ಸುಂಟಿಕೊಪ್ಪ ಸರ್ಕಾರಿ ಶಾಲೆ ನೀರಿನ ಟ್ಯಾಂಕ್‍ಗೆ ವಿಷ ಪದಾರ್ಥ ಮಿಶ್ರಣ
ಕೊಡಗು

ಸುಂಟಿಕೊಪ್ಪ ಸರ್ಕಾರಿ ಶಾಲೆ ನೀರಿನ ಟ್ಯಾಂಕ್‍ಗೆ ವಿಷ ಪದಾರ್ಥ ಮಿಶ್ರಣ

December 8, 2021

ಸುಂಟಿಕೊಪ್ಪ,ಡಿ.7-ಕಿಡಿಗೇಡಿಗಳು ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‍ಗೆ ವಿಷ ಮಿಶ್ರಣ ಮಾಡಿದ್ದು, ಈ ನೀರನ್ನು ಶೌಚಾಲಯಕ್ಕೆ ಮಾತ್ರ ಬಳಸುತ್ತಿ ದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಕೊಡಗು ಜಿಲ್ಲೆಯ ಸುಂಟಿ ಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಗ್ರಾಮ ಪಂಚಾಯಿತಿಯ ನೀರಿನ ಟ್ಯಾಂಕಿಗೆ ವಿಷಪೂರಿತ ರಸಾಯನಿಕ ಪದಾರ್ಥಗಳನ್ನು ದುಷ್ಕರ್ಮಿ ಗಳು ಹಾಕಿದ್ದಾರೆ. ಇದರಿಂದ ಶೌಚಾಲಯಕ್ಕೆ ತೆರ ಳಿದ ವಿದ್ಯಾರ್ಥಿಗಳಿಗೆ ಕೆಟ್ಟ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ, ವಿದ್ಯಾರ್ಥಿಗಳು ವಿಚಾರ ವನ್ನು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಮುಖ್ಯ ಶಿಕ್ಷಕರು ಹಾಗೂ ಇತರೆ ಶಿಕ್ಷಕರು ಶೌಚಾಲಯಕ್ಕೆ ತೆರಳಿ ಪರಿಶೀಲಿಸಿದಾಗ ದುರ್ನಾತ ಬೀರುತ್ತಿರುವುದು ಕಂಡು ಬಂದಿದೆ. ಶಿಕ್ಷಕರೊಬ್ಬರು ಟ್ಯಾಂಕ್ ಬಳಿ ಪರಿಶೀಲಿಸಿದಾಗ ನೀರಿನ ಟ್ಯಾಂಕ್‍ನ ಮುಚ್ಚಳ ತೆರೆದು ಕೆಳಭಾಗದಲ್ಲಿ ಇರಿಸಿರು ವುದು ಹಾಗೂ ನೀರಿನಲ್ಲಿ ರಾಸಾ ಯನಿಕ ಮಿಶ್ರಣ ಮಾಡಿರುವುದು ಕಂಡು ಬಂದಿದೆ. ಕೂಡಲೇ ಮುಖ್ಯ ಶಿಕ್ಷಕರು ವಿಚಾರವನ್ನು ಗ್ರಾಮ ಪಂಚಾಯಿತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರೋಗ್ಯ ಇಲಾಖೆಗೆ ದೂರವಾಣಿ ಮುಖಾಂತರ ದೂರು ಸಲ್ಲಿಸಿದ್ದಾರೆ. ಸಮಸ್ಯೆ ಗಂಭೀರತೆಯನ್ನು ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಸುಂಟಿಕೊಪ್ಪ ಗ್ರಾಪಂ ಅಧ್ಯಕ್ಷೆ ಶಿವಮ್ಮ, ಪಿಡಿಓ ವೇಣುಗೋಪಾಲ್, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿ ಶೀಲಿಸಿದರು. ಟ್ಯಾಂಕಿನ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಪ್ರಯೋ ಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಯಿತು.

ತಪ್ಪಿದ ಭಾರೀ ಅನಾಹುತ: ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥ ಮಿಕ ಶಾಲೆಯಲ್ಲಿ 185 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಂಟಿಕೊಪ್ಪ ಗ್ರೇಡ್- 1 ಗ್ರಾಮ ಪಂಚಾಯಿತಿ ನೀರಿನ ಓವರ್ ಹೆಡ್ ಟ್ಯಾಂಕ್ ಹಾಗೂ 2ನೇ ವಿಭಾಗಕ್ಕೆ ನೀರು ವಿತರಿಸುವ ಟ್ಯಾಂಕ್ ಇಲ್ಲೇ ಕಾರ್ಯಾಚರಿಸುತ್ತಿದೆ. ಶಾಲೆಯ ಅಕ್ಷರ ದಾಸೋಹವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಈ ನೀರಿನ ಟ್ಯಾಂಕ್ ಬಳಸಲಾಗುತ್ತದೆ. ಈ ನೀರಿನ ಟ್ಯಾಂಕ್‍ಗೆ ವಿಷ ಬೆರೆಸಿದರೆ ಭಾರೀ ಅನಾಹುತವೇ ಆಗುತ್ತಿತ್ತು. ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಇಂತಹ ಅನಾಹುತ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗಾಂಜಾ ವ್ಯಸನಿಗಳು: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ ಮೈದಾನ ದಲ್ಲಿ ನಾಡಕಚೇರಿಯ ಹಳೆಯ ಕಟ್ಟಡ ಹಿಂಭಾಗ, ಮಾರುಕಟ್ಟೆ ಆವರಣದಲ್ಲಿ ಗಾಂಜಾ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ. ಈ ಸ್ಥಳಗಳು ಗಾಂಜಾ ವ್ಯಸನಿಗಳ ಪ್ರಮುಖ ತಾಣವಾಗಿದೆ. ಈ ಹಿಂದೆ ಶಾಲಾ ಕೊಠಡಿಯಲ್ಲಿ ಇರಿಸಿದ್ದ ಮಕ್ಕಳ ಪುಸ್ತಕಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಧ್ವಂಸಗೊಳಿಸಿದ ಘಟನೆಯು ನಡೆದಿದೆ. ಈ ಬಗ್ಗೆ ಪೊಲೀಸರು ಜಾಣ ಮೌನ ವಹಿಸಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

Translate »