News

ಚಿಕ್ಕವರೆಂಬ ಕಾರಣಕ್ಕೆ ಗಲ್ಲು  ಶಿಕ್ಷೆ ವಿಧಿಸಲು ಆಗುವುದಿಲ್ಲ
News

ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗುವುದಿಲ್ಲ

November 10, 2021

ನವದೆಹಲಿ, ನ. 9- ಕರ್ನಾಟಕದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಸಂತ್ರಸ್ತರು ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ ರೇಪ್ ಮತ್ತು ಮರ್ಡರ್ ಅಪರಾಧಿಗೆ ಶಿಕ್ಷೆ ಪರಿವರ್ತಿಸಿದೆ. ಮರಣದಂಡನೆಯನ್ನು ಜೀವಾವಧಿ ಯಾಗಿ ಪರಿವರ್ತಿಸಿದೆ. ಈರಪ್ಪ ಮುರಗಣ್ಣನವರ್ ಪ್ರಕರಣದಲ್ಲಿ `ಸುಪ್ರೀಂ’ ಈ ಆದೇಶ ನೀಡಿದೆ. ಖಾನಾಪುರದಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧಿಸಿ ಈ ಆದೇಶ ನೀಡಲಾಗಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಅಪರಾಧಿಗೆ ವಿಚಾರಣಾ…

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ  10 ಕೋಟಿ ಮಂಜೂರು
News

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಮಂಜೂರು

November 10, 2021

ಬೆಂಗಳೂರು, ನ. 9(ಕೆಎಂಶಿ)- ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಅಖಿಲ ಗೋವಾ ಕನ್ನಡ ಮಹಾ ಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿ ಈ ಭರವಸೆ ನೀಡಿದರು. ಗೋವಾ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಬಹುತೇಕ ಜನರು ನೆಲೆಸಿದ್ದಾರೆ, ಅವರು ಹೊರನಾಡು ಗೋವಾದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ, ಕನ್ನಡ ಸಂಸ್ಕೃತಿಯನ್ನು ಕಾಪಾಡುತ್ತಿದ್ದಾರೆ. ಅಲ್ಲಿನ ಕನ್ನಡಿಗರಿಗೆ ಸಾಂಸ್ಕøತಿಕ ಚಟುವಟಿಕೆ ನಡೆಸಲು…

ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯಸ್ಮರಣೆ
News

ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯಸ್ಮರಣೆ

November 9, 2021

ಬೆಂಗಳೂರು, ನ. 8- ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ನನ್ನಗಲಿ 11 ದಿನ ಕಳೆದಿವೆ. ಇಂದು ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯ ನಡೆಯಿತು. ಭಾನುವಾರ ರಾತ್ರಿಯಿಂದಲೇ ಪುಣ್ಯಸ್ಮರಣೆ ಕಾರ್ಯಕ್ಕೆ ಸಕಲ ಸಿದ್ಧತೆಗಳು ಆರಂಭ ವಾಗಿತ್ತು. ಇಂದು ಬೆಳಗ್ಗೆ ಸದಾಶಿವ ನಗರದಲ್ಲಿರುವ ಪುನೀತ್ ರಾಜ್‍ಕುಮಾರ್ ನಿವಾಸದಲ್ಲಿ ಸಂಪ್ರದಾಯದ ಪ್ರಕಾರ ಪೂಜಾ ಕಾರ್ಯಗಳು ನೆರವೇರಿದವು. ಬೆಳಗ್ಗೆ 10 ಗಂಟೆ ಸುಮಾರಿಗೆ ಸಮಾಧಿ ಸ್ಥಳಕ್ಕೆ ಆಗಮಿಸಿದ ಪುನೀತ್ ಪತ್ನಿ ಅಶ್ವಿನಿ, ಪುತ್ರಿ ಯರಾದ ಧೃತಿ, ವಂದಿತಾ, ಸಹೋದರ ರಾದ ಶಿವರಾಜ್‍ಕುಮಾರ್, ರಾಘ…

ಇನ್ನು ಲೋಡ್ ಮರಳು  10ರಿಂದ 15 ಸಾವಿರಕ್ಕೆ ಲಭ್ಯ
News

ಇನ್ನು ಲೋಡ್ ಮರಳು 10ರಿಂದ 15 ಸಾವಿರಕ್ಕೆ ಲಭ್ಯ

November 9, 2021

ಬೆಂಗಳೂರು,ನ.8(ಕೆಎಂಶಿ)-ಜನಸಾಮಾನ್ಯರಿಗೆ ಇನ್ನು ಮುಂದೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಮರಳು ದೊರಕಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡು ಹೊಸ ಮರಳು ನೀತಿ ಜಾರಿಗೊಳಿಸಿದೆ. ನದಿ ಪಾತ್ರದಿಂದ ನಗರ ಮತ್ತು ಪಟ್ಟಣ ಪ್ರದೇಶದ ಜನರಿಗೆ ಪ್ರತಿ ಟನ್‍ಗೆ 700 ರೂ., ಗ್ರಾಮೀಣ ಭಾಗ ದವರಿಗೆ ಪ್ರತಿ ಟನ್‍ಗೆ 300 ರೂ. ದರ ನಿಗದಿಪಡಿಸಿದೆ. ಗ್ರಾಹಕರು ಪ್ರಸ್ತುತ ಪ್ರತಿ ಟನ್ ಮರಳಿಗೆ 4000ದಿಂದ 5000 ರೂ. ನೀಡಿದರೂ ಉತ್ತಮ ಮರಳು ದೊರೆಯು ತ್ತಿರಲಿಲ್ಲ. ಇನ್ನು ಮುಂದೆ ನದಿ…

`ಸುಧರ್ಮಾ’ ಸಂಪಾದಕಿ ಜಯಲಕ್ಷ್ಮಿ, ಹಾಕಿ ಪಟು ಡಾ.ಎಂ.ಪಿ.ಗಣೇಶ್  ಸೇರಿದಂತೆ 119 ಮಂದಿಗೆ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿ ಪ್ರದಾನ
News

`ಸುಧರ್ಮಾ’ ಸಂಪಾದಕಿ ಜಯಲಕ್ಷ್ಮಿ, ಹಾಕಿ ಪಟು ಡಾ.ಎಂ.ಪಿ.ಗಣೇಶ್ ಸೇರಿದಂತೆ 119 ಮಂದಿಗೆ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿ ಪ್ರದಾನ

November 9, 2021

ನವದೆಹಲಿ, ನ. 8- ಮೈಸೂರಿನ ‘ಸುಧರ್ಮಾ’ ಸಂಸ್ಕøತ ಪತ್ರಿಕೆ ಸಂಪಾದಕಿ ಶ್ರೀಮತಿ ಕೆ.ಎಸ್. ಜಯಲಕ್ಷ್ಮಿ, ಕೊಡಗಿನ ಹಾಕಿ ಪಟು ಡಾ. ಮೊಳ್ಳೇರಾ ಪಿ. ಗಣೇಶ್ ಸೇರಿದಂತೆ ನಾಡಿನ 119 ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕರ್ನಾಟಕಕ್ಕೆ ಎರಡು ಪದ್ಮಭೂಷಣ ಮತ್ತು 7 ಪದ್ಮಶ್ರೀ ಪ್ರಶಸ್ತಿಗಳು ಲಭಿಸಿದ್ದು, ಖ್ಯಾತ ವೈದ್ಯ ಡಾ. ಬಿ.ಎಂ. ಹೆಗ್ಡೆ, ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ, ಮೈಸೂರಿನ…

ಬಿಟ್ ಕಾಯಿನ್ ಹಗರಣ ಇಡಿಗೆ ವಹಿಸಲು ಸರ್ಕಾರ  ಬರೆದಿರುವ ಪತ್ರ ಬಿಡುಗಡೆ ಮಾಡಲಿ: ಡಿಕೆಶಿ ಆಗ್ರಹ
News

ಬಿಟ್ ಕಾಯಿನ್ ಹಗರಣ ಇಡಿಗೆ ವಹಿಸಲು ಸರ್ಕಾರ ಬರೆದಿರುವ ಪತ್ರ ಬಿಡುಗಡೆ ಮಾಡಲಿ: ಡಿಕೆಶಿ ಆಗ್ರಹ

November 4, 2021

ಬೆಂಗಳೂರು,ನ.3-ಅಂತಾರಾಷ್ಟ್ರೀಯ ಮಟ್ಟದ ಬಿಟ್ ಕಾಯಿನ್ ಹಗರಣ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಪ್ರಕರಣದ ತನಿಖೆಗೆ ಇಡಿಗೆ ಬರೆದಿರುವ ಪತ್ರವನ್ನು ಬಹಿ ರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ರಾಜ್ಯ ಸರ್ಕಾರ ವನ್ನು ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್, ರಾಜ್ಯ ಸರ್ಕಾರ ಈ ಪ್ರಕರಣ ಕುರಿತು ಆರೋಪಪಟ್ಟಿ ಸಲ್ಲಿಸಿರುವುದಾಗಿ ಹೇಳಿದೆ. ಆರೋಪ ಪಟ್ಟಿ ಸಲ್ಲಿಸಿದ್ದರೆ, ಈ ಪ್ರಕರಣದ ತನಿಖೆಯನ್ನು ಇಡಿಗೆ ನೀಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಬಿಟ್ ಕಾಯಿನ್ ವಿಚಾರವಾಗಿ…

ಆರ್ಯನ್ ಖಾನ್‍ಗೆ ಜಾಮೀನು
News

ಆರ್ಯನ್ ಖಾನ್‍ಗೆ ಜಾಮೀನು

October 29, 2021

ಮುಂಬೈ, ಅ.28-ಐಷಾರಾಮಿ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿ ದಂತೆ ಎನ್‍ಸಿಬಿಯಿಂದ ಬಂಧನಕ್ಕೊಳ ಗಾಗಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಬಾಂಬೆ ಹೈಕೋರ್ಟ್ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನು ಸಿಕ್ಕರೂ ಆರ್ಯನ್ ಖಾನ್ ಇನ್ನೂ ಜೈಲಿನಲ್ಲೇ ಇರಬೇಕಾಗಿದೆ. ಇಂದು ಜಾಮೀನು ಆದೇಶದ ಪ್ರತಿ ಸಿಗದ ಕಾರಣ ಅವರು ಜೈಲಿನಲ್ಲೇ ಉಳಿಯ ಬೇಕಾಗಿದೆ. ನಾಳೆ (ಶುಕ್ರವಾರ) ಆದೇಶದ ಪ್ರತಿ ಸಿಕ್ಕಿ ಬಿಡುಗಡೆಯ ಪ್ರಕ್ರಿಯೆ ಮುಗಿದರೆ ನಾಳೆ ಸಂಜೆ ಅಥವಾ ಶನಿವಾರ ಆರ್ಯನ್ ಬಿಡುಗಡೆಯಾಗಲಿದ್ದಾರೆ…

ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ
News

ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ

October 29, 2021

ಬೆಂಗಳೂರು,ಅ.28(ಕೆಎಂಶಿ)-ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾದ ಮೇಲೆಯೂ ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿ ಮತದಾರರಿಗೆ ಹಣ ಹಂಚುವ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ. ಪ್ರವಾಸ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸಚಿವರಾದ ವಿ.ಸೋಮಣ್ಣ, ಸಿಸಿ ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಏಳೆಂಟು ಮಂತ್ರಿಗಳು ಇವತ್ತಿಗೂ ಚುನಾವಣೆ ನಡೆ ಯುತ್ತಿರುವ ಕ್ಷೇತ್ರಗಳ ಸಮೀಪದ ರೆಸಾರ್ಟ್ ನಲ್ಲಿಯೇ ಇದ್ದಾರೆ ಎಂದು ಆರೋಪಿಸಿದರು. ಮಾಹಿತಿ ಪ್ರಕಾರ ಪ್ರತಿ ಹಳ್ಳಿಗೆ 30ರಿಂದ 40 ಲಕ್ಷ…

ಉಪ ಸಮರದಲ್ಲಿ ಸರ್ಕಾರದಿಂದ ಅಧಿಕಾರ ದುರುಪಯೋಗ
News

ಉಪ ಸಮರದಲ್ಲಿ ಸರ್ಕಾರದಿಂದ ಅಧಿಕಾರ ದುರುಪಯೋಗ

October 26, 2021

ಬೆಂಗಳೂರು, ಅ.25 (ಕೆಎಂಶಿ)- ರಾಜ್ಯ ಸರ್ಕಾರ ಉಪಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಜನ ಗಮನಿಸುತ್ತಿದ್ದು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಇಡೀ ಮಂತ್ರಿಮಂಡಲ ಉಪಚುನಾ ವಣೆಗಳಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ, ವಿಧಾನಸೌಧದಲ್ಲಿ ಒಬ್ಬ ಮಂತ್ರಿಯೂ ಇಲ್ಲ, ವಿಧಾನಸೌಧದ ಕಚೇರಿಗಳಿಗೆ ಹೋಗಿ ನೋಡಿ, ಮಂತ್ರಿಗಳು ಅಧಿಕಾರಿಗಳ ಜತೆ ಸಭೆ ನಡೆಸುತ್ತಿಲ್ಲ, ರಾಜ್ಯದ ಜನರ ಕಷ್ಟದ ಬಗ್ಗೆ ಚರ್ಚೆ ಇಲ್ಲ, ಅವರ ಬಗ್ಗೆ ಕಾಳಜಿ ಇಲ್ಲ. ಅವರಿಗೆ…

ಮತ್ತೆ ಅಧಿಕಾರಕ್ಕೆ ಬಂದರೆ ತಲಾ 10 ಕೆಜಿ ಅಕ್ಕಿ ಉಚಿತ
News

ಮತ್ತೆ ಅಧಿಕಾರಕ್ಕೆ ಬಂದರೆ ತಲಾ 10 ಕೆಜಿ ಅಕ್ಕಿ ಉಚಿತ

October 26, 2021

ಬೆಂಗಳೂರು, ಅ.25(ಕೆಎಂಶಿ)-ಮುಂಬರುವ ವಿಧಾನಸಭಾ ಚುನಾ ವಣೆಯಲ್ಲಿ ನಾವೇ ಅಧಿಕಾರಕ್ಕೆ ಬಂದು, ಬಿಪಿಎಲ್ ಕುಟುಂಬದ ಪ್ರತಿ ಯೂನಿಟ್‍ಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವುದಾಗಿ ವಿಧಾನಸಭೆ ಪ್ರತಿಪಕ್ಷದನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಉಪಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರು ತ್ತದೆ ಎನ್ನುವ ಬದಲು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರಲ್ಲದೆ, ಉಚಿತ ಅಕ್ಕಿ ಅಲ್ಲದೆ ಇತರ ಸೌಲಭ್ಯಗಳನ್ನೂ ಕಲ್ಪಿಸುವುದಾಗಿ ತಿಳಿಸಿ ದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನ ಭಾಗ್ಯದ ಅಕ್ಕಿ ಪ್ರಮಾಣವನ್ನು 5 ಕೆ.ಜಿ.ಗೆ ಇಳಿಸಿ, ನೀವು…

1 53 54 55 56 57 73
Translate »