳನ್ನು ಹಂಚಿಕೊಂಡಿರುವ ಸಂಸ ದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸಂಸದರು ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಸ್ಪರ್ಧೆ ಗಳನ್ನು ಆಯೋಜಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಸಂಸದರ ಹಾಜರಾತಿ ಬಗ್ಗೆಯೂ ಮೋದಿ ಸಲಹೆಗಳನ್ನು ನೀಡಿದ್ದು, ಸಂಸತ್ ಅಧಿವೇಶನದ ಕಲಾಪಗಳಲ್ಲಿ ಸಂಸದರು ತಪ್ಪದೇ ಭಾಗಿಯಾಗಬೇಕು, ಮಕ್ಕಳೂ ಸಹ ಪದೇ ಪದೆ ಹೇಳಿದರೆ ಮಾಡಿದ ತಪ್ಪನ್ನೇ ಮಾಡುವುದಿಲ್ಲ ಎಂದು ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.

ನೀವಾಗಿಯೇ ಬದಲಾಗಿ ಇಲ್ಲದೇ ಇದ್ದಲ್ಲಿ ಕಾಲದ ಜೊತೆ ಬದಲಾವಣೆ ತಾನಾ ಗಿಯೇ ಆಗಲಿದೆ ಎಂದು ಸಂಸದರಿಗೆ ಮೋದಿ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಸಂಸತ್ ಅಧಿವೇಶನಗಳಲ್ಲಿ ಬಿಜೆಪಿ ಸಂಸದರ ಕಡಿಮೆ ಹಾಜರಾತಿಯ ವಿಷಯವಾಗಿ ಮೋದಿ ಈ ಹಿಂದೆಯೂ ಹಲವು ಬಾರಿ ಎಚ್ಚರಿಸಿದ್ದರು.

Translate »